ಮಂಗಳೂರು: ಅಗೋಸ್ತ್ 10 ರಿಂದ ಶಿರಾಡಿ ಘಾಟಿ ವಾಹನ ಸಂಚಾರಕ್ಕೆ ಮುಕ್ತ ; ರಮಾನಾಥ ರೈ

Spread the love

ಮಂಗಳೂರು: ಶಿರಾಡಿ ಘಾಟ್ ರಸ್ತೆಯನ್ನು ಅಗೋಸ್ತ್ 10 ರ ಒಳಗೆ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ದಕ ಜಿಲ್ಲಾ ಉಸ್ತುವಾರಿ ಸಚಿವರಾದ ರಮಾನಾಥ ರೈ ತಿಳಿಸಿದರು.

5-ramanath-rai-20150803-004

ಅವರು ಸೋಮವಾರ ನಗರದ ಸರ್ಕಿಟ್ ಹೌಸ್ನಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿ ಲೋಕೊಪಯೋಗಿ ಇಲಾಖೆಯೊಂದಿಗೆ ತಾನು ಈಗಾಗಲೇ ಮಾತುಕತೆ ನಡೆಸಿದ್ದು, ಅಗೋಸ್ತ್ ಮೊದಲವಾರದಲ್ಲಿ ಕಾಮಾಗಾರಿಯನ್ನು ಪೂರ್ಣಗೊಳಿಸಲಾಗುವುದು ಶೀಘ್ರದಲ್ಲಿಯೇ ರಸ್ತೆಯಲ್ಲಿ ಸೂಚನಾ ಫಲಕಗಳನ್ನು, ರಸ್ತೆಯ ಬದಿಗಳನ್ನು ತುಂಬಿಸುವ ಕೆಲಸವನ್ನು ಪೂರ್ಣಗೊಳಿಸಲಾಗುವುದು. ಅಗೋಸ್ತ್ 9 ರಂದು ರಾಜ್ಯ ಸಭಾ ಸದಸ್ಯರಾದ ಆಸ್ಕರ್ ಫೆರ್ನಾಂಡಿಸ್ ಅವರು ರಸ್ತೆಯ ಕಾಮಗಾರಿಯನ್ನು ಪರಿಶೀಲಿಸಲು ಆಗಮಿಸಿಲಿದ್ದು, ಅಗೋಸ್ತ್ 10 ರಂದು ರಸ್ತೆಯ ಉದ್ಘಾಟನೆ ನೆರವೇರಿಸಲಾಗುವುದು ಎಂದರು. ಶಿರಾಡಿ ಘಾಟ್ ರಸ್ತೆಯು ಘನ ಹಾಗೂ ಚಿಕ್ಕ ವಾಹನಗಳು ಎರಡೂ ಕೂಡ ಚಲಿಸಲು ಮುಕ್ತವಾಗಿದೆ ಎಂದರು.

ಸುಂದರ ಮಲೆಕುಡಿಯ ಅವರ ಮೇಲೆ ನಡೆದ ಹಲ್ಲೆ ಹಾಗೂ ಅವರಿಗೆ ನ್ಯಾಯ ಒದಗಿಸುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಯಾರೇ ಕೂಡ ಈ ಕ್ರತ್ಯದಲ್ಲಿ ಭಾಗಿಯಾಗಿದ್ದರೂ ಕೂಡ ಅವರನ್ನು ಕಠಿಣವಾಗಿ ಶಿಕ್ಷೆ ನೀಡಲಾಗುವುದು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಬಡವರ ಮತ್ತು ದೀನದಲಿತರ ಕುರಿತು ಹೆಚ್ಚಿನ ಕಾಳಜಿಯನ್ನು ಹೊಂದಿದ್ದು, ಇಂತಹವರಿಗಾಗಿ ವಿವಿಧ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಆರೋಪಿಗಳ ವಿರುದ್ದ ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗದೆ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದರು.

ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆಯ ಕುರಿತ ಪ್ರಶ್ನೆಗೆ ಉತ್ತರಿಸಿದ ರೈ ಜಿಲ್ಲೆಯ ಸಹಕಾರಿ ಸಂಸ್ಥೆಗಳು ರೈತರಿಗೆ ನಿಗದಿತ ಬಡ್ಡಿದರದಲ್ಲಿ ಸಾಲವನ್ನು ನೀಡಿದ್ದು, ಸಹಕಾರಿ ಸಂಸ್ಥೆಗಳಲ್ಲಿ ಸಾಲ ಪಡೆಯಲು ವಿಫಲರಾದಾಗ ಕೆಲವೊಂದು ರೈತರು ಬಡ್ಡಿವ್ಯಾಪಾರಿಗಳಿಂದ ಸಾಲವನ್ನು ಪಡೆದ ಪರಿಣಾಮ ತೀರಿಸಲಾಗದೆ ಕೆಲವು ಕಡೆಯಲ್ಲಿ ರೈತರ ಆತ್ಮಹತ್ಯೆಗೆ ಕಾರಣವಾಗಿದೆ ಎಂದರು.

ಅರಣ್ಯ ವ್ಯಾಪ್ತಿಯಲ್ಲಿ ಆನೆಗಳ ಹಾವಳಿಯಿಂದ ಅಲ್ಲಿನ ನಿವಾಸಿಗಳ ಭೂಮಿ ನಾಶವಾದ ಬಗ್ಗೆ ಉತ್ತರಿಸಿದ ಅವರು ಇಲಾಖೆ ಈ ಕುರಿತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳೂತ್ತಿದ್ದು, ಈಗಾಗಲೇ 22 ಕಾಡಾನೆಗಳನ್ನು ಆಲೂರು ಕ್ಯಾಂಪ್ಗೆ ವರ್ಗಾಯಿಸಲಾಗಿದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾಧಿಕಾರಿ ಎ ಬಿ ಇಬ್ರಾಹಿಂ, ಮೇಯರ್ ಜಸಿಂತಾ ಆಲ್ಪ್ರೇಡ್, ಉಪಮೇಯರ್ ಪುರುಷೋತ್ತಮ್ ಇನ್ನಿತರರು ಉಪಸ್ಥಿತರಿದ್ದರು.


Spread the love