ಮಂಗಳೂರು : ರೋಹಿತ್ ವೆಮುಲಾ ಆತ್ಮಹತ್ಯೆ ಪ್ರಕರಣ: ಮಂಗಳೂರು ವಿ.ವಿ ಬಂದ್ ಹಾಗೂ ಪ್ರತಿಭಟನೆ

Spread the love

ಮಂಗಳೂರು : ಹೈದರಾಬಾದ್ ಕೇಂದ್ರೀಯ ವಿವಿ ಸಂಶೋಧನಾ ವಿಧ್ಯಾರ್ಥಿ ರೋಹಿತ್ ವೆಮುಲಾರ ಆತ್ಮಹತ್ಯೆಗೆ ಕಾರಣರಾದವರನ್ನು ಬಂಧಿಸಿ ಶಿಕ್ಷಿಸಲು ಒತ್ತಾಯಿಸಿ ಪ್ರಗತಿಪರ ವಿಧ್ಯಾರ್ಥಿ ಸಂಘಟನೆಗಳು ರಾಜ್ಯವ್ಯಾಪಿ ವಿವಿ ಬಂದ್ ಕರೆಯ ಭಾಗವಾಗಿ ಮಂಗಳೂರು ವಿವಿ ಬಂದ್ ಆಚರಿಸಿತು.
ಬಂದ್ ನಂತರದಲ್ಲಿ ವಿವಿ ಮುಖ್ಯ ದ್ವಾರದ ಬಳಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಬಿ.ವಿ.ಎಸ್ ಮುಖಂಡ ರಘು ಮಾತನಾಡಿ “ಒಬ್ಬ ವಿಧ್ಯಾರ್ಥಿ ಆತ್ಮಹತ್ಯೆ ಪ್ರಕರಣದ ನಂತರದಲ್ಲಿ ಆತ್ಮಹತ್ಯೆಗೆ ಕಾರಣರಾದವರನ್ನು ಶಿಕ್ಷಿಸುವ ಬದಲಾಗಿ ಆಠತನ ಜಾತಿಯ ಕುರಿತು ಚರ್ಚೆಗಳು ಈ ದೇಶದಲ್ಲಿ ನಡೆಯುತ್ತಿರುವುದು ದುರಂತ” ಎಂದು ಹೇಳಿದರು.
ಎಸ್.ಎಫ್.ಐ ಜಿಲ್ಲಾ ಕಾರ್ಯದರ್ಶಿ ಮಾತನಾಡಿ “ಭಾರತದಲ್ಲಷ್ಟೇ ಅಲ್ಲದೇ ವಿದೇಶದಲ್ಲೂ ರೋಹಿತ್ ಪರ ಪ್ರತಿಭಟನೆಗಳು ನಡೆದಿವೆ. ಆದರೆ ಸರಕಾರ ಆರೂಪಿಗಳ ಶಿಕ್ಷೆ ಏಕೆ ನಡೆಸುತ್ತಿಲ್ಲ” ಎಂದು ಪ್ರಶ್ನಿಸಿದರು.
ಈ ಸಂಧರ್ಭದಲ್ಲಿ ಸುರೇಶ್ ಬಿ, ಮಾಧುರಿ ಬೋಳಾರ್, ಹಂಝ ಕಿನ್ಯಾ, ರಾಜಶೇಖರ್, ಸಾತ್ವಿಕ್, ಹರೀಶ್ ಮುಂತಾದವರು ಮಾತನಾಡಿದರು.ಪ್ರತಿಭಟನೆಯ ನೇತೃತ್ವವನ್ನು ವಿವಿ ವಿಧ್ಯಾರ್ಥಿಗಳಾದ ಸಣ್ಣಪ್ಪ, ಹರೀಶ್, ಮುಸ್ತಫಾ, ಲಿಮಿತಾ, ಅಶ್ವಿದ್ ನಾಝಿಂ ವಹಿಸಿದರು


Spread the love