ಬಡ ಹಿಂದೂ ಹೆಣ್ಣು ಮಗಳ ಮದುವೆಗೆ ಮುಸ್ಲಿಂ ಯುವಕರ ನೇತೃತ್ವ!

Spread the love

ಬಡ ಹಿಂದೂ ಹೆಣ್ಣು ಮಗಳ ಮದುವೆಗೆ ಮುಸ್ಲಿಂ ಯುವಕರ ನೇತೃತ್ವ!

ಉಪ್ಪಿನಂಗಡಿ(ಪ್ರಜಾವಾಣಿ): ಪರಸ್ಪರ ಪ್ರೀತಿಸಿ, ಮದುವೆ ಹಂತಕ್ಕೆ ತಲುಪಿ, ಅಸಹಾಯಕ ಸ್ಥಿತಿಯಲ್ಲಿದ್ದ ಬಡ ಕುಟುಂಬದ ಹೆಣ್ಣು ಮಗಳೊಬ್ಬಳ ಮದುವೆಯನ್ನು ಆಕೆಯ ನೆರೆಮನೆಯ ಮುಸ್ಲಿಂ ಕುಟುಂಬದ ಸದಸ್ಯರು ಎಲ್ಲಾ ಕೊರತೆಗಳನ್ನು ನೀಗಿಸಿ, ಆಸರೆಯಾಗಿ ನಿಂತು ನೆರವೇರಿಸಿ ಮಾನವೀಯತೆ ಮೆರೆದ ಘಟನೆಯೊಂದು ಸೋಮವಾರ ಉಪ್ಪಿನಂಗಡಿ ಸಮೀಪದ ಕರುವೇಲು ಎಂಬಲ್ಲಿ ನಡೆದಿದೆ.

ಕರುವೇಲು ನಿವಾಸಿ ಸುಂದರ ಅವರ ಮಗಳಾದ ರೇವತಿ ಫ್ಯಾಕ್ಟರಿ ಯೊಂದರಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಯುವತಿ. ಅವರಿಗೆ ಸಾಲ್ಮರದ ಯುವಕ ಶರತ್ ಎಂಬುವರೊಡನೆ ಪ್ರೇಮಾಂಕು ರವಾಗಿತ್ತು. ಮುಂದೆ ನಿಂತು ಮದುವೆ ನಡೆಸಲು ತನ್ನವರು ಎಂದು ಹೇಳಿಕೊಳ್ಳಲು ಯಾರೂ ಇಲ್ಲವಾದಾಗ ಕಂಗೆಟ್ಟು ಅಸಹಾಯಕ ಸ್ಥಿತಿಯಲ್ಲಿದ್ದ ಕುಟುಂಬಕ್ಕೆ ನೆರೆಮನೆ ಮುಸ್ಲಿಂ ಕುಟುಂಬ ಸಹಾಯಹಸ್ತ ಚಾಚಿ ಮದುವೆ ಮಾಡಿ ಮಾನವೀಯತೆ ಮೆರೆದರು.

ಜಾತಿ, ಮತದ ನಂಟು ಇಲ್ಲದಿ ದ್ದರೂ ಮಾನವೀಯತೆ ನಂಟಿನಿಂದ ಹುಡುಗಿಯ ಪರವಾಗಿ ಹುಡುಗನ ಮನೆ ಯವರನ್ನು ಮಾತನಾಡಿಸಿ, ಮದುವೆಗೆ ದಿನ ನಿಗದಿ ಪಡಿಸಿದರು. ಅಕ್ಕಪಕ್ಕದ ಮನೆಗಳಿಂದ ಅಡಿಕೆ ಸೋಗೆಯನ್ನು ತಂದು ಚಪ್ಪರ ಹಾಕಿದರು. ಕರುವೇಲು ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಲತೀಫ್ ಅವರ ಮನೆಯಲ್ಲಿ ಮದುಮಗಳನ್ನು ಸಿಂಗರಿಸಿ ಅವರ ಜಾತಿ ನೆಲೆಗಟ್ಟಿನ ಸಂಪ್ರದಾಯದಂತೆ ವಿವಾಹ ಶಾಸ್ತ್ರವನ್ನು ನೆರವೇರಿಸಲಾಯಿತು.

ಮಾಂಗಲ್ಯ ಸೂತ್ರ, ಎರಡು ಜೊತೆ ಮದುಮಗಳ ದಿರಿಸು ಒಳಗೊಂಡಂತೆ ಮದುವೆ ಅಂಗವಾಗಿ 150 ಮಂದಿಗೆ ಮಾಂಸದೂಟ ಸಿದ್ಧಪಡಿಸಿ ನೆಂಟರಿಷ್ಟರಿಗೆ ಉಣಬಡಿಸಲಾಯಿತು. ಈ ಎಲ್ಲಾ ಕಾರ್ಯಕ್ಕೆ ತಗುಲಿದ ವೆಚ್ಚವನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷ ಲತೀಫ್, ಶಬೀರ್ ಕುಂಡಾಜೆ, ಕಬೀರ್ ಕುಂಡಾಜೆ, ಅನಿತಾ ಬೀಡಿ ಸಂಸ್ಥೆಯ ಪುತ್ತುಮೋನು, ಅಶ್ರಫ್ ಮೊದಲಾವರು ಭರಿಸಿ ಮದುವೆ ಕಾರ್ಯ ನೆರವೇರಿಸಿದರು.

ಹೆಣ್ಣು ಮಗಳೊಬ್ಬಳ ಸಂಕಷ್ಟ ಕೇಳುವವರಿಲ್ಲ ಎಂಬ ಅಸಹಾಯಕ ಭಾವನೆ ತೊಲಗಿಸಿ ನಾವೆಲ್ಲಾ ನಿಮ್ಮ ಬಂಧುಗಳೇ ಎಂಬಂತೆ ಕಷ್ಟದಲ್ಲಿ ಸಹಕರಿಸಿ ಮಾನವೀಯತೆ ಮೆರೆದ ಕರುವೇಲು ಯುವಕರ ಕಾರ್ಯ ವ್ಯಾಪಕ ಶ್ಲಾಘನೆಗೆ ಒಳಗಾಗಿದೆ.


Spread the love