ಬಿಜೆಪಿಗೆ ಮತ ಹಾಕಿದರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ: ಸಿದ್ದರಾಮಯ್ಯ

Spread the love

ಬಿಜೆಪಿಗೆ ಮತ ಹಾಕಿದರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ: ಸಿದ್ದರಾಮಯ್ಯ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಭಾರತದ ಪ್ರಧಾನಿ ಆಗಬೇಕೆಂದು ಪಾಕಿಸ್ತಾನ ಬಯಸುತ್ತಿದೆ ಎಂಬ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿಕೆಗೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿಗೆ ಮತ ಹಾಕಿದರೆ, ನೀವು ಪಾಕಿಸ್ತಾನಕ್ಕೆ ಮತ ಚಲಾಯಿಸುತ್ತಿದ್ದೀರಿ ಎಂದರ್ಥ ಎಂದಿದ್ದಾರೆ.

ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಬಿಜೆಪಿ ಮತ್ತು ನರೇಂದ್ರ ಮೋದಿ ಅವರನ್ನು ಬೆಂಬಲಿಸುತ್ತಿರುವುದಕ್ಕೆ ಕಾರಣವೇನು? ಎಂದು ಸಿದ್ದರಾಮಯ್ಯ ಟ್ವೀಟ್‌ ಮೂಲಕ ಪ್ರಶ್ನಿಸಿದ್ದಾರೆ.

ಪ್ರಸ್ತುತ ಪಾಕಿಸ್ತಾನ ಬಿಜೆಪಿಯನ್ನು ಬೆಂಬಲಿಸುವ ಮೂಲಕ ಮುಂದೆ ಭಾರತವನ್ನು ಘಾಸಿಗೊಳಸಲಿದೆ. ಇದು ಹೇಗೆಂದಕೆ ಥೇಟ್‌ ಅಮೆರಿಕಕ್ಕೆ ರಷ್ಯಾ ಮಾಡಿದಂತೆ ಎಂದು ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ನರೇಂದ್ರ ಮೋದಿ ಅವರಂತೆ ರಾಜಕೀಯ ಹಿತಾಸಕ್ತಿಗಾಗಿ ರಾಷ್ಟ್ರೀಯ ಭದ್ರತೆಯನ್ನು ಕಾಂಗ್ರೆಸ್‌ ಎಂದೂ ಬಲಿ ಕೊಟ್ಟಿಲ್ಲ. ಬಿಜೆಪಿ ರಾಜಕೀಯದಾಟದಿಂದ ನಮ್ಮ ವೀರಯೋಧರನ್ನು ಕಳೆದುಕೊಂಡೆವು ಎಂದಿರುವ ಸಿದ್ದರಾಮಯ್ಯ ಬಿಜೆಪಿಗೆ ಮತ ಹಾಕಿದರೆ, ನೀವು ಪಾಕಿಸ್ತಾನಕ್ಕೆ ಮತ ಹಾಕುತ್ತಿದ್ದೀರಿ ಎಂದೇ ಅರ್ಥ ಎಂದು ಪುನರುಚ್ಛರಿಸಿದ್ದಾರೆ.

ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ನರೇಂದ್ರ ಮೋದಿ ಮತ್ತು ಬಿಜೆಪಿ ಪರವಾಗಿ ಹೇಳಿಕೆ ನೀಡಿರುವ ಹಿನ್ನೆಲೆ ಪ್ರತಿಪಕ್ಷಗಳು ಭಾರಿ ಟೀಕೆ ವ್ಯಕ್ತ ಪಡಿಸುತ್ತಿವೆ. ‘ನರೇಂದ್ರ ಮೋದಿ ಅವರು ಭಾರತದ ಪ್ರಧಾನಿ ಆಗಬೇಕು ಎಂಬುದನ್ನು ಪಾಕಿಸ್ತಾನ ಬಯಸುತ್ತದೆ ಎಂಬ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿಕೆಯಿಂದಾಗಿ ಶತ್ರುರಾಷ್ಟ್ರದ ಬೆಂಬಲಕ್ಕೆ ಇರುವವರು ಯಾರು ಎಂಬುದು ಸ್ಪಷ್ಟವಾಗಿದೆ’ ಎಂದು ಸಿಎಂ ಕುಮಾರಸ್ವಾಮಿ ಟ್ವೀಟ್‌ನಲ್ಲಿ ತಿರುಗೇಟು ನೀಡಿದ್ದಾರೆ.


Spread the love