ಮಹಾನಗರ ಪಾಲಿಕೆ ನಿರ್ಲಕ್ಷತೆ ನೀರಿನ ರೇಷನ್ ಕಾರಣ: ಜೆಡಿಎಸ್

Spread the love

ಮಹಾನಗರ ಪಾಲಿಕೆ ನಿರ್ಲಕ್ಷತೆ ನೀರಿನ ರೇಷನ್ ಕಾರಣ: ಜೆಡಿಎಸ್

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಯಾವುದೇ ಅಭಾವ ಇಲ್ಲದಿರುವುದು ಹಲವು ಬಾರಿ ಜನಪ್ರತಿನಿಧಿಗಳು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ ಫೆಬ್ರವರಿ ತಿಂಗಳಲ್ಲಿ ಜನಪ್ರತಿನಿಧಿಗಳು ಹಾಗೂ ಪಾಲಿಕೆಯ ಅಧಿಕಾರಿಗಳು  ಡ್ಯಾಂ ಪರಿಶೀಲಿಸಿ ನೀರಿನ ಸಂಗ್ರಹಣೆ ಮೇ ತಿಂಗಳು ವರೆಗೆ ಯಾವುದೇ ಅಭಾವ ವಿಲ್ಲವೆಂದು ಸ್ಪಷ್ಟಪಡಿಸಿತ್ತು ಹೇಳಿಕೆ ನೀಡಿದ್ದ ಜನಪ್ರತಿನಿಧಿಗಳು ಇಲ್ಲದಿದ್ದರೂ ಅಧಿಕಾರಿಗಳು ಅವರೇ ಇದ್ದಾರೆ ಲೋಕಸಭೆ ಚುನಾವಣೆ ಸಮೀಸುತ್ತಿದ್ದಂತೆಯೇ ಮಹಾನಗರ ಪಾಲಿಕೆ ಆಡಳಿತ ಅಧಿಕಾರಿಗಳ ನೇಮಕ ವಾಗುತ್ತಿದ್ದಂತೆ ನೀರಿನ ಅಭಾವದ ಬಗ್ಗೆ ಹೇಳಿಕೆ ನೀಡಲು ಪ್ರಾರಂಭಿಸಿದರು ಬಿಸಿಲಿನ ಕಾರಣ ನೀರು ಆವಿಯಾಗುತ್ತದೆ ಎಂಬ ಹೇಳಿಕೆ ಎಷ್ಟರ ಮಟ್ಟಿಗೆ ಸರಿ ಬಿಸಿಲಿನ ತಾಪಕ್ಕೆ ನೀರು ಆವಿಯಾಗುವುದು ಎಲ್ಲರಿಗೂ ತಿಳಿದ ವಿಷಯ ಕೆಲವು ಪ್ರದೇಶಗಳಲ್ಲಿ ನೀರು ಹಗಲು ರಾತ್ರಿ ಹಗಲು ಯಾವುದೇ ಕ್ರಮ ಕೈಗೊಳ್ಳದೆ ಏಕಾಏಕಿ ಮೂರು ನಾಲ್ಕು ದಿನಗಳಿಗೊಮ್ಮೆ ನೀರು ಸರಬರಾಜು ಮಾಡಿದ್ದಲ್ಲಿ ನೀರಿನ ಭೀಕರ ಸಮಸ್ಯೆ ಎದುರಾಗಬಹುದು ಮಾತ್ರವಲ್ಲ ಸರಕಾರಿ ನಿವೇಶನಗಳಲ್ಲಿ ಮನೆಯಲ್ಲಿ ವಾಸಿಸುವ ಬಡ ಜನರಿಗೆ ನೀರಿನ ಶೇಖರಣೆ ಮಾಡಲು ಯಾವುದೇ ಸೌಲತ್ತುಗಳು ಇರುವುದಿಲ್ಲ ಆದ್ದರಿಂದ ದಿನ ಪ್ರತಿ ಅರ್ಧ ಒಂದು ಗಂಟೆ ನೀರು ಸರಬರಾಜು ಮಾಡುವ ವ್ಯವಸ್ಥೆ ಕಲ್ಪಿಸಬೇಕು.

ಇದರಿಂದ ಮಂಗಳೂರು ಮಹಾನಗರಪಾಲಿಕೆಯಲ್ಲಿ ರಾಜ್ಯಾಂಗ ಆಡಳಿತ ಇಲ್ಲದಿದ್ದರೂ ಕಾರ್ಯಾಂಗ ವ್ಯವಸ್ಥಿತ ರೀತಿಯಲ್ಲಿ ಆಡಳಿತ ನಡೆಸುತ್ತದೆ ಎಂಬ ಒಳ್ಳೆಯ ಕಲ್ಪನೆ ಜನರಲ್ಲಿ ಮೂಡಿಬರುತ್ತದೆ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಸುಶೀಲ್  ನೊರೊನ್ಹ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love