ಮಂಗಳೂರು-ಹೈದರಾಬಾದ್ ಅಂಬಾರಿ ಡ್ರೀಮ್‍ ಕ್ಲಾಸ್ ಬಸ್

Spread the love

ಮಂಗಳೂರು-ಹೈದರಾಬಾದ್ ಅಂಬಾರಿ ಡ್ರೀಮ್‍ ಕ್ಲಾಸ್ ಬಸ್

ಮಂಗಳೂರು :  ಕೆಎಸ್‍ಆರ್‍ಟಿಸಿ . ನಿಗಮವು ಮಂಗಳೂರಿನಿಂದ ಉಡುಪಿ, ಕುಂದಾಪುರ, ಭಟ್ಕಳ, ಹುಬ್ಬಳ್ಳಿ, ಗದಗ, ಕೊಪ್ಪಳ, ರಾಯಚೂರು ಮಾರ್ಗವಾಗಿ ಹೈದರಾಬಾದ್‍ಗೆ ಹಾಗೂ ಹೈದರಾಬಾದ್‍ನಿಂದ ಇದೇ ಮಾರ್ಗವಾಗಿ ಮಂಗಳೂರಿಗೆ ಮಲ್ಟಿಆಕ್ಸ್‍ಲ್ ಸಾರಿಗೆಯನ್ನು ಕಾರ್ಯಾಚರಣೆಗೊಳಿಸಲಾಗುತ್ತಿದ್ದು, ಈ ಸಾರಿಗೆಯನ್ನು ಮೇಲ್ದರ್ಜೆಗೇರಿಸಿ “ಅಂಬಾರಿ ಡ್ರೀಮ್‍ಕ್ಲಾಸ್ ಮಲ್ಟಿಅಕ್ಸ್‍ಲ್ ಎ.ಸಿ. ಸ್ಲೀಪರ್” ವಾಹನವನ್ನು ಡಿಸೆಂಬರ್ 9 ರಿಂದ ಕಾರ್ಯಾಚರಣೆ ಮಾಡಲು ಯೋಜಿಸಲಾಗಿದೆ.

ಮಂಗಳೂರು ಬಸ್ಸು ನಿಲ್ದಾಣದ ಆವರಣದಲ್ಲಿ ಡಿಸೆಂಬರ್ 9 ರಂದು ಮಧ್ಯಾಹ್ನ 3 ಗಂಟೆಗೆ ಮಂಗಳೂರು ಶಾಸಕ ವೇದವ್ಯಾಸ ಕಾಮತ್, ಅಧ್ಯಕ್ಷತೆಯಲ್ಲಿ ನೂತನ ಸಾರಿಗೆಗಳನ್ನು ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟನೆ ಮಾಡಲಿದ್ದಾರೆ.

ಈ ಬಸ್ಸು ಮಂಗಳೂರು ಬಸ್ಸು ನಿಲ್ದಾಣದಿಂದ ಮಧ್ಯಾಹ್ನ 3 ಗಂಟೆಗೆ ಹೊರಟು ಉಡುಪಿ ಮಣಿಪಾಲ, ಕುಂದಾಪುರ, ಭಟ್ಕಳ ಮಾರ್ಗವಾಗಿ ಹೈದರಾಬಾದ್‍ಗೆ ಮರುದಿನ ಬೆಳಿಗ್ಗೆ 8.30 ಗಂಟೆಗೆ ತಲುಪುತ್ತದೆ. ಮರು ಪ್ರಯಾಣದಲ್ಲಿ ಹೈದರಾಬಾದ್‍ನಿಂದ ಸಂಜೆ 7 ಗಂಟೆಗೆ ಹೊರಟು ರಾಯಚೂರು, ಕುಂದಾಪುರ, ಮಂಗಳೂರಿಗೆ ಮರುದಿನ ಬೆಳಿಗ್ಗೆ 10 ಗಂಟೆಗೆ ತಲುಪುತ್ತದೆ. ಮಂಗಳೂರಿನಿಂದ ಹೈದರಾಬಾದ್‍ಗೆ ಪ್ರತಿ ಪ್ರಯಾಣಿಕರಿಗೆ ಪ್ರಯಾಣ ದರ ರೂ 1,400.

ಈ ಸಾರಿಗೆಗೆ ಅವತಾರ್ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಇದ್ದು ಸಾರ್ವಜನಿಕರು ಸದರಿ ಸಾರಿಗೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಈ ಮೂಲಕ ಪಡೆಯಬಹುದಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ, ಕರಾರಸಸಂ. ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.


Spread the love