ಬ್ಯಾಂಕ್ ಆಫ್ ಬರೋಡ ಪೆರ್ನೆ ಶಾಖೆ ಉಪಶಾಖಾ ಪ್ರಬಂಧಕ ಕಾಣೆ: ಪ್ರಕರಣ ದಾಖಲು
ಮಂಗಳೂರು: ಆಂಧ್ರಪ್ರದೇಶ ಮೂಲದ ಪುಲುಗುಜ್ಜು ಸುಬ್ರಹ್ಮಣ್ಯಂ (30) ಎಂಬವರು ಪ್ರಸ್ತುತ ಬಿ.ಸಿರೋಡ್ನಲ್ಲಿ ವಾಸವಿದ್ದು, ಬ್ಯಾಂಕ್ ಆಫ್ ಬರೋಡ ಪೆರ್ನೆ ಶಾಖೆಯಲ್ಲಿ ಉಪಶಾಖಾ ಪ್ರಬಂಧಕರಾಗಿ ಕರ್ತವ್ಯದಲ್ಲಿದ್ದರು. ಡಿಸೆಂಬರ್ 17 ರಂದು ಪೆರ್ನೆ ಬ್ಯಾಂಕ್ನಿಂದ ರೂಮ್ಗೆ ಹೋಗುತ್ತೇನೆಂದು ಹೇಳಿ ಹೋದವರು ಕಾಣೆಯಾಗಿರುವ ಬಗ್ಗೆ ಉಪ್ಪಿನಂಗಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಕಾಣೆಯಾದ ಗಂಡಸಿನ ಚಹರೆ :- ಎತ್ತರ ಸುಮಾರು 5.5 ಇಂಚು, ಗೋಧಿ ಮೈ ಬಣ್ಣ, ದೃಢಕಾಯ ಶರೀರ ಹೊಂದಿದ್ದರು. ಕಾಣೆಯಾದ ದಿನ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಹಾಗೂ ಬಿಳಿ ಬಣ್ಣದಲ್ಲಿ ಕಪ್ಪು ಗೆರೆಗಳಿರುವ ಉದ್ದ ತೋಳಿನ ಶರ್ಟ್ ಧರಿಸಿದ್ದರು. ಕನ್ನಡ, ತೆಲುಗು, ಇಂಗ್ಲೀಷ್ , ಹಿಂದಿ ಭಾಷೆ ಮಾತನಾಡುತ್ತಿದ್ದರು.
ಕಾಣೆಯಾದವರ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ಉಪ್ಪಿನಂಗಡಿ ಪೋಲಿಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













