ಮಂಗಳೂರು: ಕಪೋಲಕಲ್ಪಿತ ಲವ್ ಜಿಹಾದ್ ; ಸಂಘಪರಿವಾರದ ನಾಯಕರ ವಿರುದ್ದ ಸೂಕ್ತ ತನಿಖೆಗೆ ಪಿಎಫ್ಐ ಆಗ್ರಹ

Spread the love

 ಮಂಗಳೂರು: ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರ   ಆರ್ ಎಸ್ ಎಸ್ ನಲ್ಲಿ ಇರುವವರು 60% ಕಾರ್ಯಕರ್ತರು ಪೋಲಿಸರಾಗಿದ್ದಾರೆ ಎಂಬ ಹೇಳಿಕೆಯ ಕುರಿತು ರಾಷ್ಟ್ರೀಯ ಹಂತದ ತನಿಖೆಯಾಗಬೇಕು ಎಂದು ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಒತ್ತಾಯಿಸಿದೆ.

3-pfi-press-20151007-002 2-pfi-press-20151007-001 5-pfi-press-20151007-004

ಈ ಕುರಿತು ಬುಧವಾರ ಹೋಟೆಲ್ ವುಡ್ ಲ್ಯಾಂಡ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾರ್ಯದರ್ಶಿ ಯಾಸಿರ್ ಹಸನ್ ಅವರು ಲವ್ ಜಿಹಾದ್ ಎನ್ನುವುದು ಹಿಂದು ಮುಸ್ಲಿಂರ ನಡುವೆ ಬಿರುಕು ಮೂಡಿಸಲು ಸಂಘಪರಿವಾರ ಮಾಡಿದ ವ್ಯವಸ್ಥಿತ ಪಿತೂರಿಯಾಗಿದ್ದು, ಕೊಬ್ರಾ ಪೋಸ್ಟ್ ಮತ್ತು ಗುಲಾಲಿ ಇವರ ಅಸಲಿ ಬಣ್ಣವನ್ನು ಬಯಲು ಮಾಡಿದೆ. ಇದರಿಂದ ಸಂಘಪರಿವಾರ ಸಮಾಜದಲ್ಲಿ ಲವ್ ಜಿಹಾದ್ ಹೆಸರಿನಲ್ಲಿ ಸಮಾಜವನ್ನು ಒಡೆಯುವು ಕೆಲಸದಲ್ಲಿ ಸಕ್ರಿಯರಾಗಿರುವುದು ಬಯಲಾಗಿದೆ. ಕಳೆದ 6-7 ವರುಷಗಳಲ್ಲಿ ಸುಮಾರು 22 ಹಿಂದೂ ಹುಡುಗಿಯರು ನಾಪತ್ತೆಯಾಗಿದ್ದು, ಮುಸ್ಲಿಂರೇ ಇವರನ್ನು ಲವ್ ಜಿಹಾದ್ ಹೆಸರಿನಲ್ಲಿ ಅಪಹರಿಸಿದ್ದಾರೆ ಎಂದು ಸಂಘಪರಿವಾರ ಸುದ್ದಿ ಹಬ್ಬಿಸಿದರು.  ಹಿಂದೂ ಹುಡುಗಿಯರನ್ನು ಅಪಹರಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರಿಸಿ ತಮ್ಮ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದು ಇವರ ಉದ್ದೇಶವಾಗಿದೆ ಎಂದು ಕೂಡ ಸುದ್ದಿ ಹಬ್ಬಿಸಿದ ಸಂಘ ಪರಿವಾರ ಮುಸ್ಲಿಂ ಸಮುದಾಯ ಘನತೆಯನ್ನು ಲವ್ ಜಿಹಾದ್ ಹೆಸರನಲ್ಲಿ ಹಾಳು ಮಾಡುವ ಪ್ರಯತ್ನ ಮಾಡಿತು ಆದರೆ ಯಾವಾಗ ಸೈನಡ್ ಮೋಹನ್ ಅವನಿಂದ ಮಹಿಳೆಯರು ಅಪಹರಣಕ್ಕಿಡಾಗಿದ್ದರು ಎಂಬ ಸತ್ಯ ಬಯಲಾದಾಗ ಸಂಘಪರಿವಾರ ಸುಮ್ಮನಾಯಿತು. ತಿರ್ಥಹಳ್ಳಯ ಹೈಸ್ಕೂಲು ವಿದ್ಯಾರ್ಥಿನಿ ನಂದಿತಾ ಆತ್ಮಹತ್ಯೆ ಪ್ರಕರಣಕ್ಕೆ ಇದೇ ಸಂಘಪರಿವಾರ ಲವ್ ಜಿಹಾದ್ ಬಣ್ಣ ನೀಡಿ ರಾಜಕೀಯ ದಾಳವಾಗಿ ಬಳಿಸಿಕೊಂಡಿದ್ದು ಇತಿಹಾಸ.  ರಾಜ್ಯದಲ್ಲಿ ವಿಶೇಷವಾಗಿ ಕರಾವಳಿ ಭಾಗದಲ್ಲಿ ಪ್ರತಿ ಬಾರಿಯೂ ಹಿಂದು ಯುವತಿಯೋರ್ವಳ ನಾಪತ್ತೆ ಅಥವಾ ಹತ್ಯೆ ನಡೆದಾಗ ಪೋಲಿಸ್ ತನಿಖೆಗೆ ಮುನ್ನವೇ ಸಂಘಪರಿವಾರವು ಇದಕ್ಕೆ ಲವ್ ಜಿಹಾದ್ ಲೇಪವನ್ನು ನೀಡಿ ಸಂದಿಗ್ಡ ವಾತಾವರಣವನ್ನು ಸೃಷ್ಟಿಸುತ್ತದೆ. ಲವ್ ಜಿಹಾದ್ ಎನ್ನುವುದು ಸಂಘಪರಿವಾರವು ಸಮಾಜದ ಅಶಾಂತಿ ಉಂಟು ಮಾಡಲು ಸೃಷ್ಟಿಸಿದ ಸಂಚು ಎಂಬುದು ಇದೀಗ ಕೋಬ್ರಾ ಪೊಸ್ಟ್ ನಡೆಸಿದ ಕಾರ್ಯಾಚರಣೆಯಲ್ಲಿ ಬಯಲಾಗಿದೆ.

