ಮಂಗಳೂರು: ರಾಜಕಾಲುವೆಗೆ ಬಿದ್ದು ಆಟೋ ಚಾಲಕ ಮೃತ್ಯು

Spread the love

ಮಂಗಳೂರು: ರಾಜಕಾಲುವೆಗೆ ಬಿದ್ದು ಆಟೋ ಚಾಲಕ ಮೃತ್ಯು

ಮಂಗಳೂರು: ನಗರದಲ್ಲಿ ನಿರಂತರ ಸುರಿದ ಮಳೆಗೆ ಮಧ್ಯರಾತ್ರಿ ವೇಳೆಗೆ ಕೊಟ್ಟಾರ ಚೌಕಿ ಆಸುಪಾಸು ಜಲಾವೃತಗೊಂಡಿದ್ದು, ಓರ್ವ ಆಟೋ ಚಾಲಕ ಕೊಟ್ಟಾರ ಬಳಿ ರಾಜಾಕಾಲುವೆಗೆ ಬಿದ್ದು ಮೃತಪಟ್ಟಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಮೃತರನ್ನು ಕೊಟ್ಟಾರ ನಿವಾಸಿ ದೀಪಕ್ ಆಚಾರ್ಯ (44) ಎಂದು ಗುರುತಿಸಲಾಗಿದೆ.

ಆಟೋ ಸಹಿತ ಚಾಲಕ ನೀರಿಗೆ ಬಿದ್ದಿರುವುದು ಘಟನೆ ನಡೆದ ಸ್ವಲ್ಪ ಹೊತ್ತಿನ ಬಳಿಕ ಬೆಳಕಿಗೆ ಬಂದಿದ್ದು, ಕೂಡಲೇ ಅಗ್ನಿಶಾಮಕ ದಳದ ನೆರವಿನೊಂದಿಗೆ ಕಾಯಾಚರಣೆ ನಡೆಸಲಾಯಿತಾದರೂ ದೀಪಕ್ ಅಷ್ಟು ಹೊತ್ತಿಗೆ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.


Spread the love

Leave a Reply