ಮಂಗಳೂರಿನಲ್ಲಿ ಬಾಂಬ್ ಇಟ್ಟವರನ್ನು ಪೊಲೀಸರು ಕೂಡಲೇ ಬಂಧಿಸಲಿ – ಕುಮಾರಸ್ವಾಮಿ

Spread the love

ಮಂಗಳೂರಿನಲ್ಲಿ ಬಾಂಬ್ ಇಟ್ಟವರನ್ನು ಪೊಲೀಸರು ಕೂಡಲೇ ಬಂಧಿಸಲಿ – ಕುಮಾರಸ್ವಾಮಿ

ಶೃಂಗೇರಿ: ಮಂಗಳೂರಿನಲ್ಲಿ ಬಾಂಬ್ ಇಟ್ಟವರು ಯಾರು ಎಂದು ಪತ್ತೆ ಹಚ್ಚಿ ಬಂಧಿಸಬೇಕು.ತನಿಖೆ ವಿಳಂಬ ಮಾಡಿ 15 ದಿನ ಸಮಯ ತೆಗೆದುಕೊಂಡು ಬೇರೆ ಕಥೆ ಸೃಷ್ಟಿ ಮಾಡಿಬಿಡುವ ಸಾಧ್ಯತೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.

ಶೃಂಗೇರಿಯಲ್ಲಿ ದೇವೇಗೌಡರ ನೇತೃತ್ವದಲ್ಲಿ ನಡೆಯುತ್ತಿರುವ ಸಹಸ್ರ ಚಂಡಿಕಾ ಯಾಗದಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮಂಗಳೂರಿನಲ್ಲಿ ಬಾಂಬ್ ಇಟ್ಟವರು ಯಾರು ಎಂದು ಪತ್ತೆ ಹಚ್ಚುವುದು ಕಷ್ಟವೇನಲ್ಲ.ಆ ಜಾಗದಲ್ಲಿ ಸಿಸಿಟಿವಿ ಇರುತ್ತದೆ. ದುಷ್ಕರ್ಮಿಗಳನ್ನು ಪತ್ತೆ ಹೆಚ್ಚಲು ಪೊಲೀಸರು ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು .15 ದಿನ ಸಮಯ ತೆಗೆದುಕೊಂಡು ಬೇರೆ ಕಥೆ ಸೃಷ್ಟಿಸಬಾರದು.ವಾಸ್ತವಾಂಶವನ್ನು ಜನರ ಮುಂದಿಡಬೇಕು ಎಂದು ಪೊಲೀಸರಿಗೆ ಮನವಿ ಮಾಡಿದರು. ನನಗೆ ಕೆಲ ಪೊಲೀಸರ ಮೇಲೆ ಅನುಮಾನ ಇದೆ.ರಾಜ್ಯ ಸರ್ಕಾರ ಮತ್ತು ಪೊಲೀಸರು ಸೇರಿ ಸಮಾಜ ಒಡೆಯುವ ಕೆಲಸ ಮಾಡಬಾರದು.ಸಮಾಜದಲ್ಲಿ ಅಪನಂಬಿಕೆ ಉಂಟಾಗಬಾರದು.

ದೇಶದಲ್ಲಿ ಬೆಂಕಿ ಹಚ್ಚುವ ಕೆಲಸ ನಡಯುತ್ತಿದೆ. ಹಲವು ಸಮಸ್ಯೆಗಳಿವೆ.ನಿಮ್ಮಲ್ಲಿ ಅಧಿಕಾರ ಇದೆ. ತನಿಖೆಯನ್ನು ಯಾವುದೇ ಸಂಸ್ಥೆಯಿಂದಾದೂ ಮಾಡಿ ಆದರೆ ಜನರ ವಿಶ್ವಾಸ, ನಂಬಿಕೆ ಕಳೆಯುವ ಕೆಲಸ ಮಾಡಬೇಡಿ. ಪೊಲೀಸರು ಸಂಶಯದ ಹೇಳಿಕೆ ನೀಡಬೇಡಿ ಎಂದು ಅವರು ಎಚ್ಚರಿಕೆ ಸಂದೇಶ ನೀಡಿದರು. ಸರ್ಕಾರವೇ ಜನರಲ್ಲಿ ಸಂಘರ್ಷದ ಮನೋಭಾವವನ್ನು ಬಿತ್ತುತ್ತಿದೆ.ಇದಕ್ಕಾಗಿ ಕೆಲವು ಪೊಲೀಸ್ ಅಧಿಕಾರಿಗಳನ್ನು ಬಳಸಿಕೊಂಡಿದೆ.ಆ ರೀತಿಯ ಅನುಮಾನಗಳು ನನ್ನಲ್ಲಿ ಸೃಷ್ಟಿಯಾಗಿದೆ. ಯಾವುದೋ ಒಂದು ವರ್ಗದ ಓಲೈಕೆಗೆ ಅಮಾಯಕರನ್ನು ಬಲಿ ತೆಗೆದುಕೊಳ್ಳಬೇಡಿ.

ಪ್ರತಿಭಟನಾ ಸಭೆಯಲ್ಲಿ ಕಲ್ಲು ಹೊಡೆದದ್ದು ಕ್ಯಾಮೆರಾದಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಒಂದು ತಿಂಗಳಾದರೂ ಕಲ್ಲು ಹೊಡೆದಿರುವುದನ್ನು ಸಮಾಜದ ಮುಂದೆ ಯಾಕೆ ಹೇಳಲಿಲ್ಲ ಎಂದು ಪೊಲೀಸರಿಗೆ ಪ್ರಶ್ನಿಸಿದ ಅವರು, ಜನರಲ್ಲಿ ಭಯಭೀತ ವಾತಾವರಣ ಸೃಷ್ಟಿಸುವ ಬದಲು ನೆಮ್ಮದಿಯಿಂದ ಜನರು ಬದುಕುವ ಹಾಗೆ ಸರ್ಕಾರ ಜವಾಬ್ದಾರಿಯುತವಾಗಿ ನಡೆದುಕೊಳ್ಳಲಿ ಎಂದು ಕಿವಿಮಾತು ಹೇಳಿದರು.


Spread the love