ವಿಶ್ವ ಹಿಂದು ಪರಿಷತ್ ಮುಖಂಡ ಜಗದೀಶ್ ಶೇಣವ ಆಡಳಿತ ವ್ಯವಸ್ಥೆಯನ್ನು ಹೀಯಾಳಿಸುತ್ತಾ ಅನೈತಿಕ ಗೂಂಡಾಗಿರಿಯನ್ನು ಪೋಷಿಸುವ ಹೇಳಿಕೆ ನೀಡಿರುವುದು ವರದಿಯಲ್ಲಿ ಬಹಿರಂಗವಾಗಿದೆ. ಇನ್ನು ಬಿಜೆಪಿಯ ವಿಧಾನಪರಿಷತ್ ಸದಸ್ಯರಾಗಿರುವ ಗಣೇಶ್ ಕಾರ್ಣಿಕ್ ಲವ್ ಜಿಹಾದ್ ಬಗ್ಗೆ ಪ್ರತಿಕ್ರಿಯಿಸುತ್ತಾ ಪೋಲಿಸ್ ಇಲಾಖೆಯಲ್ಲಿ ಶೆ 60ರಷ್ಟು ಆರೆಸ್ಸೆಸ್ ಕಾರ್ಯಕರ್ತರಿದ್ದು ತಮ್ಮ ಕಾರ್ಯಗಳಿಗೆ ಇವರನ್ನು ಸಮರ್ಥವಾಗಿ ಬಳಸಿಕೊಳ್ಳಲಾಗುತ್ತದೆ ಎಂಬ ಸತ್ಯವನ್ನು ಬಹಿರಂಗಪಡಿಸಿದ್ದಾರೆ. ಇದು ಅಪಾಯಕಾರಿ ಬೆಳವಣಿಗೆಯಾಗಿದ್ದು, ಕರಾವಳಿಯಲ್ಲಿ ಕೋಮು ಗಲಭೆಗಳ ಸಂದರ್ಬಗಳಲ್ಲಿ ಪೋಲಿಸ್ ಪಕ್ಷಪಾತ ನಡೆಯುತ್ತಿದೆ ಎಂಬ ಸಂಶಯಕ್ಕೆ ಇನ್ನಷ್ಟು ಬಲಬಂದಂತಾಗಿದೆ. ಆದುದರಿಂದ ಪೋಲಿಸ್ ಇಲಾಖೆಯನ್ನು ಪರಿಶೀಲನಗೆಗೊಳಪಡಿಸಿ ಈ ರೀತಿಯ ಶಕ್ತಿಯನ್ನು ಪೋಲಿಸ್ ಇಲಾಖೆಗಳಿಂದ ವಜಾಗೊಳಿಸಲಬೇಕು. ಕಲ್ಪಿತ ಲವ್ ಜಿಹಾದ್ ವದಂತಿಯಿಂದಾಗಿ ದೇಶದಾದ್ಯಂತ ಮುಸ್ಲಿಂರು ಈಗಾಗಲೇ ಅಪಾರ ಕಷ್ಟನಷ್ಟ ಅನುಭವಿಸಿದ್ದಾರೆ. ಲವ್ ಜಿಹಾದ್ ಎಂಬ ಸಂಘಪರಿವಾರದ ಇಂತಹ ರಹಸ್ಯ ಕಾರ್ಯಸೂಚಿಗಳಿಗೆ ಶಾಶ್ವತ ತಡೆ ನೀಡಬೇಕು ಮತ್ತು ಪೋಲಿಸ್ ಇಲಾಖೆಯನ್ನು ಸ್ವಚ್ಛಗೊಳಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಸಮಿತಿ ಸದಸ್ಯ ಅಬ್ದುಲ್ ರಜ್ಹಾಕ್, ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಮಜೀದ್ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.


Spread the love