ಮಂಗಳೂರು: ಆದರ್ಶ ಪುರುಷ ಅಂಬಿಗರ ಚೌಡಯ್ಯ- ಸಚಿವ ರಮಾನಾಥ ರೈ

Spread the love

ಮಂಗಳೂರು : ಕಾಯಕದೊಂದಿಗೆ ಸಮಾಜದ ಅಂಕುಡೊಂಕುಗಳನ್ನು ತನ್ನ ವಚನಗಳ ಮೂಲಕ ತಿದ್ದಿ ಸಮಾಜದಲ್ಲಿ ಎಲ್ಲರೂ ಸಹ ಬಾಳ್ವೆ ಮಾಡುವಂತೆ ಕರೆಕೊಟ್ಟ 10 ನೇ ಶತಮಾನದ ಅಂಬಿಗರ ಚೌಡಯ್ಯ ನಮಗೆ ಹಾಗೂ ಇಂದಿನ ಸಮಾಜಕ್ಕೆ ಮಾದರಿಯಾಗಿದ್ದಾರೆ. ಎಂದು ಅರಣ್ಯ, ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.

ಅವರು ಇಂದು ದ.ಕ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಇತರ ಮೊಗವೀರ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಏರ್ಪಡಿಸಿದ್ದ ವಚನಕಾರ ಅಂಬಿಗರ ಚೌಡಯ್ಯ ಅವರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ’ಸೋಜ ಅವರು ಮಾತನಾಡಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಂಬಿಗರ ಚೌಡಯ್ಯ ಅಧ್ಯಯನ ಪೀಠವನ್ನು ಸ್ಥಾಪಿಸಿದ್ದು ಇದರಿಂದ ಯುವಜನರು ಅಂಬಿಗರ ಚೌಡಯ್ಯ ನವರ ಜೀವನಾದರ್ಶಗಳನ್ನು ಅರಿಯಲು ಅನುಕೂಲವಾಗಿದೆ ಎಂದರು.

ಅಂಬಿಗರ ಚೌಡಯ್ಯ  ಅಧ್ಯಯನ ಪೀಠದ ಸಂಯೋಜಕರಾದ ಡಾ. ಜಯರಾಜ ಅಮೀನ್ ಅವರು ಅಂಬಿಗರ ಚೌಡಯ್ಯ ಜಯಂತಿಯ ಬಗ್ಗೆ ಸಂದೇಶವನ್ನು ನೀಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿ ಪಿ.ಐ ಶ್ರೀವಿದ್ಯಾ, ಮೊಗವೀರ ಸಮಾಜದ ಯತೀಶ್ ಬೈಕಂಪಾಡಿ ಮುಂತಾದವರು ಹಾಜರಿದ್ದರು.

ಗೃಹರಕ್ಷಕದಳದ ಘಟಕಾಧಿಕಾರಿಗಳ ಸಭೆ 

ಮಂಗಳೂರು: ಜ. 29 ರಂದು ದ.ಕ. ಜಿಲ್ಲಾ ಗೃಹರಕ್ಷಕದಳದ ಘಟಕಾಧಿಕಾರಿಗಳ ಸಭೆಯು ಜಿಲ್ಲಾ ಕಮಾಂಡೆಂಟ್ ಡಾ: ಮುರಲೀ ಮೋಹನ ಚೂಂತಾರು ಅಧ್ಯಕ್ಷತೆಯಲ್ಲಿ ನಡೆಯಿತು.  ಸಭೆಯಲ್ಲಿ  ಸೆಕೆಂಡ್-ಇನ್-ಕಮಾಂಡ್, ಮೊಹಮ್ಮದ್ ಇಸ್ಮಾಯಿಲ್, ಉಪ ಸಮಾದೇಷ್ಟರಾದ ವಿ. ಪುರುಷೋತ್ತಮ ಮತ್ತು ಪ್ರಭಾರ ಉಪ ಸಮಾದೇಷ್ಟರಾದ ರಮೇಶ್ ಉಪಸ್ಥಿತರಿದ್ದರು.  ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ ಅತೀ ಹೆಚ್ಚು ಗೃಹರಕ್ಷಕಸದಸ್ಯರುಗಳನ್ನು ನಿಯೋಜಿಸಲು ಸೂಚಿಸಲಾಯಿತು.  ಹೊಸದಾಗಿ ಸೇರಿದ ಗೃಹರಕ್ಷಕರುಗಳಿಗೆ ಸಮಸವಸ್ತ್ರಗಳನ್ನು ನೀಡಿ ಅವರನ್ನು ಸರದಿಯ ಆಧಾರದ ಮೇಲೆ ನೇಮಿಸಲು ಘಟಕಾಧಿಕಾರಿಗಳಿಗೆ ಸೂಚಿಸಲಾಯಿತು.

