ಮಂಗಳೂರು: ಲವ್ ಜಿಹಾದ್ ಕುರಿತ ರಹಸ್ಯ ಕಾರ್ಯಾಚರಣೆಯ ಕುರಿತು ಸಿಬಿಐ ತನಿಖೆಯಾಗಲಿ; ಮುಸ್ಲಿಂ ಸೆಂಟ್ರಲ್ ಕಮಿಟಿ

Spread the love

ಮಂಗಳೂರು: ಲವ್ ಜಿಹಾದ್ ಕುರಿತಾಗಿ ನಡೆದ ರಹಸ್ಯ ಕಾರ್ಯಾಚರಣೆಯ ಕುರಿತು ಸಮಗ್ರವಾದ ಸಿಒಡಿ ತನಿಖೆ ನಡೆಸಬೇಕು ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿ ಒತ್ತಾಯ ಮಾಡಿದೆ.

4-love-jihad-muslim-central-committee-press-003 1-love-jihad-muslim-central-committee-press 2-love-jihad-muslim-central-committee-press-001 3-love-jihad-muslim-central-committee-press-002

ಈ ಕುರಿತು ಮುಸ್ಲಿಂ ಸೆಂಟ್ರಲ್ ಕಮಿಟಿ ಇದರ ಕೆ ಎಸ್ ಮೊಹಮ್ಮದ್ ಮಸೂದ್ ಗುರುವಾರ ಹೋಟೇಲ್ ವುಡ್ ಲ್ಯಾಂಡ್ ನಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಲವ್ ಜಿಹಾದ್ ಬಗ್ಗೆ ನಾವು ನಂಬದೇ ಹೋದರು ಜಿಲ್ಲೆಯ ಕೆಲವೊಂದು ನಾಯಕರು ನೀಡಿರುವ ಹೇಳಿಕೆಗಳೀಗೆ ನಮಗೆ ಉತ್ತರ ಬೇಕಾಗಿದೆ. ಸಂಘಪರಿವಾರದವರ ಕುರಿತಾಗಿ ಕಳೆದ ಮೂರು ದಿನಗಳಲ್ಲಿ ಮಾಧ್ಯಮಗಳಲ್ಲಿ ವಿವಿಧ ರೀತಿಯ ಸುದ್ದಿಗಳು ಪ್ರಕಟವಾಗುತ್ತಿದ್ದರೂ ಕೂಡ ಗೃಹ ಇಲಾಖೆ ಈ ಕುರಿತು ಯಾವುದೇ ರೀತಿಯ ಪ್ರಕರಣದ ತನಿಖೆಯ ಕುರಿತು ಆಸಕ್ತಿ ವಹಿಸುತ್ತಿಲ್ಲ. ಮುಸ್ಲಿಂ ಸೆಂಟ್ರಲ್ ಕಮಿಟಿ ಪೋಲಿಸ್ ಕಮೀಶನರ್ ಅವರನ್ನು ಭೇಟಿಯಾಗಿ ಕ್ರಮ ಕೈಗೊಳ್ಳಲು ಮನವಿ ಸಲ್ಲಿಸಲಾಗಿದೆ.

ಬಿಜೆಪಿ ಶಾಸಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರ ಹೇಳಿಕೆಯನ್ನು ಪ್ರಸ್ತಾಪಿಸಿ ಮಸೂದ್ ಪೋಲಿಸ್ ಇಲಾಖೆಯಲ್ಲಿನ 60% ಪೋಲಿಸರು ಆರ್ ಎಸ್ ಎಸ್ ಕಾರ್ಯಕರ್ತರಾಗಿದ್ದಾರೆ ಎಂಬ ಹೇಳಿಕೆ, ಲವ್ ಜಿಹಾದ್ ಕುರಿತು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತನ್ನ ಹೇಳಿಕೆಯನ್ನು ನೀರಾಕರಿಸಬೇಕು ಇಲ್ಲವಾದಲ್ಲಿ ಅವರ ವಿರುದ್ದ ಗೃಹ ಇಲಾಖೆ ಉನ್ನತ ಮಟ್ಟದ ತನಿಖೆಯನ್ನು ನಡೆಸಬೇಕು ಎಂದರು.

