ಬಿ.ಜೆಪಿ. ಸೋಲಿಸುವುದೇ ನಮ್ಮ ಗುರಿ- ಜೆಡಿಎಸ್

Spread the love

ಬಿ.ಜೆಪಿ. ಸೋಲಿಸುವುದೇ ನಮ್ಮ ಗುರಿ- ಜೆಡಿಎಸ್

ಜೆಡಿಎಸ್ ದಕ್ಷಿಣ ವಿಧಾನಸಭಾ ಕ್ಷೇತ್ರದ ವತಿಯಿಂದ ಚುನಾವಣಾ ಪೂರ್ವಭಾವಿ ಸಭೆಯನ್ನು ಜಿಲ್ಲಾ ಕಛೇರಿಯಲ್ಲಿ ಇಂದು ಜರುಗಿತು. ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಪಕ್ಷದ ಜಿಲ್ಲಾಧ್ಯಕ್ಷರಾದ ಶ್ರೀ ಮಹಮ್ಮದ್ ಕುಂಞಯವರು ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಸೀಟು ಹೊಂದಾಣಿಕೆÀಯಾಗಿದ್ದು ಈ ಜಿಲ್ಲೆಯಲ್ಲಿ ನಾವು ಕಾಂಗ್ರಸ್ಸ್ ಅಭ್ಯರ್ಥಿಯನ್ನು ಸಂಪೂರ್ಣವಾಗಿ ಬೆಂಬಲಿಸಬೇಕೆಂದು ರಾಜ್ಯದ ಹೈಕಮಾಂಡ್ ಆದೇಶಿಸಿದೆ.  ಈ ಪ್ರಯುಕ್ತ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಚುನಾವಣಾ ಪೂರ್ವಭಾವಿ ಸಭೆಯು ನಡೆಯುತ್ತಿದ್ದು ಪಕ್ಷದ ಕಾರ್ಯಕರ್ತರು ಹುಮ್ಮನಸ್ಸಿನಿಂದ ಭಾಗವಹಿಸುತ್ತಿದ್ದು ನಮ್ಮ ಅಂತರಿಕ ಚಿಂತನೆ ಭಾವನೆಗಳನ್ನು ಬದಿಗಿಟ್ಟು ಪಕ್ಷದ ಕಾರ್ಯಕರ್ತರು ಬಿಜಿಪಿಯನ್ನು ಸೋಲಿಸುವ ಗುರಿ ಹೊಂದಿರಬೇಕೆಂದು ಕರೆಕೊಟ್ಟರು.  ಮಾತ್ರವಲ್ಲ ಜಿಲ್ಲಾ ಮಟ್ಟದಿಂದ ತಾಲೂಕ ಮಟ್ಟದವರೆಗೆ ಜಂಟಿ ಪಕ್ಷಗಳ ಪ್ರಚಾರ ಸಮಿತಿಗಳನ್ನು ರಚಿಸಲಾಗುವುದು ಎಂದು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ವಸಂತ ಪೂಜಾರಿಯವರು ಮಾತನಾಡಿ, ಕಳೆದ 9 ತಿಂಗಳಿನಲ್ಲಿ ನಮ್ಮ ಸರಕಾರವು ಈ ಜಿಲ್ಲೆಯಲ್ಲಿ ಮೂರು ತಾಲೂಕುಗಳನ್ನು ಘೋಷಿಸಿದ್ದು, ಅನುದಾನವನ್ನು ಬಿಡುಗಡೆ ಮಾಡಿದೆ.  ಸರಕಾರದ ಹಲವು ಜನಪರ ಯೋಜನಗಳನ್ನು ಘೋಷಿಸಿ ಜನಸಾಮಾನ್ಯರಿಗೆ ತಲುಪುವಂತೆ ಉತ್ತಮ ಸೇವೆಯನ್ನು ನೀಡಿದೆ. ಪ್ರಸ್ತುತ ಲೋಕ ಸಭಾ ಸದಸ್ಯರ ಕಾರ್ಯ ವೈಫಲ್ಯಗಳನ್ನು ಜನ ಸಾಮಾನ್ಯರಿಗೆ ಮನವರಿಕೆ ಮಾಡಿ ನಮ್ಮ ಸರ್ವ ಸಮ್ಮತ ಅಭ್ಯರ್ಥಿಯನ್ನು ಗೆಲ್ಲಿಸೋಣ ಎಂದು ಹೇಳಿದರು.  ಪಕ್ಷದ ಮುಖಂಡರಾದ ಪ್ರವೀಣ್ ಚಂದ್ರ ಜೈನ್, ರಾಂ ಗಣೇಶ್, ಸುಶೀಲ್ ನೊರೊನ್ಹ ಹೈದರ್ ಪರ್ತಿಪ್ಪಾಡಿ, ಪುಷ್ಪರಾಜನ್, ಸುಮತಿ ಹೆಗ್ಡೆ, ರತ್ನಾಕರ್ ಸುವರ್ಣ, ಅಕ್ಷಿತ್ ಸುವರ್ಣ, ಮುಂತಾದವರು ಮುಂದಿನ ಚುನಾವಣೆಯ ಬಗ್ಗೆ ಕೂಲಂಕುಷವಾಗಿ ವಿವರಿಸಿದರು.

ಪಕ್ಷದ ಮುಂದಾಳುಗಳಾದ ಗೋಪಾಲಕೃಷ್ಣ ಅತ್ತಾವರ, ಶ್ರೀನಾಥ್ ರೈ, ರಘುನಾಥ್, ಇಝಾ ಬಜಾಲ್, ಉಪೇಂದ್ರ, ಹಮೀದ್, ಲತೀಫ್, ಮಹಮ್ಮದ್, ಮಧುಸೂದನ್, ವಿನ್ಸೆಂಟ್ ಡಿಸೋಜ, ಫ್ರಾನ್ಸಿಸ್ ಫೆರ್ನಾಂಡಿಸ್, ಡಿ.ಪಿ. ಹಮ್ಮಬ್ಬ, ಪರಮೇಶ್ವರ, ಫೈಜಲ್, ಹರೀಫ್, ಸೀನನ್, ಮಾದವ ಕುಲಾಲ್ ಮಹಿಳಾ ಮುಂದಾಳುಗಳಾದ ಭಾರತಿ ಪುಷ್ಪರಾಜನ್, ಚೂಡಮಣಿ, ಶಾಲಿನಿ, ಕವಿತ ಮೋಹಿನಿ, ಉಪಸ್ಥಿತರಿದ್ದರು.


Spread the love