ಮಹಾಲಕ್ಷ್ಮೀ ಕೊ-ಅಪ್ ಬ್ಯಾಂಕ್ ಸುರತ್ಕಲ್ ಶಾಖೆ ಸ್ವಂತ ಕಟ್ಟಡಕ್ಕೆ ಸ್ಥಳಾಂತರ, ನೂತನ ಕಚೇರಿ ಉದ್ಘಾಟನೆ

Spread the love

ಮಹಾಲಕ್ಷ್ಮೀ ಕೊ-ಅಪ್ ಬ್ಯಾಂಕ್ ಸುರತ್ಕಲ್ ಶಾಖೆ ಸ್ವಂತ ಕಟ್ಟಡಕ್ಕೆ ಸ್ಥಳಾಂತರ, ನೂತನ ಕಚೇರಿ ಉದ್ಘಾಟನೆ

ಸುರತ್ಕಲ್ : ಮಹಾಲಕ್ಷ್ಮೀ ಕೊ-ಅಪರೇಟಿವ್ ಬ್ಯಾಂಕ್ ಲಿಮಿಟೆಡ್ ಇದರ ಸುರತ್ಕಲ್ ಶಾಖೆಯ ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಹಾಗೂ ನೂತನ ಕಚೇರಿ ಉದ್ಘಾಟನೆ ಶನಿವಾರ ಅಭೀಷ್ ಬಿಸಿನೆಸ್ ಸೆಂಟರ್ ಇಲ್ಲಿ ಜರುಗಿತು.

ಕಟ್ಟಡದ ಉದ್ಘಾಟನೆಯನ್ನು ರಾಜ್ಯದ ಮೀನುಗಾರಿಕೆ, ಬಂದರು, ಒಳನಾಡು ಸಾರಿಗೆ ಹಾಗೂ ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೆರವೇರಿಸಿ ಮಹಾಲಕ್ಷ್ಮೀ ಕೋ-ಅಪರೇಟಿವ್ ಬ್ಯಾಂಕನ್ನು ಮೀನುಗಾರರ ಸಮುದಾಯದವರ ಅಭಿವೃದ್ಧಿಗೆ ಹುಟ್ಟುಹಾಕಲಾಗಿದ್ದು, ಅಧ್ಯಕ್ಷ ಯಶ್ಪಾಲ್ ಸುವರ್ಣರ ನೇತೃತ್ವದಲ್ಲಿ ಬ್ಯಾಂಕ್ ಲಾಭದಾಯಕವಾಗಿ ಮುನ್ನಡೆಯುತ್ತಿದ್ದು, ಎಂಟನೇ ಶಾಖೆ ಶಾಖೆ ಸ್ವಂತ ಕಚೇರಿಗೆ ಸ್ಥಳಾಂತರವಾಗುತ್ತಿದೆ ಮುಂದೆಯೂ ಬ್ಯಾಂಕ್ ಬೆಳೆಯಲಿ ಇದರ ಜೊತೆ ಮೀನುಗಾರರು ಸಹ ಇದರ ಪ್ರಯೋಜನ ಪಡೆಯುವಂತಾಗಲಿ ಎಂದರು.

ಮೀನುಗಾರಿಕೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ರಾಜ್ಯದ 186 ತಾಲೂಕುಗಳಲ್ಲಿ ಮತ್ಸ್ಯದರ್ಶಿನಿ ಹೋಟೆಲ್ ಆರಂಭಿಸುವ ಯೋಜನೆಯಿದ್ದು ನಮ್ಮ ಕರಾವಳಿಯ ಬಂದರುಗಳನ್ನು ಮೇಲ್ದರ್ಜೆಗೆ ಏರಿಸುವ ಕುರಿತು ಸಮಗ್ರ ಯೋಜನೆ ರೂಪಿಸಲಾಗುವುದು. ಈಗಾಗಲೇ ರಾಜ್ಯ ಸರಕಾರ ಮೀನುಗಾರರ ರಾಷ್ಟ್ರೀಯ ಬ್ಯಾಂಕುಗಳಲ್ಲಿ ಇದ್ದ ಸಾಲವನ್ನು ಮನ್ನಾ ಮಾಡಿದೆ. 21 ಸಾವಿರ ಮೀನುಗಾರರಿಗೆ ಇದರಿಂದ ಪ್ರಯೋಜನವಾಗಲಿದೆ ಎಂದರು.

ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ|ಜಿ. ಶಂಕರ್ ಮಾತನಾಡಿ ರಾಜ್ಯ ಸರಕಾರ ಸಮಗ್ರ ಮೀನುಗಾರಿಕಾ ನೀತಿಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಅಧ್ಯಕ್ಷ ಯಶ್ಪಾಲ್ ಸುವರ್ಣ ಮಾತನಾಡಿ, ಬಡ್ಡಿರಹಿತ ಸಾಲ ನೀಡುವ ಮೂಲಕ ಬ್ಯಾಂಕ್ ಮೊಗವೀರ ಸಮುದಾಯಕ್ಕೆ ನೆರವಾಗಲಿದೆ. ಕಾರ್ಯದಕ್ಷತೆ ಹೆಚ್ಚಿಸುವ ಸಲುವಾಗಿ ಬ್ಯಾಂಕಿನಲ್ಲಿ ಅತ್ಯಾಧುನಿಕ ಮೊಬೈಲ್ ಬ್ಯಾಂಕ್, ಎಟಿಎಮ್, ಮತ್ತಿತರ ಸೌಲಭ್ಯ ಒದಗಿಸುವ ಯೋಜನೆ ಇದೆ ಎಂದರು.

ದಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ದಕ ಮೊಗವೀರ ಮಹಾಜನ ಸಂಘ ಉಚ್ಚಿಲ ಇದರ ಅಧ್ಯಕ್ಷ ಜಯ ಸಿ ಕೋಟ್ಯಾನ್, ಬಂಟರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ, ಉದ್ಯಮಿ ಪುಷ್ಪರಾಜ್ ಜೈನ್, ಸಹಕಾರಿ ಸಂಘಗಳ ಉಪನಿಬಂಧಕ ಬಿಕೆ ಸಲೀಮ್, ಮೊಗವೀರ ಯುವ ವೇದಿಕಯ ಅಧ್ಯಕ್ಷ ಜಗದೀಶ್ ಬಂಗೇರ ಬೋಳೂರು, ಬ್ಯಾಂಕಿನ ಉಪಾಧ್ಯಕ್ಷ ಮಾಧವ ಸುವರ್ಣ, ನಿರ್ದೇಶಕರಾದ ವೆಂಕಟರಮಣ ಸಾಲ್ಯಾನ್, ಶಶಿಕಾಂತ್ ಬಿ ಕೋಟ್ಯಾನ್, ಹೆಮನಾಥ್ ಜಿ ಪುತ್ರನ್, ಶೋಭೇಂದ್ರ ಸಸಿಹಿತ್ಲು, ಸಂದೀಪ್ ಶ್ರಿಯಾನ್, ರಾಮ ನ್ಯಾಕ್ ಎಚ್.ವಿನಯ್ ಕರ್ಕೇರಾ, ನಾರಾಯಣ ಟಿ ಅಮೀನ್, ಸುರೇಶ್ ಬಿ ಕರ್ಕೇರಾ, ಬಿ ಬಿ ಕಾಂಚನ್, ಶಿವರಾಂ ಕುಂದರ್, ವನಜಾ ಎಚ್, ಕಿದಯೂರು, ವನಜ ಜೆ ಪುತ್ರನ್, ಮಂಜುನಾಥ ಎಸ್ ಕೆ, ರಾಮದಾಸ್ ಎಸ್ ಶ್ರೀಯಾನ್, ಆನಂದ ಎಸ್ ಪುತ್ರನ್ ಉಪಸ್ಥಿತರಿದ್ದರು.

ಮೀನುಗಾರಿಕಾ ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲಾಯಿತು. ಇದೇ ವೇಳೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಉಮಾನಾಥ ಕೊಟ್ಯಾನ್, ಕಟ್ಟಡದ ಒಳವಿನ್ಯಾಸಕ ಅರ್ಜುನ್ ಶೆಟ್ಟಿ ಮತ್ತು ಅಭೀಷ್ ಬಿಲ್ಡರ್ಸ್ ಆಡಳಿತ ನಿರ್ದೇಶಕ ಪುಷ್ಪರಾಜ್ ಜೈನ್ ಅವರನ್ನು ಬ್ಯಾಂಕಿನ ವತಿಯಿಂದ ಸನ್ಮಾನಿಸಲಾಯಿತು.

ಪ್ರಧಾನ ವ್ಯವಸ್ಥಾಪಕ ಜಿ ಕೆ ಶೀನಾ ವಂದಿಸಿ ವಿಜೇತ ಶೆಟ್ಟಿ ಸತೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


Spread the love