ಬಾಲಯೇಸುವಿನ ಪುಣ್ಯಕ್ಷೇತ್ರ – ಬಿಕರ್ನಕಟ್ಟೆ – ಮಂಗಳೂರು ಬಲಿಪೂಜೆಗಳು ಆರಂಭ 

Spread the love

ಬಾಲಯೇಸುವಿನ ಪುಣ್ಯಕ್ಷೇತ್ರ – ಬಿಕರ್ನಕಟ್ಟೆ – ಮಂಗಳೂರು ಬಲಿಪೂಜೆಗಳು ಆರಂಭ 

ಬಾಲಯೇಸುವಿನ ಪುಣ್ಯಕ್ಷೇತ್ರವು 5 ತಿಂಗಳ ನಂತರ ಜನರ ಪ್ರಾರ್ಥನೆಗಾಗಿಯೇ ತೆರೆಯಲ್ಪಟ್ಟಿತು.

ಕೊವಿಡ್ – 19 ವೈರಸಿನ ಕಾರಣ ಕಳೆದ 5 ತಿಂಗಳಿನಿಂದ ಈ ಪುಣ್ಯಕ್ಷೇತ್ರದಲ್ಲಿ ನಡೆಯುತ್ತಿದ್ದಂತಹ ಎಲ್ಲಾ ಪ್ರಾರ್ಥನೆಗಳು ಹಾಗೂ ಇತರ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ನಮ್ಮ ಮಾನ್ಯ ಸರಕಾರದ ನಿಯಮ ಮತ್ತು ಕಾಯೆದೆಗಳನ್ನು ಪಾಲಿಸುತ್ತಾ ನವೇನ ಪೂಜೆಗಳು ಪ್ರಾರಂಭಗೊಂಡವು.

ಇಂದಿನಿಂದ ಪ್ರತೀ ಗುರುವಾರ ಬೆಳಿಗ್ಗೆ 6.00, 7.30, 10.30 ಹಾಗೂ ಸಾಯಂಕಾಲ 6.00 ಗಂಟೆಗೆ ದಿವ್ಯ ಬಲಿಪೂಜೆಗಳು ನಡೆಯಲಿವೆ. ಬಾಲಯೇಸುವಿನ ಪುಣ್ಯಕ್ಷೇತ್ರದಲ್ಲಿ ಪ್ರತೀ ಬಲಿಪೂಜೆಗಳು ನಡೆದ ನಂತರ ಎಲ್ಲಾ ಸ್ಥಳವನ್ನು ಸ್ಯಾನಿಟೈಜ್ ಮಾಡಲಾಗುವುದು. ಇಂದಿನ ಪೂಜೆಯಲ್ಲಿ ಪ್ರತ್ಯೇಕವಾಗಿ ನಮಗೆ ಸೇವೆಯನ್ನು ನೀಡುತ್ತಿರುವ ವೈದ್ಯರು, ದಾದಿಗಳು, ಪೋಲಿಸ್ ಸಿಬ್ಬಂದಿ ಹಾಗೂ ಕೊವಿಡ್ – 19 ವಾರಿಯರ್ಸ್ ಗಳಿಗಾಗಿ ವಿಶೇಷ ಪ್ರಾರ್ಥನೆ ಮಾಡಲಾಗುವುದು. ಅ. ವಂ. ಚಾರ್ಲ್ಸ್ ಸೆರಾವೊ, ಮಠಾದಿಪತಿಗಳು ಹಾಗೂ ಅ. ವಂ. ರೋವೆಲ್ ಡಿ’ಸೋಜಾ, ಪುಣ್ಯಕ್ಷೇತ್ರದ ನಿರ್ದೇಶಕರು, ಪುಣ್ಯಕ್ಷೇತ್ರದ ಆಗುಹೋಗುಗಳ ಬಗ್ಗೆ  ಪ್ರಕಟಣೆಯಲ್ಲಿ ತಿಳಿಸಿದರು.


Spread the love