ಮಣಿಪಾಲ ಮತ್ತು ಉಡುಪಿ ಸರಣಿ ಸುಲಿಗೆ, ಕಾಪು ಕೊಲೆ ಯತ್ನ ಪ್ರಕರಣ – ಐವರ ಬಂಧನ

Spread the love

ಮಣಿಪಾಲ ಮತ್ತು ಉಡುಪಿ ಸರಣಿ ಸುಲಿಗೆ, ಕಾಪು ಕೊಲೆ ಯತ್ನ ಪ್ರಕರಣ – ಐವರ ಬಂಧನ

ಉಡುಪಿ: ಮಣಿಪಾಲ ಮತ್ತು ಉಡುಪಿ ನಗರ ಠಾಣಾ ವ್ಯಾಪ್ತಿಯಲ್ಲಿ ಮುಂಜಾನೆ 4 ಗಂಟೆಯಿಂದ 6 ಗಂಟೆಯ ಅವಧಿಯಲ್ಲಿ ಸಾರ್ವಜನಿಕರಿಂದ ಸೊತ್ತುಗಳನ್ನು ಸುಲಿಗೆ ಮಾಡಿದ ಪ್ರಕರಣಗಳಿಗೆ ಸಂಬಂಧಿಸಿ ಪೊಲೀಸರು ಐದು ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಮಲ್ಲಾರು ಕೊಂಬುಗುಡ್ಡೆ ನಿವಾಸಿ ಮೊಹ್ಮದ್ ಆಶಿಕ್ (19), ನಾವುಂದ ನಿವಾಸಿ ಮಹಮ್ಮದ್ ಆಸೀಫ್ ಯಾನೆ ಆಸೀಫ್ ರೀಝಾಯಾನೆ ರಮೀಜ್ (30), ಕುಂದಾಪುರ ನಾವುಂದ ನಿವಾಸಿ ಮಿಸ್ವಾ (22), ಇಜಾಜ್ ಅಹ್ಮದ್ (19) ಮತ್ತು ಮಲ್ಪೆ ಜೋಕಟ್ಟೆ ನಿವಾಸಿ ದಾವೂದ್ ಇಬ್ರಾಹಿಂ ಯಾನೆ ಇಬ್ಬಾ (26) ಎಂದು ಗುರುತಿಸಲಾಗಿದೆ.

ಈ ಕುರಿತು ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್ ಅವರು ಸಪ್ಟೆಂಬರ್ 19ರಂದು ಮುಂಜಾನೆ 4 ಗಂಟೆಯಿಂದ 6 ಗಂಟೆಯ ಅವಧಿಯಲ್ಲಿ ಮಣಿಪಾಲ ಮತ್ತು ಉಡುಪಿ ನಗರ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಬಂದು ಸಾರ್ವಜನಿಕರನ್ನು ಬೆದರಿಸಿ, ಚೂರಿ ಮತ್ತು ಸ್ನ ಡ್ರೈವರ್ನಿಂದ ಹಲ್ಲೆ ಮಾಡಿ ಹಣ, ಮೊಬೈಲ್ ಮತ್ತು ಪರ್ಸ್, ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದು, ಈ ಕುರಿತು ಮಣಿಪಾಲ ಠಾಣೆಯಲ್ಲಿ 3 ಪ್ರಕರಣಗಳು ಹಾಗೂ ಉಡುಪಿ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿತ್ತು.

ಮೇಲ್ಕಂಡ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ಪತ್ತೆಗಾಗಿ ಉಡುಪಿ ವೃತ್ತ ನಿರೀಕ್ಷಕರಾದ ಶ್ರೀ ಮಂಜುನಾಥ ಮತ್ತು ಮಣಿಪಾಲ ಪೊಲೀಸ್ ನಿರೀಕ್ಷಕರಾದ ಶ್ರೀ ಮಂಜುನಾಥ್ ಎಂ ಗೌಡ ಅವರ ನೇತೃತ್ವದಲ್ಲಿ ಎರಡು ಪ್ರತ್ಯೇಕ ತನಿಖಾ ತಂಡಗಳನ್ನು ರಚಿಸಲಾಗಿತ್ತು. ಅದರಂರಂತೆ ಸಪ್ಟೆಂಬರ್ 26 ರಂದು ತನಿಖಾ ತಂಡದ ಅಧಿಕಾರಿ ಸಿಬ್ಬಂದಿಗಳು ಸುಲಿಗೆ ಪ್ರಕರಣಗಳ ಆರೋಪಿಯಾದ ಕಾಪು ಮೂಲದ ಕೊಂಬುಗುಡ್ಡೆ ನಿವಾಸಿ ಮೊಹಮ್ಮದ್ ಆಶಿಕ್ನನ್ನು ಪತ್ತೆ ಮಾಡಿ ಮಣಿಪಾಲದಲ್ಲಿ ದಸ್ತಗಿರಿ ಮಾಡಿರುತ್ತಾರೆ.

