ಮಂಗಳೂರು ನಗರ ಕೇಂದ್ರ ರೌಡಿ ನಿಗ್ರಹ ದಳದ ಪೊಲೀಸರಿಂದ ಇಬ್ಬರು ಸರಗಳ್ಳರ ಬಂಧನ

Spread the love

ಮಂಗಳೂರು ನಗರ ಕೇಂದ್ರ ರೌಡಿ ನಿಗ್ರಹ ದಳದ ಪೊಲೀಸರಿಂದ ಇಬ್ಬರು ಸರಗಳ್ಳರ ಬಂಧನ

ಮಂಗಳೂರು : ಮಂಗಳೂರು ನಗರ ವ್ಯಾಪ್ತಿಯಲ್ಲಿ ನಡೆದ ಸರಗಳ್ಳತನ ಪ್ರಕರಣ ಗಳನ್ನು ಮಂಗಳೂರು ನಗರದ ಕೇಂದ್ರ ಉಪ ವಿಭಾಗದ ರೌಡಿ ನಿಗ್ರಹ ದಳದ ಪೊಲೀಸರು ಕಾರ್ಯಾಚರಣೆ ನಡೆಸಿ 07 ಸರಗಳ್ಳತನ ಪ್ರಕರಗಳಿಗೆ ಸಂಬಂಧಿಸಿ ಆರೋಪಿಗಳ ವಶದಿಂದ ರೂ.3,64.000/- ಮೌಲ್ಯದ ಒಟ್ಟು 126.960 ಗ್ರಾಂ ಚಿನ್ನದ ಆಭರಣಗಳು ಮತ್ತು ಆಕ್ಟಿವಾ ಸ್ಕೂಟರ್ ಸಮೇತ ಒಟ್ಟು 3,74.000/- ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿರುತ್ತಾರೆ.

 

ಬಂಧಿತರನ್ನು ಮಂಗಳೂರು ದೇರಳಕಟ್ಟೆ ನಿವಾಸಿ ಹರೀಶ್ ಎಸ್ ನಾಥ್ (45) ಮತ್ತು ಕಂಕನಾಡಿ ನಿವಾಸಿ ರಾಜೇಶ್ (45) ಎಂದು ಗುರುತಿಸಲಾಗಿದೆ.

ಮಂಗಳೂರು ನಗರದಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯರ ಕತ್ತಿನಲ್ಲಿದ್ದ ಚಿನ್ನದ ಸರಗಳನ್ನು ಆಕ್ಟೀವಾ ಸ್ಕೂಟರ್ ನಲ್ಲಿ ಬರುವ ಇಬ್ಬರು ಸುಲಿಗೆ ಮಾಡಿಕೊಂಡು ಹೋದ ಬಗ್ಗೆ ಉರ್ವ ಪೊಲೀಸ್ ಠಾಣೆ ಯಲ್ಲಿ1 ಪ್ರಕರಣ, ಬರ್ಕೆ ಪೊಲೀಸ್ ಠಾಣೆಯಲ್ಲಿ 2. ಪ್ರಕರಣ, ಕದ್ರಿ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ,ಕಾವೂರು ಠಾಣೆಯಲ್ಲಿ 1 ಪ್ರಕರಣ ಮತ್ತು ದಕ್ಷಿಣ ಠಾಣೆ ಯಲ್ಲಿ 2 ಸುಲಿಗೆ ಯತ್ನ ಪ್ರಕರಣಗಳು ದಾಖಲಾಗಿರುತ್ತವೆ.

ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರಾದ  ಟಿ ಆರ್ ಸುರೇಶ್ ಐಪಿಎಸ್, ಮಾನ್ಯ ಉಪ ಪೊಲೀಸ್ ಆಯುಕ್ತರು (ಕಾ&ಸು), ಹನುಮಂತರಾಯ ಐಪಿಎಸ್ , ಉಪ ಪೊಲೀಸ್ ಆಯುಕ್ತರು(ಅಪರಾಧ & ಸಂಚಾರ) ಉಮಾ ಪ್ರಶಾಂತ, ಸಹಾಯಕ ಪೊಲೀಸ್ ಆಯುಕ್ತರು,ಕೇಂದ್ರ ಉಪ ವಿಭಾಗ,ಮಂಗಳೂರು ನಗರ ಭಾಸ್ಕರ ಒಕ್ಕಲಿಗ, ಹಾಗೂ ಕೇಂದ್ರ ಉಪ ವಿಭಾಗ ರೌಡಿ ನಿಗ್ರಹ ದಳದ ಪೊಲೀಸ್ ನಿರೀಕ್ಷಕರಾದ  ರವೀಶ್ ಎಸ್ ನಾಯಕ್, ಪೊಲೀಸ್ ಉಪ ನಿರೀಕ್ಷಕರಾದ ಪ್ರದೀಪ ಟಿ ಆರ್ ಹಾಗೂ ಸಿಬ್ಬಂದಿಗಳಾದ ವೆಲೆಸ್ಟೀನ್ ಜಾರ್ಜ್ ಡಿ ಸೋಜಾ, ಗಂಗಾಧರ ಎನ್, ಸಂತೋಷ ಸಸಿಹಿತ್ಲು, ಕಿಶೋರ್ ಕೋಟ್ಯಾನ್,ಪ್ರಮೋದ್ ಮೇರಿಹಿಲ್, ನಾಗರಾಜ ಚಂದರಗಿ, ಬಸವರಾಜ ನಾಯ್ಕರ ರವರು ಭಾಗವಹಿಸಿರುತ್ತಾರೆ.


Spread the love