ಬೀಜಾಡಿ: ಸರ್ವಿಸ್ ಫೆ.10ರಿಂದ ಕಾಮಗಾರಿ ಆರಂಭ; ತಪ್ಪಿದ್ದಲ್ಲಿ ಪ್ರತಿಭಟನೆ ಎಚ್ಚರಿಕೆ

Spread the love

ಬೀಜಾಡಿ: ಸರ್ವಿಸ್ ಫೆ.10ರಿಂದ ಕಾಮಗಾರಿ ಆರಂಭ; ತಪ್ಪಿದ್ದಲ್ಲಿ ಪ್ರತಿಭಟನೆ ಎಚ್ಚರಿಕೆ

ಕುಂದಾಪುರ: ಬೀಜಾಡಿ ಸರ್ವಿಸ್ ರೋಡ್ ಕಾಮಗಾರಿ ವಿಳಂಬ ದೋರಣೆ ಕುರಿತು ಹಲವು ದಿನಗಳಿಂದ ಹೋರಾಟ ಸಮಿತಿ ನೇತೃತ್ವದಲ್ಲಿ ಅನೇಕ ಸಭೆಗಳಾಗಿದ್ದವು. ಇದರ ದೂರಿನಂತೆ ಫೆ.2 ರಂದು ಉಡುಪಿ ಜಿಲ್ಲಾಧಿಕಾರಿ ಪ್ರೀಯಾಂಕ ಮೇರಿ ಫ್ರಾನಿಸ್ಸ್ ನೇತೃತ್ವದ ನವಯುಗ ತಂಡ ಸ್ಥಳ ಪರಿಶೀಲನೆ ನಡೆಸಿ ಫೆ,4 ರಂದು ಕಾಮಗಾರಿ ಕೃಗೊತ್ತಿಕೊಳ್ಳುವಂತೆ ಡಿಸಿಯವರು ಅದೇಶಿಸಿದ್ದರು.

ಸೋಮವಾರ ಸಂಜೆ ಕುಂದಾಪುರ ಪ್ರಭಾರ ಎಸಿ ಅರುಣಾಪ್ರಭಾ ನೇತೃತ್ವದಲ್ಲಿ ಎನ್ಎಚ್ಐನ ಯೋಜನಾ ನಿರ್ದೇಶಕನ ಸ್ಯಾಮ್ ಸನ್ ವಿಜಯಕುಮಾರ್ ಮತ್ತು ನವಯುಗ ಚೀಪ್ ಪ್ರೋಜೆಕ್ಟ್ ಮೇನೆಜರ್ ಶಂಕರರಾವ್, ಎಂಜಿನಿಯರ್ ರಾಘವೇಂದ್ರ ಇವರನ್ನೋಳಗೊಂಡ ತಂಡ ಬೇಟಿ ನೀಡಿ ಬಾಕಿ ಉಳಿದ ಕಾಮಗಾರಿಗಳ ಬಗ್ಗೆ ಸವರ್ೆ ಕಾರ್ಯ ನಡೆಸಿ ಫೆ.10ರಿಂದ ಬೀಜಾಡಿ ಸರ್ವಿಸ್ ರಸ್ತೆ ಕಾಮಗಾರಿ ನಡೆಯುತ್ತದೆ ಎಂದು ತಿಳಿಸಿದರು.

ಎನ್ಎಚ್ಐನ ಯೋಜನಾ ನಿರ್ದೇಶಕನ ಮೇಲೆ ಸ್ಥಳೀಯರ ಅಕ್ರೋಶ: ರಾಷ್ಟ್ರೀಯ ಹೆದ್ದಾರಿ ಅರೆಬರೆ ಕಾಮಗಾರಿಯಿಂದ ಅಕ್ರೋಶಗೊಂಡ ಬೀಜಾಡಿ ಸರ್ವಿಸ್ ರೋಡ್ ಹೋರಾಟ ಸಮಿತಿ ಮುಖಂಡ ನಾರಾಯಣ ಬಂಗೇರ ಬೀಜಾಡಿ ಇವರು, 2011 ರಲ್ಲಿ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. 2019 ಬಂದರೂ ಕಾಮಗಾರಿ ಅಗದೇ ಇನ್ನೂ ಸಾರ್ವಜನಿಕರ ಮೇಲೆ ಚೆಲ್ಲಾಟ ಅಡುತ್ತಿದ್ದೀರಾ. ದಿನೇ ದಿನೇ ಅಪಘಾತಗಳ ಸಂಖ್ಯೆ ಪ್ರಮಾಣ ಹೆಚ್ಚಾಗುತ್ತಿದೆ. ನವಯುಗ ಕಂಪನಿಯ ಹಣಕ್ಕೆ ನೀವು ತಲಬಾಗಿರಬಹುದು ಎಂಬ ನಂಬಿಕೆ ಮೂಡುತ್ತಿದೆ ಎಂದು ಅಕ್ರೋಶ ವ್ಯಕ್ತ ಪಡಿಸಿದರು.