ಆರೋಪಿ ವಶದಲ್ಲಿದ್ದ ಕೃತ್ಯಕ್ಕೆ ಯಮಹಾ ಬೈಕ್, ಸುಲಿಗೆ ಕೃತ್ಯಕ್ಕೆ ಬಳಸಿದ ನ್ಯೂ ಡ್ರೈವರ್, 1 ಚೂರಿ ಹಾಗೂ DESHdoot DOR aad 1 OPPO Company Mobile Phone ನ್ನು ವಶಪಡಿಸಿಕೊಂಡಿರುತ್ತಾರೆ. ನಿನ್ನೆಯೂ ಸಹ ಆರೋಪಿತನು ಸುಲಿಗೆ ಕೃತ್ಯವನ್ನು ಮುಂದುವರೆಸಲು ಯೋಜನೆ ಹಾಕಿಕೊಂಡು ಉಡುಪಿ – ಮಣಿಪಾಲ ಪರಿಸರದಲ್ಲಿ ಸುತ್ತಾಡುತ್ತಿದ್ದಾಗ ಪೊಲೀಸರು ಈತನನ್ನು ಬಂಧಿಸುತ್ತಾರೆ, ಆರೋಪಿ ಆಫಿಕ್ 4 ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾದ ನಂತರ ಕಾಪುವಿನಲ್ಲಿ ವರದಿಯಾದ ಕೊಲೆ ಪ್ರಯತ್ನ ಪ್ರಕರಣದಲ್ಲಿ ಭಾಗಿಯಾಗುತ್ತಾನೆ.

ಈ ಪ್ರಕರಣದ ಆರೋಪಿಗಳು ಬೆಂಗಳೂರಿನಲ್ಲಿ ಕಳ್ಳತನ ಮಾಡಿಕೊಂಡು ಬಂದಿದ್ದ ಎರಡು ಲಕ್ಷ ರೂಪಾಯಿ ಮೌಲ್ಯದ ಒಂದು Bullet Bike ನ್ನು ಸಹ ಆರೋಪಿ ಯಿಂದ ವಶಪಡಿಸಿಕೊಳ್ಳಲಾಗಿದೆ. ಇನ್ನೊಬ್ಬ ಆರೋಪಿಯನ್ನು ಶೀಘ್ರದಲ್ಲಿ ಬಂಧಿಸಲು ಕಾರ್ಯ ತಂತ್ರ ರೂಪಿಸಲಾಗಿದೆ.

ಆರೋಪಿಯಾದ ಕಾಪು ಮೂಲದ ಮಲ್ಲಾರು, ಕೊಂಬಗುಡ್ಡೆ ನಿವಾಸಿ ಮಹಮ್ಮದ್ ಆಶಿಕ್ ಎಂಬಾತನೇ “ಟೀಂ ಗರುಡ ಎಂಬ ಪಡ್ಡೆ ಹುಡುಗರ ಗ್ಯಾಂಗ್ನ ನಾಯಕತ್ವವನ್ನು ವಹಿಸಿಕೊಂಡಿದ್ದು ಮೋಜು ಮಸ್ತಿ ಮಾಡುವುದು, ರಾತ್ರಿ ಅನಾವಶ್ಯಕ ತಿರುಗಾಡುವುದು ಯಾವುದಾದರೂ ಅಪರಾಧ ಕೃತ್ಯ ಎಸಗಿದ್ದಾರೆಯೇ ಎಂಬುದನ್ನು ಕೂಡ ಪತ್ತೆ ಹಚ್ಚಲಾಗುವುದು

ತನಿಖಾ ತಂಡವು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ್ ಚಂದ್ರ ಹಾಗೂ ಉಡುಪಿ ಪೊಲೀಸ್ ಉಪಾಧೀಕ್ಷಕರಾದಂತಹ ಜೈ ಶಂಕರ್ರವರ ಮಾರ್ಗದರ್ಶನದಲ್ಲಿ ಕಾರ್ಯವನ್ನು ನಿರ್ವಹಿಸುತ್ತಾರೆ. ತನಿಖಾ ತಂಡದಲ್ಲಿ ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ್ ಎಂ ಗೌಡ, ಪಿ ಎಸ್ ಐ ರಾಜಶೇಖರ್ ವಂದಲಿ, ಎಎಸ್ಐ ರೈಲೇಶ್, ಸಿಬ್ಬಂದಿಯವರಾದ ಪ್ರಸನ್ನ, ಧೂಮನ್, ರಜಾಕ್, ಸಲ್ಮಾನ್, ಆದರ್ಶ್, ಸುದೀಪ್ ಹಾಗೂ ಉಡುಪಿ ವೃತ್ತ ನಿರೀಕ್ಷಕರಾದ ಮಂಜುನಾಥ, ಎಎಸ್ಐ ಗೋಪಾಲಕೃಷ್ಣ ಜೋಗಿ, ಸಿಬ್ಬಂದಿಯವರಾದ ಉಮೇಶ್, ಇಮ್ರಾನ್, ಸಂತೋಷ್ ರಾಥೋಡ್ ಹಾಗೂ ಸಿಡಿಆರ್ ವಿಭಾಗದ ಶಿವಾನಂದ್, ದಿನೇಶ್, ನಿತಿನ್ರವರು ಕಾರ್ಯ ನಿರ್ವಹಿಸಿದ್ದು ಇವರನ್ನು ಪೊಲೀಸ್ ಅಧೀಕ್ಷಕರು ಅಭಿನಂದಿಸಿರುತ್ತಾರೆ,

