ಮಂಗಳೂರು: ನಕಲಿ ಕ್ರೀಡಾ ಸಾಮಾಗ್ರಿಗಳ ಮಾರಾಟ: ಪ್ರಕರಣ ದಾಖಲು
ಮಂಗಳೂರು: ನಕಲಿ ಕ್ರೀಡಾ ಸಾಮಾಗ್ರಿಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಯ ವಿರುದ್ದ ಮಂಗಳೂರು ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Brand Protectors India Pvt. Ltd ನ South India regional head ಸ್ಟೀಫನ್ ರಾಜ್ ರವರ ದೂರಿನ ಪ್ರಕಾರ ಉಳ್ಳಾಲ ಠಾಣಾ ವ್ಯಾಪ್ತಿಯ SPORTS WINNER ಅಂಗಡಿ ಹಾಗೂ ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಮಹಾದೇವ್ ಸ್ಪೋಟ್ಸ್ ಸೆಂಟರ್ ನಲ್ಲಿ COSCO, NIVIA & YONEX ಬ್ರಾಂಡ್ ಎಂದು ಹಾಕಿರುವ ನಕಲಿ ಫುಟ್ ಬಾಲ್ಗಳು, ವಾಲಿಬಾಲ್ ಗಳು ಹಾಗೂ ಬ್ಯಾಡ್ಮಿಂಟನ್ ರಾಕೆಟ್ಗಳು ಮಾರಾಟವಾಗುತ್ತಿರುವ ಬಗ್ಗೆ ದೂರು ನೀಡಿದ ಮೇರೆಗೆ, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 140/2025, ಕಲಂ: 51(1)(b), 63, Copyright Act 1957 ಮತ್ತು ಮಂಗಳೂರು ಉತ್ತರ ಠಾಣೆಯಲ್ಲಿ 95/2025 ಕಲಂ: 51(1)(b), 63, Copyright Act 1957 ರಂತೆ ಪ್ರಕರಣ ದಾಖಲಿಸಿಕೊಂಡು, ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ 18-8-2025 ರಂದು ಮತ್ತು ಮಂಗಳೂರು ಉತ್ತರ ಠಾಣೆ ವ್ಯಾಪ್ತಿಯಲ್ಲಿ ದಿನಾಂಕ 19-8-2025 ರಂದು ದಾಳಿ ಮಾಡಲಾಗಿ ಸುಮಾರು 300 ನಕಲಿ ವಾಲಿಬಾಲ್ಗಳು, ಫುಟ್ ಬಾಲ್ಗಳು ಹಾಗೂ ಬ್ಯಾಡ್ಮಿಂಟನ್ ರಾಕೆಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆ ಮುಂದುವರಿಸಲಾಗಿದೆ.