ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಡಾ. ಭರತ್ ಶೆಟ್ಟಿಯವರು ಇಂದು ಭರ್ಜರಿ ಪ್ರಚಾರ

Spread the love

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಡಾ. ಭರತ್ ಶೆಟ್ಟಿಯವರು ಇಂದು ಭರ್ಜರಿ ಪ್ರಚಾರ

 

ಮಂಗಳೂರು:  ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಡಾ. ಭರತ್ ಶೆಟ್ಟಿಯವರು ಇಂದು ಭರ್ಜರಿ ಪ್ರಚಾರ ಮಾಡಿದರು. ಸುರತ್ಕಲ್ ನಲ್ಲಿ ಸದಾಶಿವ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು. ತದನಂತರ ಕಾಶಿಮಠ, ದುರ್ಗ ದೇವಸ್ಥಾನ , ಕುಚ್ಚೆಗಿಡ್ಡೆ ಕೊಡ್ಡಬ್ಬು ದೈವಸ್ಥಾನ , ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನ , ರುಕ್ಮಿಣಿ ಮೆಡಿಕಲ್ ಉದ್ಘಾಟನೆ ಹಾಗೂ ಕೋಡಿಕೆರೆ ನಾಗಬನ ಎಂಎಸ್ಸಿಜೆಡ್‌ ಕಾಲೋನಿಗೆ ಭೇಟಿ ನೀಡಿದರು. ಅಲ್ಲಿನ ನಿವಾಸಿಗಳ ವಿವಿಧ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸಿದರು. ಹೊಸಬೆಟ್ಟುವಿನಲ್ಲಿ ಭರತ್‌ ಶೆಟ್ಟಿ ಪ್ರಚಾರಕ್ಕೆ ಮಂಗಳೂರಿನ ದಂತವೈದ್ಯರ  ಬಳಗ ಸಾಥ್ ನೀಡಿತು.

ಕಾಂಗ್ರೆಸ್ ಆಡಳಿತಾವಧಿಯಲ್ಲಿ ಹಿಂದೂ ಯುವಕರ ಮೇಲೆ ಹಲ್ಲೆಯಾಗುತ್ತಿದೆ. ಕಾಂಗ್ರೆಸ್ನ ದುರಾಡಳಿತ ಹಾಗೂ ಅನಾಚಾರಗಳನ್ನ ಮಟ್ಟ ಹಾಕಲು  ಬಿಜೆಪಿಗೆ ಮತನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು. ಭರತ್ ಶೆಟ್ಟಿಗ ಅಭೂತಪೂರ್ವವಾದ ಜನಬೆಂಬಲ ದೊರಕಿದ್ದು, ಭರತ್ಶೆಟ್ಟಿ ಪ್ರಚಾರದುದ್ದಕ್ಕೂ ಜನ ಸಾಗರ ಸೇರುತ್ತಿದೆ. ಅಲ್ಲದೆ ಅವರ ಪರವಾಗಿ ಜೈಕಾರಗಳು ಮೊಳಗುತ್ತಿವೆ. ಹೊಸಬೆಟ್ಟುವಿನಲ್ಲಿ ನಡೆದ ಮತಯಾಚನೆ ಕಾರ್ಯಕ್ರಮದಲ್ಲಿ ಡಾ. ಗಣೇಶ್ ಪ್ರಸಾದ್, ಡಾ. ಶರಣ್, ಡಾ. ಗಿರೀಶ್, ಡಾ. ಕಿರಣ್, ಡಾ. ನೇಹಾ, ಡಾ. ಮಿಥುನ್ ಡಾ. ಹರಿಪ್ರಸಾದ್, ಡಾ. ನೇಹಾ , ಡಾ. ಆರತಿ, ಡಾ. ಮೆಲ್ಬಾ, ಡಾ. ಆಶೀಶ್, ಡಾ. ರಶ್ಮಿ , ಡಾ. ಸ್ವಾತಿ ಭರತ್ ಶೆಟ್ಟಿ ಪರ ಮತಯಾಚನೆ ಮಾಡಿದರು.


Spread the love