ಸೆಪ್ಟೆಂಬರ್ 22 ರಂದು ಕಾಪು ತಾಲೂಕು ಮಲ್ಲಾರು ಗ್ರಾಮದ ಗುಡ್ಡ ಕೆರೆಯಲ್ಲಿರುವ ಅಬ್ದುಲ್ ಸತ್ತಾರ್ ಎಂಬವರನ್ನು ಕೊಲ್ಲುವ ಉದ್ದೇಶದಿಂದ ಮಲ್ಲಾರು, ಕೊಂಬಗುಡ್ಡೆ ನಿವಾಸಿ ಆಶಿಕ್ನು ಇತರ ಸಹಚರರಾದ ಮಹಮ್ಮದ್ ಆಸೀಫ್ ಯಾನೆ ಆಸಿಫ್ ರೀಝಾ ಯಾನೆ ರಮೀಜ್, ಮಿಸ್ಬಾ, ಇಜಾಜ್ ಅಹಮ್ಮದ್ ಮತ್ತು ದಾವೂದ್ ಇಬ್ರಾಹಿಂ ಯಾನೆ ಇಬ್ಬಾ ಅವರೊಂದಿಗೆ ಅಬ್ದುಲ್ ಸತ್ತಾರ್ ಅವರ ಮನೆಗೆ ಹೋಗಿದ್ದರು ಆ ವೇಳೆ ಅಬ್ದುಲ್ ಸತ್ತಾರ್ ರವರು ಓಡಿ ಹೋದ ಕಾರಣ ಹಸನಬ್ಬನನ್ನು ಕೊಲ್ಲುವ ಉದ್ದೇಶದಿಂದ ತಲ್ವಾರ್ನ್ನು ಬೀಸಿದ್ದು, ಹಸನಬ್ಬ ತಪ್ಪಿಸಿಕೊಳ್ಳುವ ವೇಳೆ ಆತನ ಬಲಕಾಲಿಗೆ ತಲ್ವಾರ್ ತಾಗಿ ಗಾಯವಾಗಿದ್ದು ಅಲ್ಲದೇ ಮನೆಯ ಹೆಂಗಸರ ಮೈಗೆ ಕೈ ಹಾಕಿ ಕೈಯಿಂದ ಹೊಡೆದು ದೂರಿಸಿ, ಮನೆಯ ಕಿಟಕಿಯ ಗ್ಲಾಸ್ನ್ನು ಹುಡಿ ಮಾಡಿ, ಎಲ್ಲರನ್ನೂ ಕೊಲ್ಲುವುದಾಗಿ ಬೆದರಿಕೆ ಹಾಕಿರುತ್ತಾರೆ.

ಈ ಪ್ರಕರಣದಲ್ಲಿ ಮಹಮ್ಮದ್ ಆಶಿಕ್ ಹೊರತುಪಡಿಸಿ ಉಳಿದ ಎಲ್ಲಾ ಜನ ಆರೋಪಿತರನ್ನು ಉದ್ಯಾವರದ ಜೈಹಿಂದ್ ಜಂಕ್ಷನ್ ಬಳಿ ಕಾಪು ಪೊಲೀಸ್ ಉಪನಿರೀಕ್ಷಕರು ಹಾಗೂ ಅವರ ಅಧಿಕಾರಿ (ಸಿಬ್ಬಂದಿಯವರ ತಂಡ ಬಂಧಿಸಿ ಅವರ ಬಳಿಯಿದ್ದ ಕೃತ್ಯಕ್ಕೆ ಬಳಸಿದ ಕಾರು, ಹಾಗೂ ಕಾರಿನಲ್ಲಿದ್ದ ಚೂರಿ-01, ಕತ್ತಿ-01 ಹಾಗೂ ಆರೋಪಿಗಳ ಬಳಿ ಇದ್ದ ಮೂರು ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದು ಅವುಗಳ ಅಂದಾಜು ಮೌಲ್ಯ 3,41, 700/- ರೂಪಾಯಿ ಆಗಬಹುದು.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ, ಪ್ರಕರಣ ತನಿಖೆಯಲ್ಲಿ ರುತ್ತದೆ


Spread the love