ಮಂಗಳೂರು: ನರೇಂದ್ರ ಮೋದಿ ದೇಶದ 130 ಕೋಟಿ ಭಾರತೀಯರನ್ನು ಆಶ್ವಾಸನೆಗಳಿಂದ ಹೀಯಾಳಿಸಿದ್ದಾರೆ – ಜನಾರ್ದನ ಪೂಜಾರಿ

Spread the love

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ದೇಶದ 130 ಕೋಟಿ ಭಾರತೀಯರನ್ನು ತನ್ನ ಸುಳ್ಳು ಆಶ್ವಾಸನೆಗಳಿಂದ ಹೀಯಾಳಿಸಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮಾಜಿ ಕೇಂದ್ರ ಸಚಿವ ಬಿ ಜನಾರ್ದನ ಪೂಜಾರಿ ಆರೋಪಿಸಿದ್ದಾರೆ.

ಅವರು ನಗರದಲ್ಲಿ ಶನಿವಾರ ಸುದ್ದಿಗೋಷ್ಟಿಯನ್ನು ಉದ್ದಶೀಸಿ ಮಾತನಾಡಿ ಬಿಜೆಪಿ ಪಕ್ಷವು ರಾಜ್ಯ ಸರಕಾರ ಆಯೋಜಿಸಿದ ಸಾಧನಾ ಸಮಾವೇಶವನ್ನು ಟೀಕೆ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಕೇಂದ್ರದ ಯೋಜನೆಗಳನ್ನು ತಮ್ಮ ಯೋಜನೆಗಳು ಎಂದು ಸುಳ್ಳು ಹೇಳುತ್ತಿದೆ ಎಂದು ಬಿಜೆಪಿ ನಾಯಕರು ಆರೋಪ ಮಾಡುತ್ತಿದ್ದಾರೆ. ದೇಶದಲ್ಲಿ ಯಾವುದೇ ರಾಜ್ಯ ಬಡವರಿಗೆ ಉಚಿತ ಅಕ್ಕಿಯನ್ನು ನೀಡಲ್ಲ ಆದರೆ ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಬಡವರಿಗೆ ಉಚಿತ ಅಕ್ಕಿಯನ್ನು ಪಡೆಯುವ ಭಾಗ್ಯ ದೊರೆಯಿತು. ರಾಜ್ಯದ ಮಾಜಿ ಮುಖ್ಯಮಂತ್ರಿ ಯಡ್ಯೂರಪ್ಪ ಕಾಂಗ್ರೆಸ್ ಸರ್ಕಾರವನ್ನು ಹೀಯಾಳಿಸುತ್ತಿದ್ದಾರೆ ಕರ್ನಾಟಕದ ಇತಿಹಾಸದಲ್ಲಿ ಜೈಲಿಗೆ ಹೋದ ಮುಖ್ಯಮಂತ್ರಿ ಇದ್ದರೆ ಅದು ಯಡ್ಯೂರಪ್ಪ ಹೀಗೀರುವಾಗ ಅವರಿಗೆ ಸಿದ್ದರಾಮಯ್ಯರವರನ್ನು ಟೀಕಿಸುವ ಯಾವುದೇ ನೈತಿಕ ಹಕ್ಕಿಲ್ಲ ಎಂದರು.

ಯಡ್ಯೂರಪ್ಪನವರ ಮಗ, ಅಳಿಯ ಪ್ರತಿಯೊಬ್ಬರ ಮೇಲೆ ಪ್ರಕರಣಗಳು ದಾಖಲಾಗಿವೆ. ಅವರು ರಾಜ್ಯದ ಮಾನವನ್ನು ಹರಾಜು ಹಾಕಿದ್ದು ಕಾಂಗ್ರೆಸ್ ಸರ್ಕಾರದ ಸಾಧನೆ ಶೂನ್ಯ ಎಂಬ ಹೇಳಿಕೆ ನೀಡುತ್ತಿದ್ದಾರೆ ಇಂತಹ ಹೇಳಿಕೆ ನೀಡಲು ನಾಚಿಕೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.

poojary-pm-23052015 (19)

ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಚುನಾವಣಾ ಪೂರ್ವದಲ್ಲಿ ನೀಡದ ಭರವಸೆಗಳಲ್ಲಿ 95 ಈಗಾಗಲೇ ಪೊರೈಸಿದ್ದೇವೆ. ಬಿಪಿಎಲ್ ಕಾರ್ಡ್ದಾರರು ಉಚಿತ ಅಕ್ಕಿಯೊಂದಿಗೆ ವಿವಿಧ ಸೌಲಭ್ಯಗಳನ್ನು ಇಂದು ಪಡೆಯುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ಮೊದಲು ಯಡ್ಯೂರಪ್ಪ ತನ್ನ ಪಕ್ಷವನ್ನು ನೋಡಿಕೊಳ್ಳಲಿ. ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ತನ್ನದೆ ಕ್ಯಾಬಿನೆಟಿನ ಮಂತ್ರಿಗಳನ್ನು ಹಿಡಿತದಲ್ಲಿಡಲು ಸಾಧ್ಯವಾಗಿಲ್ಲ ಆದರೆ ಸಿದ್ದರಾಮಯ್ಯ ಸರಕಾರದಲ್ಲಿ ಎಲ್ಲಾ ಮಂತ್ರಿಗಳು ಒಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ರಘುಪತಿ ಭಟ್ ಪತ್ನಿ ನಿಘೂಡವಾಗಿ ಸಾವನಪ್ಪಿದಾಗ ಈ ಪೂಜಾರಿ ಯಾವುದೇ ರೀತಿಯಲ್ಲಿ ದನಿ ಎತ್ತಿಲ್ಲ ಆದರೆ ಸುಳ್ಳು ಆರೋಪಗಳನ್ನು ಸಿದ್ದರಾಮಯ್ಯ ಸರಕಾರದ ಮೇಲೆ ಹೊರಿಸಿದಾಗ ಕೇಳಿ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಕಾರಣ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಸಂಪೂರ್ಣ ಅಭಿವೃದ್ಧಿ ಹೊಂದಲಿದೆ. ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತ ಒಟ್ಟಾಗಿ ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದರು.

ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮೊದಲು ಕಪ್ಪು ಹಣ ತರುವುದಾಗಿ ಭಾಷಣ ಬಿಗಿದರು ಆದರೆ ಅವರು ತಮ್ಮ ಭರವಸೆಯನ್ನು ಉಳಿಸಿಕೊಳ್ಳಲು ಇಂದಿಗೂ ಸಾಧ್ಯವಾಗಿಲ್ಲ. ಭೂಸ್ವಾಧಿನ ಮಸೂದೆಯನ್ನು ಕಾರ್ಪೊರೇಟ್ ಪರವ್ಯಕ್ತಿಗಳಿಗೆ ಲಾಭವಾಗುವ ದೃಷ್ಟಿಯಿಂದ ತರಲು ಹೊರಟಿರುವ ಮೋದಿ ರೈತರಿಗಾಗಿ ಏನನ್ನು ಮಾಡಿಲ್ಲ. ರೈತರಿಗೆ ಸಹಾಯ ಮಾಡುವ ಬದಲು ಅವರ ಭೂಮಿಯನ್ನು ಕಿತ್ತು ಉದ್ಯಮಿಗಳಿಗೆ ನೀಡುವ ಹುನ್ನಾರವನ್ನು ಮೋದಿ ನಡೆಸುತ್ತಿದ್ದಾರೆ. ದೇಶದಲ್ಲಿ ಎಲ್ಲಾ ವಸ್ತುಗಳ ಬೆಲೆ ಏರುತ್ತಿದ್ದು ಅದನ್ನು ನಿಯಂತ್ರಿಸಲು ಸಂಪೂರ್ಣ ಸೋತಿದ್ದಾರೆ. ಕಾಂಗ್ರೆಸ್ ತನ್ನ ಸಮಯದಲ್ಲಿ ಹಲವು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿತ್ತು ಆದರೆ ಸರಿಯಾದ ಪ್ರಚಾರ ನೀಡಲು ವಿಫಲವಾಯಿತು ಆದರೆ ನರೇಂದ್ರ ಮೋದಿ ದೇಶದ 130 ಕೋಟಿ ಜನರಿಗೆ ಸುಳ್ಳು ಭರವಸೆ ನೀಡಿ ವಂಚಿಸಿದ್ದಾರೆ. ಅಲ್ಲದೆ ವಿದೇಶದಲ್ಲ ಹೋಗಿ ದೇಶದಲ್ಲ ಹುಟ್ಟಿದ್ದು ತಪ್ಪಿ ಎಂದು ಹೇಳಿ ದೇಶದ ಮಾನವನ್ನು ಹರಾಜು ಹಾಕುವ ಕೆಲಸವನ್ನು ಮಾಡಿದ್ದಾರೆ ಎಂದರು.

ಮಹಿಳೆಯನ್ನು ದೇವರು ಎಂದು ಪೂಜಿಸುವ ಭಾರತದಲ್ಲಿ ಮೋದಿ ತನ್ನ ಸ್ವಂತ ಪತ್ನಿಯನ್ನು ನಡೆಸಿಕೊಂಡ ರೀತಿ ಬಿಜೆಪಿಯವರ ಮಹಿಳೆಯರ ಮೇಲಿನ ಗೌರವ ತೋರಿಸುತ್ತದೆ. ಮೋದಿಯ ಪತ್ನಿ ತನ್ನ ಭದ್ರತೆಯ ಕುರಿತು ಮಾಹಿತಿ ಹಕ್ಕಿನಲ್ಲಿ ಕೇಳಿ ಕೇಳಿ ಸೋತು ಕಣ್ಣಿರು ಹಾಕುತ್ತಿದ್ದು ಮೋದಿಗೆ ಕಾಣಿಸುತ್ತಿಲ್ಲ. ಸಂಸ್ಕೃತಿ ರಕ್ಷಣೆಯ ಹೆಸರಿನಲ್ಲಿ ಕೆಲಸ ಮಾಡುತ್ತಿರುವ ಹಿಂದು ಸಂಘಟನೆಗಳು ಗಮನ ಹರಿಸಿ ಅವರಿಗೆ ರಕ್ಷಣೆ ನೀಡಬೇಕು ಎಂದರು.

ಕಾಂಗ್ರೆಸ್ ನಾಯಕ ಹರಿಕೃಷ್ಣ ಬಂಟ್ವಾಳ್, ಮಹಾಬಲ ಮಾರ್ಲ, ಸುರೇಶ್ ಬಲ್ಲಾಳ್ ಇನ್ನಿತರರು ಉಪಸ್ಥಿತರಿದ್ದರು.


Spread the love