ಬ್ರಹ್ಮಾವರ – ಚೇರ್ಕಾಡಿ ರಸ್ತೆ  ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಸಾರ್ವಜನಿಕರೊಂದಿಗೆ ಅಧಿಕಾರಿಗಳೊಂದಿಗೆ ಸಭೆ

Spread the love

ಬ್ರಹ್ಮಾವರ – ಚೇರ್ಕಾಡಿ ರಸ್ತೆ  ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಸಾರ್ವಜನಿಕರೊಂದಿಗೆ ಅಧಿಕಾರಿಗಳೊಂದಿಗೆ ಸಭೆ

ಬ್ರಹ್ಮಾವರ: ಬ್ರಹ್ಮಾವರದಿಂದ ಚೇರ್ಕಾಡಿ ವರೆಗಿನ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಬಿಡುಗಡೆಗೊಂಡ ಅನುದಾನದಲ್ಲಿ ರಸ್ತೆ ಕಾಮಗಾರಿ ಶೀಘ್ರವಾಗಿ ಆರಂಭಿಸುವ ನಿಟ್ಟಿನಲ್ಲಿ ರಸ್ತೆಬದಿ ಮರ ತೆರವು ಹಾಗೂ ಭೂಸ್ವಾದಿನ ಕುರಿತು ಆರೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಉಡುಪಿ ಶಾಸಕರಾದ ಶ್ರೀ ಕೆ ರಘುಪತಿ ಭಟ್ ಇವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಸಭೆ ಜರುಗಿತು.

ರಸ್ತೆ ಇಕ್ಕೆಲಗಳಲ್ಲಿ ಇರುವ ಮರಗಳ ಕುರಿತು ಅರಣ್ಯಾಧಿಕಾರಿಯಿಂದ ಮಾಹಿತಿಯನ್ನು ಪಡೆದುಕೊಂಡರು ಸಣ್ಣ ಮರಗಳನ್ನು ಸರಕಾರಿ ಸ್ಥಳಕ್ಕೆ ಸ್ಥಳಾಂತರಿಸುವ ಮತ್ತು ಗ್ರಾಮ ಪಂಚಾಯತ್ ನ ನೇತೃತ್ವದಲ್ಲಿ ಒಂದು ಮರ ಕಡಿದರೆ 25 ಗಿಡ ನೆಡುವ ಯೋಜನೆಯೊಂದಿಗೆ, ಅಕೇಶಿಯ ಮತ್ತು ಕಾಟುಮರಗಳ ಬದಲು ಉತ್ತಮ ಜಾತಿಯ ಮರಗಳನ್ನು ನೆಡುವ ನಿರ್ಣಯವನ್ನು ಕೈಗೊಂಡು ಮರ ತೆರವುಗೊಳಿಸಿ ರಸ್ತೆ ಅಭಿವೃದ್ಧಿಪಡಿಸುವ ಪ್ರಸ್ತಾವನೆಗೆ ಸರ್ವಾನುಮತದಿಂದ ಸಾರ್ವಜನಿಕರು ಒಪ್ಪಿಗೆ ನೀಡಿದರು,.

ರಸ್ತೆ ಬದಿಗಳಲ್ಲಿ ಪಂಚಾಯತ್ ಗಳ ನೀರು ಟ್ಯಾಂಕ್, ನೀರು ಸರಬರಾಜು ಪೈಪ್‌ಲೈನ್, ಟ್ರಾನ್ಸ್ಫಾರ್ಮರ್ ವಿದ್ಯುತ್ ಕಂಬಗಳು, ಬೋರ್ವೆಲ್ ಗಳು ಇದ್ದು ಮೂಲಭೂತ ಸೌಕರ್ಯಗಳನ್ನು ಪ್ರಥಮ ಆದ್ಯತೆಯಲ್ಲಿ ಸ್ಥಳಾಂತರಿಸಲು ಮತ್ತು ಈ ಬಗ್ಗೆ ವಿವರವಾದ ಮಾಹಿತಿಯನ್ನು ತಕ್ಷಣ ಗ್ರಾಮಪಂಚಾಯತ್ ಪಿಡಿಒಗಳು ನೀಡಲು ಶಾಸಕರು ಸೂಚಿಸಿದರು. ರಾಜ್ಯ ಹೆದ್ದಾರಿಗಳ ಅಗಲೀಕರಣಕ್ಕೆ ಭೂಸ್ವಾದಿನ ಪಡಿಸಲು ಸರ್ಕಾರದ ಅನುದಾನ ದೊರಕಲಿದ್ದು ಈ ರಸ್ತೆ ಎಂ ಡಿ ಆರ್ ರಸ್ತೆ ಆಗಿರುವುದರಿಂದ ಭೂಸ್ವಾಧೀನಕ್ಕೆ ಪರಿಹಾರ ಸಿಗದೆ ಇರುವುದರಿಂದ 90 ಶೇಕಡಾ ರಸ್ತೆ ಸರಕಾರಿ ನಿವೇಶನದಲ್ಲಿ ಬರುವುದರಿಂದ ಉಳಿದ ಖಾಸಗಿ ರಸ್ತೆ ಅಗಲೀಕರಣಕ್ಕೆ ಸಾರ್ವಜನಿಕರು ಉಚಿತವಾಗಿ ಭೂಮಿ ನೀಡುವಂತೆ ಸಾರ್ವಜನಿಕರಲ್ಲಿ ಶಾಸಕರು ಮನವಿ ಮಾಡಿದರು ಈ ಬಗ್ಗೆ ಸಭೆಯಲ್ಲಿ ಉತ್ತಮ ಸ್ವಂದನೆ ದೊರಕಿತು.

ಸಭೆಯಲ್ಲಿ ಆರೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಜು ಕುಲಾಲ್, ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ನಳಿನಿ ಪ್ರದೀಪ್ ರಾವ್, ಸುಧೀರ್ ಕುಮಾರ್ ಶೆಟ್ಟಿ, ಚೇರ್ಕಾಡಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಹರೀಶ್ ಶೆಟ್ಟಿ, ಆಶಾ ಕೋಟ್ಯಾನ್, ಉದಯ್ ಕಾಮತ್, ಗುತ್ತಿಗೆದಾರರಾದ ಮುನಿಯಾಲು ಉದಯಕುಮಾರ್ ಶೆಟ್ಟಿ, ತಹಶೀಲ್ದಾರಾದ ಕಿರಣ್ ಬೋರಯ್ಯ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಜಗದೀಶ್ ಭಟ್, ಪಿಡಿಓ, ವಿ. ಎ ಗಳು ಹಾಗೂ ಪಂಚಾಯತ್ ಸದಸ್ಯರುಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.


Spread the love