ಭಗ್ನಗೊಂಡ ಪರಶುರಾಮ ಮೂರ್ತಿ ಹಸ್ತಾಂತರಕ್ಕೆ ವಿರೋಧ: ಜಿಲ್ಲಾಧಿಕಾರಿಗೆ ಮನವಿ

Spread the love

ಭಗ್ನಗೊಂಡ ಪರಶುರಾಮ ಮೂರ್ತಿ ಹಸ್ತಾಂತರಕ್ಕೆ ವಿರೋಧ: ಜಿಲ್ಲಾಧಿಕಾರಿಗೆ ಮನವಿ
 

ಉಡುಪಿ: ಕಾರ್ಕಳ ತಾಲೂಕು ಎರ್ಲಪಾಡಿ ಗ್ರಾಪಂ ವ್ಯಾಪ್ತಿಯ ಉಮಿಕಲ್ ಬೆಟ್ಟದಲ್ಲಿರುವ ಪರಶುರಾಮ ಥೀಮ್ ಪಾರ್ಕ್ ಹಗರಣದ ತನಿಖೆ ನಡೆಯುತ್ತಿರುವಾಗ ಪರಶುರಾಮಮೂರ್ತಿಯ ಉಳಿದ ಭಾಗವನ್ನು ತೆರವು ಗೊಳಿಸಿ ಶಿಲ್ಪಿಗೆ ಹಸ್ತಾಂತರಿಸಬಾರದು ಎಂದು ಆಗ್ರಹಿಸಿ ಕಾರ್ಕಳದ ಪರಶು ರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿ  ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಅವರಿಗೆ ಮನವಿ ಸಲ್ಲಿಸಿತು.

ಈ ಹಗರಣದ ಬಗ್ಗೆ ರಾಜ್ಯ ಸರಕಾರದಿಂದ ನಿಯೋಜಿತಗೊಂಡಿರುವ ಸಿಐಡಿ ತಂಡ ತನಿಖೆಯನ್ನು ನಡೆಸುತ್ತಿದೆ ಹಾಗೂ ನಾಗಮೋಹನ್ ದಾಸ್ ವಿಚಾರಣಾ ಆಯೋಗದ ತನಿಖೆಯ ಅಂತಿಮ ವರದಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸುವವರೆಗೆ ಯಾವುದೇ ಕಾರಣಕ್ಕೂ ಪರಶುರಾಮ ಮೂರ್ತಿಗೆ ಸಂಬಂಧಿತ ಕಂಚು ಖರೀದಿಯಲ್ಲಿ ಜಿಎಸ್‌ಟಿ ವಂಚನೆ ಮಾಡಿರುವ ಶಿಲ್ಪಿ ಕೃಷ್ಣ ನಾಯಕ್‌ರಿಗೆ ಪರಶುರಾಮಮೂರ್ತಿಯ ಉಳಿದ ಭಾಗವನ್ನು ತೆಗೆದು ಹಸ್ತಾಂತರ ಮಾಡ ಬಾರದು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಸಮಿತಿಯು ಅಭಿವೃದ್ಧಿ ಪರ ಇದ್ದು ಜನರ ಧಾರ್ಮಿಕ ಭಾವನೆಗಳ ಜೊತೆ ಚೆಲ್ಲಾಟ ಆಡುತ್ತಿರುವ ವ್ಯಕ್ತಿಗಳ ವಿರುದ್ಧ ಪಕ್ಷಾತೀತವಾಗಿ ಹೋರಾಟ ಮಾಡಿ ಪರಶುರಾಮ ಮೂರ್ತಿಯನ್ನು ಉಮ್ಮಿಕಲ್ ಬೆಟ್ಟದಲ್ಲಿ ಪುನರ್ ಸ್ಥಾಪಿಸಿ ಹಿಂದೂಗಳ ಧಾರ್ಮಿಕ ನಂಬಿಕೆಯನ್ನು ಉಳಿಸುವ ದಿಕ್ಕಿನಲ್ಲಿ ಈ ಮನವಿಯನ್ನು ಸಲ್ಲಿಸಿದೆ ಎಂದು ಸಮಿತಿ ಗೌರವಾಧ್ಯಕ್ಷ ಕೃಷ್ಣಮೂರ್ತಿ ಆಚಾರ್ಯ ತಿಳಿಸಿದ್ದಾರೆ.


Spread the love

Leave a Reply