ಮಂಗಳೂರು: ಪೋಸ್ಟ್ ಮ್ಯಾನ್ ಗೆ ರಾಡಿನಿಂದ ಹಲ್ಲೆ ನಡೆಸಿ ಕಾಗದ ಪತ್ರಗಳನ್ನು ಎಸೆದ ಯುವಕ

Spread the love

ಪೋಸ್ಟ್ ಮ್ಯಾನ್ ಗೆ ರಾಡಿನಿಂದ ಹಲ್ಲೆ ನಡೆಸಿ ಕಾಗದ ಪತ್ರಗಳನ್ನು ಎಸೆದ ಯುವಕ

ಮಂಗಳೂರು: ಯವಕನೋರ್ವ ನಗರದ ಅಶೋಕನಗರ ಅಂಚೆ ಕಚೇರಿಯ ಪೋಸ್ಟ್ ಮ್ಯಾನ್ ಮೇಲೆ ಯುವಕನೊಬ್ಬ ರಾಡ್ ನಿಂದ ಹಲ್ಲೆ ಕಾಗದ ಪತ್ರಗಳನ್ನು ಎಸೆದು ಗೂಂಡಾಗಿರಿ ಮೆರೆದ ಘಟನೆ ನಗರದ ಮಠದಕಣಿ ಬಳಿ ಸಂಭವಿಸಿದೆ

ಗಾಯಗೊಂಡ ಪೋಸ್ಟ್ ಮ್ಯಾನ್ ಅವರನ್ನು ಕೋಟೆಕಾರ್ ನಿವಾಸಿ ದಿನೇಶ್ (49) ಎಂದು ಗುರುತಿಸಲಾಗಿದ್ದು, ಮನೀಶ್ ಎಂಬಾತ ಆರೋಪಿಯಾಗಿದ್ದಾನೆ.

ದಿನೇಶ್ ಕಳೆದ 19 ವರ್ಷಗಳಿಂದ ಅಶೋಕನಗರ ಅಂಚೆ ಕಚೇರಿ ಪೋಸ್ಟ್ ಮ್ಯಾನ್ ಆಗಿದ್ದು ಮಂಗಳವಾರ ಎಂದಿನಂತೆ ಕಚೇರಿಯಿಂದ ಕಾಗದ ಬಟವಾಡೆ ಮಾಡಲು ತೆರಳಿದ್ದಾಗ ಮಠದಕಣಿ ನಿವಾಸಿ ಮನೀಶ್ ಗೆ ರಿಜಿಸ್ಟರ್ ಕಾಗದ ಬಂದಿದ್ದು ಅದನ್ನು ಕೊಡಲು ಹೋದಾಗ ಕೆಟ್ಟ ಭಾಷೆ ಪ್ರಯೋಗಿಸಿ ಬೈದಿದ್ದಲ್ಲದೆ ರಾಡ್ ಹಿಡಿದು ಹೊರಬಂದು ಏಕಾಏಕಿ ಹಲ್ಲೆ ಮಾಡಿದ್ದಾನೆ.

ಪೋಸ್ಟ್ ಮ್ಯಾನ್ ಅಲ್ಲಿಂದ ಓಡಿ ತಪ್ಪಿಸಿಕೊಂಡಿದ್ದು ಆರೋಪಿ ಅವರ ಬೈಕ್ ಪುಡಿಗಟ್ಟಿದ್ದಾನೆ. ಈ ವೇಳೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ಅವರು ಸ್ಥಳಕ್ಕೆ ಆಗಮಿಸಿದರೂ ಕೇರ್ ಮಾಡದೇ ರಾಡ್ ಹಿಡಿದು ಬೆದರಿಸಿದ್ದಾನೆ ಎನ್ನಲಾಗಿದೆ. ಪೋಸ್ಟ್ ಕಾಗದ ಪತ್ರಗಳನ್ನು ಎಸೆದಿದ್ದು ತಮಗೆ 35,000 ರೂ. ನಷ್ಟ ಉಂಟಾಗಿದೆ ಪೋಸ್ಟ್ ಮ್ಯಾನ್ ದಿನೇಶ್ ಆರೋಪಿಸಿದ್ದಾರೆ.

ಘಟನೆಯ ಕುರಿತು ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.


Spread the love