ಮಂಗಳೂರಿನಲ್ಲಿ ಜ.20 ರಂದು ವೈಭವದಿಂದ ನಡೆಯಲಿದೆ ‘ಗಾಣಿಗ ಸಂಗಮ – 2019’

Spread the love

ಮಂಗಳೂರಿನಲ್ಲಿ ಜ.20 ರಂದು ವೈಭವದಿಂದ ನಡೆಯಲಿದೆ ‘ಗಾಣಿಗ ಸಂಗಮ – 2019’

ಮಂಗಳೂರು, ಗಾಣಿಗಾಸ್ ಯಾನೆ ಸಪಲಿಗಾಸ್ ಪರಿವಾರ್ ಇದರ ಪ್ರಾಯೋಜಕತ್ವದಲ್ಲಿ ನಾಲ್ಕನೇ ವರ್ಷದ ನೃತ್ಯ ಸ್ಪರ್ಧೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ‘ಗಾಣಿಗ ಸಂಗಮ 2019ರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಗರದ ಅತ್ತಾವರದಲ್ಲಿರುವ ಶ್ರೀ ಉಮಾಮಹೇಶ್ವರ ದೇವಾಲಯದಲ್ಲಿ ನಡೆಯಿತು.

ನಗರದ ಪುರಭವನದಲ್ಲಿ ಜ.20 ರಂದು ನಡೆಯುವ ಗಾಣಿಗ ಪರಿವಾರ್ ವೇದಿಕೆಯಲ್ಲಿ ನಡೆಯುವ ಗಾಣಿಗ ಸಂಗಮ ಕಾರ್ಯಕ್ರಮದಲ್ಲಿ ನೃತ್ಯ ಸ್ಪರ್ಧೆ ಸೇರಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದ್ದು, ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಲಾಗುವುದು. ಅಲ್ಲದೆ ಬಡ ಕುಟುಂಬಗಳಿಗೆ ಸಹಾಯ ಹಸ್ತ ನೀಡಲಾಗುವುದು ಎಂದು ಸಂಘಟಕರು ತಿಳಿಸಿದರು.

ಜ.20 ರಂದು ನಡೆಯುವ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾರತೀಯ ಭೂಸೇನೆ ನಿವೃತ್ತ ಸುಬೇದಾರ್ ಮೇಜರ್ ದಾಮೋದರ ಎಸ್. ಅಂತಾರಾಷ್ಟ್ರೀಯ ಕರಾಟೆ ಪಟು ರಂಜಿತ್ ಎಸ್. ಮುಂಡ್ಕೂರ್, ವಿಶೇಷ ಆಕರ್ಷಣೆಯಾಗಿ 2018ರ ಕಾಮಿಡಿ ಕಿಲಾಡಿಗಳು ರನ್ನರ್ ಅಪ್ ಸೂರಜ್ ಕುಮಾರ್, ಅಂತರಾಷ್ಟ್ರೀಯ ನೃತ್ಯ ಪಟು ಗೌತಮ್ ಗಾಣಿಗ ಭಾಗವಹಿಸಲಿದ್ದಾರೆ. ಬಳಿಕ ಗಾಣಿಗ ಕಲಾವಿದರಿಂದ ಮನೋರಂಜನಾ ಕಾರ್ಯಕ್ರಮ ಮನಸೂರೆಗೊಳ್ಳಲಿದೆ ಎಂದರು.

ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಶ್ರೀ ಉಮಾಮಹೇಶ್ವರಿ ದೇವಾಲಯದ ಟ್ರಸ್ಟಿಗಳಾದ ಗೋಪಾಲ ಕೃಷ್ಣ ಪಿ. ಪ್ರೇಮ್ ಸಾಲಿಯಾನ್ ಬಿಜೈ, ಸುನಿಲ್ ಅತ್ತಾವರ, ವಿಜಯ್ ಕುಮಾರ್ ಅತ್ತಾವರ, ನಾರಾಯಣ ಸಪಲ್ಯ, ಚಕ್ರಪಾಣಿ ದೇವಾಲಯದ ಟ್ರಸ್ಟಿ ಗೀತಾ ಅತ್ತಾವರ, ದೇವಾಲಯ ಅರ್ಚಕರಾದ ಲಕ್ಷ್ಮೀಶ್ ಭಟ್, ಮಾಧವ ಉಳ್ಳಾಲ, ಗಾಣಿಗಾಸ್ ಯಾನೆ ಸಪಲಿಗಾಸ್ ಪರಿವಾರ್ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.


Spread the love