ಮನುಕುಲವನ್ನು ಗೌರವಿಸಿ ಸಾಹಸ ಮೆರೆದ ಗೂಡಿನಬಳಿ ಯುವಕರಿಗೆ ಅನಿವಾಸಿ ಕನ್ನಡಿಗರ ಒಕ್ಕೂಟ  ಅಭಿನಂದನೆ 

Spread the love

ಮನುಕುಲವನ್ನು ಗೌರವಿಸಿ ಸಾಹಸ ಮೆರೆದ ಗೂಡಿನಬಳಿ ಯುವಕರಿಗೆ ಅನಿವಾಸಿ ಕನ್ನಡಿಗರ ಒಕ್ಕೂಟ  ಅಭಿನಂದನೆ 

ಇಂದು ಪ್ರಪಂಚವೇ ಕೊರೋನಾ ಎಂಬ ಮಾಹಾ ವೈರಸ್ ಗೆ ಹೆದರಿ ಜೀವಿಸುತ್ತಿರುವ ಈ ಸಮಯದಲ್ಲಿಯೂ ಮಾನವೀಯತೆ ಮೆರೆದ ಯುವಕರು, ಕಲ಼ಡ್ಕದ ನಿಶಾಂತ್ ಎಂಬ ಯುವಕನೊಬ್ಬ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಲು ಪ್ರಯತ್ನಿಸಿದಾಗ ವಿಷಯ ತಿಳಿದ ಸ್ಥಳೀಯ ಗೂಡಿನಬಳಿಯ ಮುಹಮ್ಮದ್, ಸಮೀರ್,ಝಾಯಿದ್ , ಆರಿಫ್, ಮುಕ್ತಾರ್ ತೌಸೀಫ್ ರವರು ಯಾವುದೇ ಜಾತಿ ಧರ್ಮ ವನ್ನು ಲೆಕ್ಕಿಸದೆ ಕೂಡಲೇ ತಮ್ಮ ಜೀವನವನ್ನು ಪಣಕ್ಕಿಟ್ಟು ನದಿಗೆ ಹಾರಿ ಆ ಯುವಕನನ್ನು ನದಿಯಿಂದ ದಡಕ್ಕೆ ಸೇರಿಸಿ ಪ್ರಥಮ ಚಿಕಿತ್ಸಾ ವಿಧಾನಗಳನ್ನು ನೀಡುವುದರ ಮೂಲಕ ಪ್ರಾಣವನ್ನು ರಕ್ಷಿಸಲು ಪ್ರಯತ್ನಿಸಿದರು.ಆದರೆ ವಿಧಿಯ ಆಟವು ಬೇರೆಯಾಗಿತ್ತು.

ಈ ಸಂದರ್ಭದಲ್ಲಿ ಹಫೀಝನ ಪಾತ್ರವೂ ಮಹತ್ವಪೂರ್ಣವಾದದ್ದು ಮೊದಲು ನೇತ್ರಾವತಿ ವೀರರ ಮನೆ ಬಾಗಿಲಿಗೆ ತೆರಳಿ ವಿಷಯ ಮುಟ್ಟಿಸಿದ್ದಾನೆ. ಆ ನಿರ್ದಿಷ್ಟ ಸ್ಥಳವನ್ನು ಸೂಚಿಸಿದ್ದು ಹಫೀಝ್ ಆಗಿದ್ದರು, ಈ ಹುಡುಗನಿಗೂ ತಮ್ಮೆಲ್ಲರ ಮೆಚ್ಚುಗೆಯೊಂದು ಇರಲಿ. ಈ ನೆತ್ರಾವತಿ ವೀರರಿಗೆ ಅನಿವಾಸಿ ಕನ್ನಡಿಗರ ಒಕ್ಕುಟಾ ಅಭಿನಂದನೆ ಸಲ್ಲಿಸುತ್ತದೆ.
.
ಮುಸಲ್ಮಾನರು ಈದುಲ್ ಫಿತ್ರ್ ಹಬ್ಬ ಆಚರಿಸುವ ದಿನದಂದು ನಡೆದ ಘಟನೆಯು ಇಸ್ಲಾಮ್ ಜಗತ್ತಿಗೆ ಶಾಂತಿ, ಸೌಹಾರ್ದತೆ, ತ್ಯಾಗವನ್ನು ನೆನಪಿಸುವ ಮಾನವೀಯತೆಯ ಸಂದೇಶವನ್ನು ನೀಡಿದ್ದಾರೆ. ಇಡೀ ನಾಡು ಹೆಮ್ಮೆಪಡುವಂತಹ ಇವರ ಸೇವೆಯು ಶ್ಲಾಘನೀಯ ಎಂದು ಅನಿವಾಸಿ ಕನ್ನಡಿಗರ ಒಕ್ಕೂಟಾ ಇದರ ಅದ್ಯಕ್ಷರಾದ ಅಬ್ದುಲ್ ರಶೀದ್ ಅಭಿಪ್ರಾಯಪಟ್ಟರು


Spread the love