ಮಂಗಳೂರು ಚಲೋ – ಜನ ಸುರಕ್ಷಾ ಯಾತ್ರೆ ಯಶಸ್ಸಿಗೆ ಮಟ್ಟಾರ್ ಕರೆ

Spread the love

ಮಂಗಳೂರು ಚಲೋ – ಜನ ಸುರಕ್ಷಾ ಯಾತ್ರೆ ಯಶಸ್ಸಿಗೆ ಮಟ್ಟಾರ್ ಕರೆ

ಉಡುಪಿ: ಸಮಾಜವಿದ್ರೋಹಿ ಕೃತ್ಯಗಳಲ್ಲಿ ಭಾಗಿಯಾದ ದೇಶದ್ರೋಹಿ ಸಂಘಟನೆಗಳಾದ ಪಿ.ಎಫ್.ಐ. ಹಾಗೂ ಎಸ್.ಡಿ.ಪಿ.ಐ.ಯನ್ನು ನಿಷೇಧಿಸಬೇಕು. ರಾಜ್ಯದಲ್ಲಿ ಆದಂತಹ ಹಿಂದೂಗಳ ಹತ್ಯೆ ಹಾಗೂ ಹಲ್ಲೆ ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಸಾಮಾಜಘಾತುಕ ಸಂಘಟನೆಗಳಿಗೆ ಮತ್ತು ಕೋಮು ಹಿಂಸೆಗೆ ಕುಮ್ಮಕ್ಕು ನೀಡುತ್ತಿರುವ ಸಚಿವರನ್ನು ಸಂಪುಟದಿಂದ ವಜಾಗೊಳಿಸಬೇಕೆನ್ನುವ ಪ್ರಮುಖ ಬೇಡಿಕೆಗಳನ್ನು ಮುಂದಿರಿಸಿಕೊಂಡು ಭಾರತೀಯ ಜನತಾ ಪಾರ್ಟಿ ಮಾರ್ಚ್ 3 ರಿಂದ ಜನ ಸುರಕ್ಷಾ ಯಾತ್ರೆಯನ್ನು ಹಮ್ಮಿಕೊಂಡಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕೊಡಗಿನ ಕುಶಾಲನಗರದಿಂದ ಸಂಸದರಾದ ನಳಿನ್ ಕುಮಾರ್ ಕಟೀಲ್ ಹಾಗೂ ಪ್ರತಾಪ್ ಸಿಂಹ ಹಾಗೂ ಉತ್ತರಕನ್ನಡ ಜಿಲ್ಲೆಯ ಅಂಕೋಲದಿಂದ ಸಂಸದ ಅನಂತ ಕುಮಾರ್ ಹೆಗ್ಗಡೆ ಮತ್ತು ಸಂಸದೆ ಶೋಭ ಕರಂದ್ಲಾಜೆಯವರ ನೇತೃತ್ವದಲ್ಲಿ ಮಾರ್ಚ್ 3 ರಂದು ಬೆಳಿಗ್ಗೆ ಯಾತೆÀ್ರ ಆರಂಭಗೊಳ್ಳಲಿದೆ ಎಂದು ತಿಳಿಸಿದ ಅವರು ಕರ್ನಾಟಕ ಕರಾವಳಿಯ ದಕ್ಷಿಣ ಮತ್ತು ಉತ್ತರದಿಂದ ಆರಂಭಗೊಳ್ಳುವ ಈ ಎರಡೂ ಜನ ಸುರಕ್ಷಾ ಯಾತ್ರೆಗಳು ಮಾರ್ಚ್ 6 ರಂದು ಸಂಜೆ ಮಂಗಳೂರಿನಲ್ಲಿ ಸೇರಿ ಬೃಹತ್ ಮೆರವಣಿಗೆಯೊಂದಿಗೆ ಮಂಗಳೂರಿನ ಕೇಂದ್ರ ಮೈದಾನಕ್ಕೆ ತಲುಪಿ ಬೃಹತ್ ಸಜûರ್ವಜನಿಕ ಸಭೆ ನಡೆಯಲಿದೆ ಎಂದು ವಿವರಣೆ ನೀಡಿದರು.

ಉಡುಪಿ ಜಿಲ್ಲೆಗೆ ಸಂಬಂಧಪಟ್ಟಂತೆ ಮಾರ್ಚ್ 5 ರ ಬೆಳಿಗ್ಗೆ ಗಂಟೆ 9.00 ಕ್ಕೆ ಬೈಂದೂರಿನಿಂದ ಪಾದಯಾತ್ರೆ ಆರಂಭಗೊಂಡು 10.00 ಗಂಟೆಗೆ ಉಪ್ಪುಂದದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. 11.00 ಗಂಟೆಗೆ ಕುಂದಾಪುರ ಸಂಗಂ ವೃತ್ತದಿಂದ ಪಾದಯಾತ್ರೆ ಆರಂಭಗೊಂಡು ಅಪರಾಹ್ನ 1.00 ಗಂಟೆಗೆ ಶಾಸ್ತ್ರಿ ವೃತ್ತದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಮಧ್ಯಾಹ್ನ 3.00 ಗಂಟೆಗೆ ಉಡುಪಿಯ ಪಾದಯಾತ್ರೆಯು ಅಂಬಾಗಿಲು ಜಂಕ್ಷನ್‍ನಿಂದ ಕಲ್ಸಂಕ ಮಾರ್ಗವಾಗಿ ಕಿನ್ನಿಮೂಲ್ಕಿಗೆ ಸಾಗಿ ಬಂದು ಕಿನ್ನಿಮೂಲ್ಕಿಯಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ.

ಮರುದಿನ ಮಾರ್ಚ್ 6 ರಂದು ಬೆಳಿಗ್ಗೆ 9.00 ಗಂಟೆಗೆ ಕಟಪಾಡಿಯಲ್ಲಿ ಪಾದಯಾತ್ರೆ ಮುಂದುವರಿದು ಕಾಪುವಿನ ಕಡೆಗೆ ಸಾಗಿ ಮಧ್ಯಾಹ್ನ 12.00 ಗಂಟೆಗೆ ಕಾಪುವಿನಲ್ಲಿ ಸಾರ್ವಜನಿಕ ಸಭೆ ನಡೆದು ಮಂಗಳೂರಿನ ಕಡೆಗೆ ಸಾಗಲಿದೆ. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಳ್ಯದಿಂದ ಆರಂಭಗೊಳ್ಳುವ ಪಾದಯಾತ್ರೆ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಸಾಗಿ ಬಂದು ಮಾರ್ಚ್ 6 ರ ಅಪರಾಹ್ನ 3.00 ಗಂಟೆಗೆ ಮಂಗಳೂರು ತಲುಪಲಿದೆ.


Spread the love