ಮುಸ್ಲಿಂ ಸಂಘಟನೆಗಳು  ಲವ್ ಜಿಹಾದ್ ರಹಸ್ಯ ಕಾರ್ಯಾಚರಣೆಯ ಕುರಿತಾಗಿ ಸಮಗ್ರ ತನಿಖೆ ನಡೆಸಲು ಒಂದು ತಿಂಗಳ ಕಾಲಾವಾಕಾಶವನ್ನು ನೀಡುತ್ತಿದ್ದು, ಇದರಲ್ಲಿ ಯಾರೆಲ್ಲಾ ಸೇರಿಕೊಂಡಿದ್ದಾರೆ ಎನ್ನುವುದು ಬಯಲಾಗಬೇಕಾಗಿದೆ. ಪ್ರಕರಣವನ್ನು ಸಿಬಿಐ ಅಥವಾ ಸಿಒಡಿಗೆ ವಹಿಸಲು ವಿಳಂಬ ಮಾಡಿದ್ದಲ್ಲಿ ಮುಂದಿನ ದಿನಗಳಲ್ಲಿ ಅಹಿತಕರ ಘಟನೆಗಳಿಗೆ ಜಿಲ್ಲೆ ಸಾಕ್ಷಿಯಾಗಲಿದೆ ಇದಕ್ಕೆ ಗೃಹ ಇಲಾಖೆ ಸಂಪೂರ್ಣ ಜವಾಬ್ದಾರಿಯಾಗಲಿದೆ ಎಂದರು.

ಸೆಂಟ್ರಲ್ ಕಮೀಟಿ ನೇರವಾಗಿ ಯಾರನ್ನು ನೇರವಾಗಿ ದೂಷಣೆ ಮಾಡುವುದಿಲ್ಲ ಆದರೆ ಇದರ ಬಗ್ಗೆ ತನಿಖೆ ನಡೆಸುವ ಜವಾಬ್ದಾರಿ ಗೃಹ ಇಲಾಖೆಯದ್ದಾಗಿದ್ದು, ಮುಸ್ಲಿಂ ಸಮುದಾಯಕ್ಕೆ ನ್ಯಾಯ ಒದಗಿಸಬೇಕಾಗಿದೆ. ಸಮಾಜದಲ್ಲಿ ಶಾಂತಿಯನ್ನು ಬಯಸುವ ನಾವು ಅನಗತ್ಯ ಟೀಕೆಗೆ ಗುರಿಯಾಗುತ್ತಿದ್ದೇವೆ, ಹಾಗೆಂದು ನಾವು ಸುಮ್ಮನೆ ಕುಳಿತು ಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಗ್ರಹ ಇಲಾಖೆ ಇದನ್ನು ಕೂಡಲೇ ಸಿಒಡಿ ಅಥವಾ ಸಿಬಿಐಗೆ ವಹಿಸಬೇಕೆ ವಿನಃ ಸ್ಥಳೀಯ ಪೋಲಿಸರಲ್ಲಿ ನಮಗೆ ನಂಬಿಕೆ ಇಲ್ಲ ಇದಕ್ಕೆ ಕಾರಣ ಗಣೇಶ್ ಕಾರ್ಣಿಕ್ ಅವರ ಹೇಳಿಕೆ ನಮಗೆ ಆತಂಕ ಉಂಟು ಮಾಡಿದೆ ಎಂದರು.

ಮುಸ್ಲಿಂ ಸೆಂಟ್ರಲ್ ಕಮಿಟಿ ಸದಸ್ಯರಾದ ಅಶ್ರಫ್, ಬಾಶಾ ತಂಗಳ್, ಅಬೂಬಕ್ಕರ್ ಹನೀಫ್, ಎ ಎಮ್ ಮುಸ್ತಾಫ, ಅಸ್ಲಾಂ, ರಿಜಾಉದ್ದಿನ್ ಮತ್ತು ಅಹಮ್ಮದ್ ಬಾವಾ ಉಪಸ್ಥಿತರಿದ್ದರು.


Spread the love