ಮಂಗಳೂರು: ಆರೋಗ್ಯ ಸಚಿವರಿಂದ ನಗರದಲ್ಲಿ ಬೈಕ್ ಅಂಬುಲೆನ್ಸ್ ಸೇವೆಗೆ ಚಾಲನೆ

Spread the love

ಮಂಗಳೂರು: ರಾಜ್ಯ ಸರಕಾರ ಮಹತ್ವಾಕಾಂಕ್ಷಿ ಯೋಜನೆಯಾದ ಬೈಕ್ ಅಂಬುಲೆನ್ಸ್ ಸೇವೆಗೆ ಮಂಗಳೂರಿನಲ್ಲಿ ಮಂಗಳವಾರ ರಾಜ್ಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವರಾದ ಯುಟಿ ಖಾದರ್ ಚಾಲನೆ ನೀಡಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಖಾದರ್ ನಗರದಲ್ಲಿ ಎರಡು ಬೈಕ್ ಅಂಬುಲೆನ್ಸ್ ಸೇವೆಯನ್ನು ಒದಗಿಸಿದ್ದು, ಒಂದು ಮಂಗಳೂರು ನಗರ ವ್ಯಾಪ್ತಿಯಲ್ಲಿ ಕಾರ್ಯಾಚರಿಸಿದರೆ ಇನ್ನೊಂದು ಉಳ್ಳಾಲದಲ್ಲಿ ಇಡಲಾಗುವುದು. ಪ್ರಸ್ತುತ ರಾಜ್ಯದಲ್ಲಿ 32 ಬೈಕ್ ಅಂಬುಲೆನ್ಸ್ಗಳು ಕಾಯರ್ಾಚರಿಸುತ್ತಿದ್ದು ಅದರಲ್ಲಿ 20 ಬೆಂಗಳೂರಿನಲ್ಲಿ ಕಾರ್ಯಾಚರಿಸುತ್ತಿವೆ. ಪ್ರಸುತ ಮಂಗಳೂರಿನಲ್ಲಿ ಎರಡು ಬೈಕ್ ಅಂಬುಲೆನ್ಸ್ಗಳನ್ನು ಪ್ರಾಯೋಗಿಕವಾಗಿ ಆರಂಭಿಸಿದ್ದು, ಅವು ಯಶಸ್ವಿಯಾದಲ್ಲಿ ಮುಂದೆ ಹೆಚ್ಚು ಬೈಕ್ ಅಂಬುಲೆನ್ಸ್ಗಳನ್ನು ಅಳವಡಿಸಲಾಗುವುದು ಎಂದರು.

ambulance_minister_khader-007 ambulance_minister_khader-011

ಕ್ರೀಡಾಪಟುಗಳು ಗಾಯಗೊಂಡಲ್ಲಿ ಅವರ ಚಿಕಿತ್ಸೆಗಾಗಿ ರಾಜ್ಯದಲ್ಲಿ ಪ್ರತ್ಯೇಕ ಮಾದರಿ ಶಸ್ತ್ರಚಿಕಿತ್ಸಾ ವಿಭಾಗವನ್ನು ಸದ್ಯದಲ್ಲಿಯೇ ಆರಂಭಿಸಲಾಗುವುದು. ಈಗಾಗಲೇ 100 ಕ್ಕೂ ಅಧಿಕ ಕ್ರಿಕೆಟ್ ಹಾಗೂ ಇತರ ಆಟಗಾರರಿಗೆ ಚಿಕಿತ್ಸೆಯನ್ನು ನೀಡಲಾಗಿದೆ. ಜರ್ಮನಿಯ ಮೂರು ಮಂದಿ ತಜ್ಞ ವೈದ್ಯರ ತಂಡ ಮಂಗಳೂರಿಗೆ ಆಗಮಿಸಿದ್ದು ಮಲೇರಿಯಾ ಕುರಿತು ಅಧ್ಯಯನ ಕೈಗೊಳ್ಳಲಿದೆ. ಅವರ ತಂಡ ಅಧ್ಯಯನದ ವರದಿಯನ್ನು 6 ತಿಂಗಳ ಒಳಗೆ ರಾಜ್ಯಕ್ಕೆ ನೀಡಲಿದೆ ಎಂದರು.
ಗ್ರಾಮ ಪಂಚಾಯತ್ ಚುನಾವಣೆಗಳನ್ನು ಮುಂದೂಡುವ ಯಾವುದೇ ರೀತಿಯ ಪ್ರಸ್ತಾಪ ಸರಕಾರದ ಮುಂದಿಲ್ಲ ಬದಲಾಗಿ ಪಂಚಾಯತ್ ರಾಜ್ ಕಾಯಿದೆ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದ್ದು, ಪಂಚಾಯತ್ ಅಧ್ಯಕ್ಷರ ಅವಧಿಯನ್ನು 5 ವರ್ಶಗಳಿಗೆ ವಿಸ್ತರಿಲಾಗಿದೆ. ಚುನಾವಣೆಯಲ್ಲಿ 50:50 ಮಹಿಳಾ ಮತ್ತು ಪುರಷ ಅಭ್ಯರ್ಥಿಗಳ ಪ್ರಾತಿನಿದ್ಯದೊಂದಿಗೆ ಮತದಾನವನ್ನು ಕಡ್ಡಾಯಗೊಳಿಸಲಾಗಿದೆ. ಸಂಸದೆ ಶೋಭಾ ಕರಂದ್ಲಾಜೆ ಅವರು ಜನರಿಗೆ ತಪ್ಪು ಮಾಹಿತಿ ನೀಡುವ ಬದಲು ರಾಜ್ಯದ ಸಮಸ್ಯೆಗಳನ್ನು ಕೇಂದ್ರದಲ್ಲಿ ಪ್ರಸ್ತಾಪಿಸಿ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಲಿ ಎಂದರು.
ಮೇಯರ್ ಜಸಿಂತಾ ಆಲ್ಫ್ರೇಡ್, ಉಪ ಮೇಯರ್ ಪುರುಷೋತ್ತಮ್, ಪ್ರೋ ಪ್ರ್ಯಾಂಕ್, ಪ್ರಭಂಜನ್, ಕೋನ್ರಾಡ್, ಡಿಎಚ್ಓ ಡಾ ರಾಜೇಶ್ವರಿ ಇನ್ನಿತರರು ಉಪಸ್ಥಿತರಿದ್ದರು.

For More Photos Click Here


Spread the love