ಬೀದಿ ವ್ಯಾಪರಸ್ಥರ ಜೀವನೋಪಾಯದ ಬಗ್ಗೆ ಅರಿವಿದೆ: ಮೋಹನ್‌ದಾಸ್ ಶೆಣೈ

Spread the love

ಬೀದಿ ವ್ಯಾಪರಸ್ಥರ ಜೀವನೋಪಾಯದ ಬಗ್ಗೆ ಅರಿವಿದೆ: ಮೋಹನ್‌ದಾಸ್ ಶೆಣೈ
 

ಕುಂದಾಪುರ: ಈಗಾಗಲೇ 75 ಬೀದಿಬದಿ ವ್ಯಾಪರಸ್ಥರಿಗೆ ಪುರಸಭೆಯಿಂದ ವ್ಯಾಪಾರ ನಡೆಸಲು ಪರವಾನಿಗೆ ಕೊಡಲಾಗಿದೆ. ಪರವಾನಿಗೆ ಇರುವ ವ್ಯಾಪರಸ್ಥರನ್ನು ನಾವು ಎತ್ತಂಗಡಿ ಮಾಡಿಲ್ಲ್ಲ. ಕಳೆದ ಐದಾರು ತಿಂಗಳುಗಳಿಂದ ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ಪಾನಿಪುರಿ ಮತ್ತು ಫಾಸ್ಟ್ಫುಡ್ ಅಂಗಡಿಗಳು ವ್ಯಾಪಕವಾಗಿ ತಲೆ ಎತ್ತುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುವ ದಿಸೆಯಲ್ಲಿ ಪರವಾನಿಗೆ ಇಲ್ಲದ ಬೀದಿ ವ್ಯಾಪಾರಿಗಳನ್ನು ಎಬ್ಬಿಸಿದ್ದೇವೆ ಎಂದು ಕುಂದಾಪುರ ಪುರಸಭಾ ಅಧ್ಯಕ್ಷ ಮೋಹನ್‌ದಾಸ್ ಶೆಣೈ ಸ್ಪಷ್ಟನೆ ನೀಡಿದ್ದಾರೆ.

ಬೀದಿ ವ್ಯಾಪಾರಸ್ಥರನ್ನು ಒಕ್ಕಲೆಬ್ಬಿಸಿರುವ ಕುರಿತಾಗಿ ಮಾಧ್ಯಮಗಳಿಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರಿ ಆಸ್ಪತ್ರೆ ಮತ್ತು ಜೂನಿಯರ್ ಕಾಲೇಜು ಮುಂಭಾಗದಲ್ಲಿ ಅವಕಾಶ ಕೊಡಬಾರದೆಂದು ಕಾಲೇಜು ಹಾಗೂ ಆಸ್ಪತ್ರೆಯಿಂದ ಮನವಿ ಬಂದಿದೆ. ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎನ್ನುವ ಉದ್ದೇಶದಿಂದ ಎಲ್ಲಾ ಸದಸ್ಯರು ಜೊತೆಗೂಡಿ ಈ ತೀರ್ಮಾನ ಕೈಗೊಂಡಿದ್ದೇವೆ. ಇದರಲ್ಲಿ ವಯಕ್ತಿಕ ಉದ್ದೇಶ ಏನೂ ಇಲ್ಲ ಎಂದರು.

ಬೀದಿ ವ್ಯಾಪಾರಸ್ಥರ ಜೀವನೋಪಾಯದ ಬಗ್ಗೆ ನಮಗೆ ಅರಿವಿದೆ. ಈಗಾಗಲೇ ಶಾಸಕರು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಪುರಸಭಾ ವ್ಯಾಪ್ತಿಯ ಯಾವುದಾದರೊಂದು ಸ್ಥಳದಲ್ಲಿ ಜಾಗ ಕೊಡುವ ವ್ಯವಸ್ಥೆಯನ್ನು ಮಾಡಲು ಪ್ರಯತ್ನಿಸುತ್ತೇವೆ. ಕುಂದಾಪುರ ಬೆಳೆಯುತ್ತಿರುವ ನಗರವಾದ್ದರಿಂದ ಪಾರ್ಕಿಂಗ್ ಸಮಸ್ಯೆ ಸಾಕಷ್ಟಿವೆ. ಬೀದಿ ವ್ಯಾಪರಸ್ಥರನ್ನು ಎತ್ತಂಗಡಿ ಮಾಡಿರುವ ಬಗ್ಗೆ ನಮ್ಮ ಮೇಲೆ ಟೀಕೆಗಳು ವ್ಯಕ್ತವಾಗುತ್ತಿವೆ. ಆದರೆ ಪಾಸ್ಟ್ಫುಡ್, ಗೋಲ್ಗೊಪ್ಪದಿಂದ ಆರೋಗ್ಯಕ್ಕೆ ಸಮಸ್ಯೆಯಾದರೆ ಟೀಕಿಸಿದವರೇ ನಮ್ಮನ್ನು ಮತ್ತೆ ದೂರುತ್ತಾರೆ. ಹೀಗಾಗಿ ಸರ್ವಾಜನಿಕರಿಗೆ ತೊಂದರೆಯಾಗದಂತೆ ನಾವು ಕ್ರಮಕೈಗೊಂಡಿದ್ದೇವೆ ಎಂದರು.


Spread the love
Subscribe
Notify of

0 Comments
Inline Feedbacks
View all comments