homeguard-

ಗೃಹರಕ್ಷಕದಳದಲ್ಲಿ ಶ್ಲಾಘನೀಯ ಸೇವೆಯನ್ನು ಸಲ್ಲಿಸಿರುವ ಮೂಲ್ಕಿ ಗೃಹರಕ್ಷಕದಳದ ಘಟಕಾಧಿಕಾರಿ ಎಚ್. ಮನ್ಸೂರ್ ಅವರಿಗೆ 2016 ರ  ಮುಖ್ಯಮಂತ್ರಿಗಳ ಬೆಳ್ಳಿ ಪದಕವನ್ನು ಲಭಿಸಿದ್ದು, ಅವರನ್ನು ಈ ಸಂಧರ್ಭದಲ್ಲಿ ಸನ್ಮಾನಿಸಲಾಯಿತು.

ಜ.30 ರಂದು ನಿವೃತ್ತರಾಗಲಿರುವ ಡೆಪ್ಯೂಟಿ ಕಮಾಂಡೆಂಟ್, ವಿ. ಪುರುಷೋತ್ತಮ ಇವರನ್ನು  ಸನ್ಮಾನಿಸಿ ಬೀಳ್ಕೊಡಲಾಯಿತು.

ವೆನ್‍ಲಾಕ್‍ನಲ್ಲಿ  ಗಣರಾಜ್ಯೋತ್ಸವ

ಮಂಗಳೂರು : ವೆನ್‍ಲಾಕ್ ಜಿಲ್ಲಾ ಆಸ್ಪತ್ರೆ, ಮಂಗಳೂರು ಇಲ್ಲಿ 67ನೇ ಗಣರಾಜ್ಯೋತ್ಸವದ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ನೆರವೇರಿಸಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ರಾಮಕೃಷ್ಣ ಮಿಷನ್  ಕಾರ್ಯದರ್ಶಿ ಚಿತಕಾನಂದ ಸ್ವಾಮೀಜಿ,  ಜೆಬಿ ಪೆಟ್ರೋ ಕೆಮಿಕಲ್ಸ್, ಮಂಗಳೂರು ಇದರ ಎ.ಜಿ. ಪೈ, ಇವರು ಭಾಗವಹಿಸಿದ್ದರು.

ವೆನ್‍ಲಾಕ್ ಅಧೀಕ್ಷಕಿ ಡಾ. ರಾಜೇಶ್ವರಿ ದೇವಿ,  ತಮ್ಮ ಪ್ರಾಸ್ತವಿಕ ಮಾತಿನಲ್ಲಿ ವೆನ್‍ಲಾಕ್ ಜಿಲ್ಲಾ ಆಸ್ಪತ್ರೆಯು ಕಾಯಕಲ್ಪದಡಿಯಲ್ಲಿ ರಾಜ್ಯದಲ್ಲಿ 2ನೇ ಬಹುಮಾನವನ್ನು ಪಡೆದುಕೊಂಡಿರುವುದು ಎಂದು ತಿಳಿಸಿದರು.

ರಾಮಕೃಷ್ಣ ಮಠದ ಚಿತಕಾನಂದ ಸ್ವಾಮೀಜಿಯವರು ಮಾತನಾಡುತ್ತಾ ಆರೋಗ್ಯ ಮತ್ತು ಸ್ವಚ್ಛತೆಗೆ ಅವಿನಾಭಾವ ಸಂಬಂಧವಿದ್ದು, ಪರಸ್ಪರ ಪೂರಕವಾಗಿದೆ. ಸ್ವಚ್ಛತೆಯನ್ನು ಕಾಪಾಡಿಕೊಂಡರೆ ಆರೋಗ್ಯವು ಉತ್ತಮವಾಗಿರುತ್ತದೆ ಎಂದು ತಿಳಿಸಿದರು. ಮಂಗಳೂರಿನಲ್ಲಿ ರಾಮಕೃಷ್ಣ ಮಿಷನ್ ವತಿಯಿಂದ ಕೈಗೊಂಡ ಸ್ವಚ್ಛತಾ ಅಭಿಯಾನದ ವಿವರವನ್ನು ಅವರು ನೀಡಿದರು.

ಗಣರಾಜ್ಯೋತ್ಸವ ಧ್ವಜಾರೋಹಣದ ನಂತರ  ಗುರುದೇವ ಬಳಗ, ಮಂಗಳೂರು ಇವರಿಂದ ಆಸ್ಪತ್ರೆಯ ಆವರಣದ ಸ್ವಚ್ಛತಾ ಕಾರ್ಯಕ್ರಮವು ಜರಗಿತು.


Spread the love