ಮಂಗಳೂರು ನಗರದ ವಿವಿಧ ಕಾಲೋನಿಗಳ ಅಶಕ್ತರಿಗೆ ಐವನ್ ಡಿಸೋಜಾರಿಂದ ದಿನಸಿ ವಿತರಣೆ

Spread the love

ಮಂಗಳೂರು ನಗರದ ವಿವಿಧ ಕಾಲೋನಿಗಳ ಅಶಕ್ತರಿಗೆ ಐವನ್ ಡಿಸೋಜಾರಿಂದ ದಿನಸಿ ವಿತರಣೆ

ಮಂಗಳೂರು: ಮಂಗಳೂರು ನಗರದ ವಿವಿಧ ಕಾಲನಿಗಳ ಮತ್ತು ಅಶಕ್ತರ ವಿವರಗಳನ್ನು ಪಡೆದು ಅವರಿಗೆ ಬೇಕಾದ ಮೂಲಭೂತ ವಸ್ತುಗಳನ್ನು ಅದರ ಜೊತೆಗೆ ಔಷಧಿಗಳನ್ನು ಕಾಂಗ್ರೆಸ್ ಕಾರ್ಯಕರ್ತರ ಮೂಲಕ ಸ್ವತಃ ವಿಧಾನಪರಿಷತ್ ಶಾಸಕರಾದ ಐವನ್ ಡಿಸೋಜಾ ಮನೆಗಳಿಗೆ ಭೇಟಿ ನೀಡಿ ಅವಶ್ಯ ವಸ್ತುಗಳನ್ನು ವಿತರಿಸಿದರು.

ಕೊರೋನಾ ವೈರಾಣು ಹರಡದಂತೆ ತೆಗೆದುಕೊಳ್ಳುವ ಕ್ರಮದ ಬಗ್ಗೆ ತಿಳಿಸಿದರಲ್ಲದೆ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಮನೆಮನೆಗಳಿಗೆ ಆಹಾರ ವಸ್ತುವನ್ನು ಒದಗಿಸಿಕೊಡುವಲ್ಲಿ ಇರುವ ವ್ಯವಸ್ಥೆಗಳನ್ನು ತಿಳಿಸಿ ಅವಶ್ಯ ವಸ್ತುಗಳನ್ನು ವಿತರಿಸುವಂತೆ ಸಹಾಯಮಾಡುವ ಸ್ವಯಂಸೇವಕರ ಫೋನ್ ನಂಬರ್ ಗಳನ್ನು ತಿಳಿಸಿ, ಅವರ ಮೂಲಕ ಅವಶ್ಯ ವಸ್ತುಗಳನ್ನು ಪಡೆದುಕೊಳ್ಳುವಂತೆ ನಾಗರಿಕರಿಗೆ ಐವನ್ ಡಿಸೋಜಾ ವಿನಂತಿಸಿದರು.

ಅಲ್ಲದೆ ಅನೇಕ ಕಡೆಗಳಲ್ಲಿ ಪಡಿತರ ಚೀಟಿಯ ಅಕ್ಕಿ ವಿತರರಿಸದೇ ಇರುವುದು ಮತ್ತು ಪಿಂಚಣಿ ಯೋಜನೆ ಅನ್ವಯ ದೊರೆಯುವ ಪಿಂಚಣಿ ಹಣ ದೊರಕದೆ ಇರುವ ಬಗ್ಗೆ, ಅಲ್ಲದೆ ಅಂತ್ಯೋದಯ ಪಡಿತರ ಚೀಟಿಗಳಿಗೆ ಅಕ್ಕಿ ವಿತರಣೆ ಮಾಡದೇ ಇರುವ ಬಗ್ಗೆ ದೂರುಗಳು ಇದ್ದು, ಅದನ್ನು ಸಂಬಂಧಪಟ್ಟ ಇಲಾಖೆಗೆ ತಿಳಿಸಿ ಕೂಡಲೇ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳನ್ನು ವಿನಂತಿಸಿದರು.

ಅಸಮರ್ಪಕ ಊಟವನ್ನು ನೀಡಿದ್ದಾರೆಂಬ ದೂರಿನನ್ವಯ ಮಂಗಳೂರು ಹಾಸ್ಟೆಲ್ಗಳಲ್ಲಿ ವಾಸವಾಗಿರುವ 250ಕ್ಕೂ ಅಧಿಕ ಜನರಿಗೆ ಆಶ್ರಯ ನೀಡಿದ್ದು ಆ ಪ್ರದೇಶಕ್ಕೆ ಭೇಟಿ ನೀಡಿ ಆಹಾರದ ಗುಣಮಟ್ಟವನ್ನು ಪರಿಶೀಲಿಸಿ ದರಲ್ಲದೆ ನಿರಾಶ್ರಿತರಿಗೆ ಹಾಸ್ಟೆಲ್ಗಳಲ್ಲಿ ಆಹಾರವನ್ನು ತಯಾರಿಸಿ ನೀಡಬೇಕೆಂದು ಆರೋಗ್ಯ ಮತ್ತು ಆಹಾರ ಇಲಾಖೆಗೆ ಬೇಡಿಕೆಯನ್ನು ನೀಡಲಾಗಿದ್ದು, ಸ್ವಚ್ಛತೆಯನ್ನು ಕಾಪಾಡಬೇಕೆಂದು ಅಧಿಕಾರಿಗಳಿಗೆ ವಿನಂತಿಸಿದರು.

ನಗರದ ಅನೇಕ ಕಡೆಗಳಲ್ಲಿ ಹಿರಿಯರು ವಾಸವಾಗಿದ್ದು ಅವರಿಗೆ ವಾಹನದ ಸೌಕರ್ಯವನ್ನು ಬಳಸಲು 12.00 ಗಂಟೆಯವರೆಗೆ ಅವಕಾಶ ನೀಡಬೇಕೆಂದು ಮತ್ತು ಪಡಿತರ ಸಾಮಗ್ರಿ ಕೊಂಡೊಯ್ಯುವ ವಾಹನಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ವಿನಂತಿಸಲಾಗಿದೆ.

ಈ ಸಂದರ್ಭದಲ್ಲಿ ಐವನ್ ಡಿಸೋಜ ರವರ ಜೊತೆಗೆ ಶಾಸಕರಾದ ಯುಟಿ ಖಾದರ್ ಅಭಿಬಲ್ಲ, ಅಲ್ಸ್ಟೈನ್ ಡಿ’ಕುನ್ಹ ಜೊತೆಗಿದ್ದರು.


Spread the love