ಬೆಂಗಳೂರು –ಮಣಿಪಾಲ ಕೆ.ಎಸ್.ಆರ್.ಟಿ.ಸಿ ಕ್ಲಬ್ ಕ್ಲಾಸ್ ಮಲ್ಟಿ ಆಕ್ಸ್ಲ್ ವೋಲ್ವೋ ಬಸ್ ಪ್ರಾರಂಭ

Spread the love

ಬೆಂಗಳೂರು –ಮಣಿಪಾಲ ಕೆ.ಎಸ್.ಆರ್.ಟಿ.ಸಿ ಕ್ಲಬ್ ಕ್ಲಾಸ್ ಮಲ್ಟಿ ಆಕ್ಸ್ಲ್ ವೋಲ್ವೋ ಬಸ್ ಪ್ರಾರಂಭ

ಮಂಗಳೂರು : ಕೆಎಸ್ಆರ್ಟಿಸಿ ನಿಗಮವು ಬೆಂಗಳೂರಿನಿಂದ ಹಾಸನ, ಮಂಗಳೂರು, ಉಡುಪಿ ಮಾರ್ಗವಾಗಿ ಮಣಿಪಾಲಕ್ಕೆ ಹಾಗೂ ಮಣಿಪಾಲದಿಂದ ಅದೇ ಮಾರ್ಗವಾಗಿ ಬೆಂಗಳೂರಿಗೆ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ನೂತನ ಕ್ಲಬ್ ಕ್ಲಾಸ್ ಮಲ್ಟಿ ಆಕ್ಸ್ಲ್ ವೋಲ್ವೋ ಬಸ್ ಸಾರಿಗೆಯನ್ನು ಮಾರ್ಚ್ 6 ರಿಂದ ಬೆಂಗಳೂರಿನಿಂದ ಪ್ರಾರಂಭಿಸಲು ಯೋಜಿಸಲಾಗಿರುತ್ತದೆ.

ಸದರಿ ಬಸ್ ಬೆಂಗಳೂರು ಬಸ್ಸು ನಿಲ್ದಾಣದಿಂದ ರಾತ್ರಿ 8 ಗಂಟೆಗೆ ಹೊರಟು ಮಂಗಳೂರು ಬೆಳಗ್ಗೆ 4.15 ಗಂಟೆ, ಉಡುಪಿ 5.15 ಗಂಟೆ ಮಾರ್ಗವಾಗಿ ಮಣಿಪಾಲಕ್ಕೆ ಬೆಳಿಗ್ಗೆ 5. 30 ಗಂಟೆಗೆ ತಲುಪುವುದು ಹಾಗೂ ಮರು ಪ್ರಯಾಣದಲ್ಲಿ ಮಣಿಪಾಲದಿಂದ ಮಧ್ಯಾಹ್ನ 3.30 ಗಂಟೆಗೆ ಹೊರಟು ಮಂಗಳೂರಿಗೆ ಸಂಜೆ 5 ಗಂಟೆಗೆ ಬಂದು ಬೆಂಗಳೂರಿಗೆ ರಾತ್ರಿ 1 ಗಂಟೆಗೆ ತಲುಪುವುದು.

ಈ ಸಾರಿಗೆಗೆ ಅವತಾರ್ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಇದ್ದು ಸಾರ್ವಜನಿಕರು ಸದರಿ ಸಾರಿಗೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.


Spread the love