ಫೆ.11ಕ್ಕೆ ಪ್ರತಿಭಟನೆ: ಪದೇ ಪದೇ ಎಲ್ಲಾ ಅಧಿಕಾರಿಗಳ ಬಾಯಿಯಿಂದಲೂ ಇದೇ ಉತ್ತರ ಕಂಡು ಬೇಸತ್ತುಹೋಗಿದ್ದೇವೆ. ಸಾರ್ವಜನಿಕರ ಕಷ್ಟಗಳಿಗೆ ಜನಪ್ರತಿನಿಧಿಗಳೂ ಸೇರಿದಂತೆ ಯಾವುದೇ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಕೇವಲ ಹರಕೆ ಉತ್ತರ ನೀಡಿ ಹೋಗುತ್ತಾರೆ. ಇದರಿಂದ ನಮ್ಮ ನ್ಯಾಯ ಪರ ಹೋರಾಟ ನಿಲ್ಲುವುದಿಲ್ಲ. ಫೆ.10ರಿಂದ ಕಾಮಗಾರಿ ಆರಂಭವಾಗದಿದ್ದಲ್ಲಿ ಫೆ.11ಕ್ಕೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ. ಇದಕ್ಕೆ ಜಿಲ್ಲಾ ಆಡಳಿತ ಪೂರ್ಣ ಬೆಂಬಲ ನೀಡಬೇಕು ಎಂದು ಅಗ್ರಹಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಲತಾ ಸುರೇಶ ಶೆಟ್ಟಿ, ತಾಲೂಕು ಪಂಚಾಯಿತಿ ಸದಸ್ಯೆ ವೈಲೆಟ್ ಬೆರೆಟ್ಟೂ, ಬೀಜಾಡಿ ಗ್ರಾಮ ಪಂಚಾಯತಿ ಸದಸ್ಯ ವಾದಿರಾಜ ಹೆಬ್ಬಾರ್, ಬೀಜಾಡಿ ಸರ್ವಿಸ್ ರೋಡ್ ಹೋರಾಟ ಸಮಿತಿ ಮುಖಂಡ ರಾಜು ಬೆಟ್ಟಿನ ಮನೆ, ಅಣ್ಣಪ್ಪ ಬೆಟ್ಟಿನಮನೆ, ನಾರಾಯಣ ಭಂಡಾರಿ, ಅನಂತಕೃಷ್ಣ ಉಪಾಧ್ಯಾಯ, ರಾಜೇಶ್ ಕಾವೇರಿ, ಸತೀಶ ಶೆಟ್ಟಿ ವಕ್ವಾಡಿ, ಬೀಜಾಡಿ ಮಿತ್ರ ಸಂಗಮ ಸಂಸ್ಥೆಯ ಅಧ್ಯಕ್ಷ ಬಿ.ಜಿ.ನಾಗರಾಜ ಬೀಜಾಡಿ, ಮೂಡುಗೋಪಾಡಿ ರಿಫಾಯಿ ಜುಮ್ಮ ಮಸೀದಿಯ ಪ್ರಧಾನ ಕಾರ್ಯದರ್ಶಿ ಬಿ.ಎಮ್,ನಾಸೀರ್, ಬೀಜಾಡಿ ರಿಕ್ಷಾ ಚಾಲಕರ ಸಂಘದ ಪ್ರಮುಖ ದಿನೇಶ್ ಹಲ್ತೂರು, ಉದ್ಯಮಿ ಗಳಾದ ಸುರೇಶ್ ಬೆಟ್ಟಿನ್, ಜಯಕರ ಶೆಟ್ಟಿ, ಮಹೇಶ್ ಮಟ್ಟಿ , ಕರುಣಾಕರ ಶೆಟ್ಟಿ ಕೆದೂರು, ಮಹೇಶ್ ಭಂಡಾರಿ, ಸುಭಾಷ್ ಚಂದ್ ಮೊದಲಾದವರೂ ಇದ್ದರು.


Spread the love