ಮಂಗಳೂರು| ವಿಕಲಚೇತನ ಕ್ರೀಡಾಪಟುಗಳಿಗೆ ಧನಸಹಾಯ : ಅರ್ಜಿ ಆಹ್ವಾನ
ಮಂಗಳೂರು: 2025-26ನೇ ಸಾಲಿಗೆ ಸಾಧನೆ ಯೋಜನೆಯಡಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿರುವ ವಿಕಲಚೇತನರ ಕ್ರೀಡಾಪಟುಗಳಿಗೆ ಗರಿಷ್ಠ ರೂ.50 ಸಾವಿರ ಧನ ಸಹಾಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ವಿಕಲಚೇತನರ ಫಲಾನುಭವಿಗಳು ಆನ್‍ಲೈನ್ ಸೇವಾಸಿಂಧು ತಂತ್ರಾಂಶದ (https://sevasindhuservices.karnataka.gov.in) ಮೂಲಕ ಗ್ರಾಮ ಒನ್, ಕರ್ನಾಟಕ ಒನ್, ಮಂಗಳೂರು ಒನ್ ಹಾಗೂ ನೇರವಾಗಿಯೂ ಸಹ ತಮ್ಮ ಲಾಗಿನ್ ಬಳಸಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನ ಜನವರಿ 31.
ಈ ಯೋಜನೆಗೆ ವಿಕಲಚೇತನರ ಗುರುತಿನ ಚೀಟಿ ಯುಡಿಐಡಿ ಕಾರ್ಡ್, ಆಧಾರ್ ಕಾರ್ಡ್, ಕ್ರೀಡಾಕೂಟದ ಆಮಂತ್ರಣ ಪತ್ರಿಕೆ, ಕ್ರೀಡಾಕೂಟಕ್ಕೆ ಭಾಗವಹಿಸಿದ ಬಗ್ಗೆ ಭಾಗವಹಿಸಿರುವ ಪ್ರಮಾಣ ಪತ್ರ ಅಥವಾ ಪ್ರಶಸ್ತಿ ಪ್ರಮಾಣ ಪತ್ರ, ಕ್ರೀಡಾಕೂಟಕ್ಕೆ ಭಾಗವಹಿಸಿರುವ ಬಗ್ಗೆ ಭಾವಚಿತ್ರಗಳು, ಪ್ರಯಾಣವೆಚ್ಚದ ಹಾಗೂ ಪೋಷಾಕುಗಳನ್ನು ಖರೀದಿಸಿದ ಬಿಲ್ಲುಗಳು, ಯುವ ಜನಸೇವಾ ಹಾಗೂ ಕ್ರೀಡಾ ಇಲಾಖೆಯಿಂದ ಅಭಿಪ್ರಾಯ ಪತ್ರ, ಅಂತÀರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿರುವವರು ವೀಸಾ ಶುಲ್ಕದ ಬಿಲ್ಲುಗಳು ಹಾಗೂ ಬೋರ್ಡಿಂಗ್ ಪಾಸ್ ಹಾಗೂ ಪ್ರಯಾಣಕ್ಕೆ ಸಂಬಂಧಿಸಿದಂತೆ ಭರಿಸಿರುವ ವೆಚ್ಚಗಳ ಮೂಲ ಬಿಲ್ಲುಗಳು, ಸ್ವಯಂ ಘೋಷಣೆ, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ ಹೊಂದಿರಬೇಕು.
ಹೆಚ್ಚಿನ ಮಾಹಿತಿಗೆ ಆಯಾ ತಾಲೂಕಿನ ಎಂ.ಆರ್.ಡಬ್ಲ್ಯೂಗಳು ಮಂಗಳೂರು-9110897458, ಬಂಟ್ವಾಳ-9164645616, ಪುತ್ತೂರು & ಕಡಬ-7760620538, ಸುಳ್ಯ-8105300057, ಬೆಳ್ತಂಗಡಿ-9480281513 ಅಥವಾ ವಿಕಲಚೇತನರ ಹಾಗೂ ಹಿರಿಯನಾಗರಿಕರ ಸಬಲೀಕರಣ ಇಲಾಖೆಯ ವಿಕಲಚೇತನರ ಕಲ್ಯಾಣಾಧಿಕಾರಿ ಕಚೇರಿ (ದೂರವಾಣಿ ಸಂಖ್ಯೆ :0824-2455999) ಸಂಪರ್ಕಿಸಬಹುದು ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













