ಮಹಾರಾಷ್ಟ್ರದಿಂದ ಬಂದವರಿಗೆ 14 ದಿನ ಹೋಮ್ ಕ್ವಾರಂಟೈನ್ ; ವ್ಯಕ್ತಿಯ ಮನೆ ಸೀಲ್ ಡೌನ್ – ಆರೋಗ್ಯ ಸಚಿವ ಶ್ರೀರಾಮುಲು

Spread the love

ಮಹಾರಾಷ್ಟ್ರದಿಂದ ಬಂದವರಿಗೆ 14 ದಿನ ಹೋಮ್ ಕ್ವಾರಂಟೈನ್ ; ವ್ಯಕ್ತಿಯ ಮನೆ ಸೀಲ್ ಡೌನ್ – ಆರೋಗ್ಯ ಸಚಿವ ಶ್ರೀರಾಮುಲು

ಉಡುಪಿ: ಮಹಾರಾಷ್ಟ್ರ ದಿಂದ ಬಂದವರಿಗೆ ಹೋಂ ಕ್ವಾರಂಟೈನ್ ಇನ್ಮುಂದೆ ಸಾಂಸ್ಥಿಕ ಕ್ವಾರಂಟೈನ್ ಬದಲು ಅವರನ್ನು 14 ದಿನ ಹೋಮ್ ಕ್ವಾರಂಟೈನ್ ಮಾಡಿ ಆ ವ್ಯಕ್ತಿಯ  ಮನೆಯನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗುವುದು ಎಂದು ರಾಜ್ಯದ  ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.

ಅವರು ಮಂಗಳವಾರ ಉಡುಪಿ ಜಿಲ್ಲಾಧಿಕಾರಿಯ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ ರಾಜ್ಯದಲ್ಲಿ ನಿನ್ನೆಯಷ್ಟೇ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು  ಕ್ವಾರಂಟೈನ್ ಆದ ವ್ಯಕ್ತಿಯ ಸೀಲ್ ಮಾಡಿದ ಮೇಲೆ ಆತ ಮನೆಯಲ್ಲೇ ಇರಬೇಕು ಹೊರಬಂದ್ರೆ ಕೇಸ್ ಹಾಕುವ ತೀರ್ಮಾನ ಮಾಡಿದ್ದೇವೆ ರಾಜ್ಯ ಮಟ್ಟದಲ್ಲೇ ಈ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಹೇಳಿದರು.

ಜಿಲ್ಲಾಧಿಕಾರಿಗೆ ಜಿಲ್ಲೆಯ ಸಂಪೂರ್ಣ ಅಧಿಕಾರ ಕೊಡಲಾಗಿದ್ದು ಸೀಲ್ ಡೌನ್ ಇದ್ದವರು ಹೊರಗೆ ಬಂದ್ರೆ ಕೇಸ್ ಪೊಲೀಸ್, ಹೋಂ ಗಾರ್ಡ್ ಗಳನ್ನು ನೇಮಿಸುತ್ತೇವೆ. ಆಶಾ, ಅಂಗನವಾಡಿ ಕಾರ್ಯಕರ್ತರಿಂದ ನಿಗಾ ಹೊರಬಂದ್ರೆ ಸುತ್ತಮುತ್ತಲ ಮನೆಯವರು  ಮಾಹಿತಿಕೊಡಬೇಕು ತುಂಬಾ ಬಡವರಿದ್ದರೆ, ದೇವಸ್ಥಾನದ ಮೂಲಕ ಆ ಮನೆಗೆ ಆಹಾರ ಕಿಟ್ ನೀಡಲಾಗುವುದು. ರೋಗ ಲಕ್ಷಣ ಕಂಡು ಬಂದರೆ ಟೆಸ್ಟ್ ಮಾಡುತ್ತೇವೆ ಎಂದರು.  ಒಂದು ವೇಳೆ ಅಪಾರ್ಟ್ ಮೆಂಟ್ ಗಳಲ್ಲಿ ಯಾವುದೇ ಮನೆಯ ವ್ಯಕ್ತಿ ಕ್ವಾರಂಟೈನ್ ಇದ್ದಲ್ಲಿ ಆ ಅಪಾರ್ಟ್ ಮೆಂಟ್ ಸೀಲ್ ಡೌನ್ ಮಾಡಲ್ಲ ಬದಲಾಗಿ ಕೇವಲ ಆ ಅಪಾರ್ಟ್ ಮೆಂಟ್ ನ ಒಂದು ಮನೆಯನ್ನು ಮಾತ್ರ ಸೀಲ್ ಡೌನ್ ಮಾಡಲಾಗುವುದು ಎಂದು ಹೇಳಿದರು.


Spread the love