ಮಾ.31: ಕಳವಾರು ಸಂತ ಜೋಸೆಫರ ದೇವಾಲಯದಲ್ಲಿ ಪವಿತ್ರ ಶಿಲುಬೆಯ ಹಾದಿ

Spread the love

ಮಾ.31: ಕಳವಾರು ಸಂತ ಜೋಸೆಫರ ದೇವಾಲಯದಲ್ಲಿ ಪವಿತ್ರ ಶಿಲುಬೆಯ ಹಾದಿ

ಮಂಗಳೂರು: ಕಳವಾರು ಪೆಜಾರ್ ಸಂತ ಜೋಸೆಫರ ದೇವಾಲಯದಲ್ಲಿ ಎರಡೂವರೆ ಶತಮಾನಗಳ ಹಿಂದೆ ಆರಂಭವಾದ ಯೇಸು ಕ್ರಿಸ್ತರ ಬದುಕಿನ ಕೊನೆಯ ದಿನದ ಕಷ್ಟ ಮತ್ತು ಯಾತನೆಯ ಕ್ಷಣಗಳನ್ನು ಸ್ಮರಿಸುವ ಶಿಲುಬೆಯ ಯಾತ್ರೆ ಈ ಬಾರಿ ಮಾ. 31ರಂದು ನಡೆಯಲಿದೆ.

ಸಂಜೆ 5 ಗಂಟೆಗೆ ಈ ಕಾರ್ಯಕ್ರಮ ನಡೆಯಲಿದೆ. ಬೆಳಗ 10ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಿರಂತರ ಪ್ರಾರ್ಥ1ನೆ, ಸ್ತುತಿ ಆರಾಧನೆ ಹಾಗೂ ದೇವರ ವಾಕ್ಯದ ಮನನ ಕಾರ್ಯಕ್ರಮ ನಡೆಯಲಿದೆ ಎಂದು ವಂ. ರುಡಾಲ್ಫ್ ಡೆಸಾ ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ತಿಳಿಸಿದರು.

ಮಂಗಳೂರು ಧರ್ಮ ಪ್ರಾಂತ್ಯದ ಕ್ಯಾರಿಸ್ಮಾಟಿಕ್ ಸಂಚಾಲನವು ಈ ಕಾರ್ಯಕ್ರಮ ನಡೆಸಿಕೊಡಲಿದ್ದು, 3 ಗಂಟೆಗೆ ಭಕ್ತಿ ಆಚರಣೆ, 3.30ಕ್ಕೆ ಪವಿತ್ರ ಪ್ರಸಾದದ ಆರಾಧನೆ ನಡೆಲಿದೆ. ಇದನ್ನು ಸಂಚಾಲನದ ನಿರ್ದೇಶಕ ವಂ. ಕ್ಲಿಫರ್ಡ್ ಫೆರ್ನಾಂಡಿಸ್ ನೆರವೇರಿಸಲಿದ್ದಾರೆ. ಸಂಜೆ 5 ಗಂಟೆಗೆ ಪವಿತ್ರ ಬಲಿಪೂಜೆ ಹಾಗೂ 6 ಗಂಟೆಗೆ ಶಿಲುಬೆಯ ಹಾದಿ ಬಳಿಕ ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ರೆ.ಫಾ. ಡಾ. ಪೀಟರ್ ಪೌವ್ಲ್ ಸಲ್ಡಾನ ಅವರು ಆಶೀರ್ವಚನ ನೀಡಲಿದ್ದಾರೆ. ರಾತ್ರಿ 9 ಗಂಟೆಗೆ ಕಾರ್ಯಕ್ರಮ ಕೊನೆಗೊಂಡ ಬಳಿಕ ಊಟದ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ 2.45ಕ್ಕೆ ಬಜಪೆ ಚೆಕ್ ಪೋಸ್ಟ್‌ನಿಂದ ಕಳವಾರು ಚರ್ಚ್‌ಗೆ ಹಾಗೂ ಅಪರಾಹ್ನ ಜೋಕಟ್ಟೆ ಕೆಬಿಎಸ್‌ನಿಂದ ಕಳವಾರು ಚರ್ಚ್‌ಗೆ ಪಾದಯಾತ್ರೆ ನಡೆಯಲಿದೆ ಎಂದು ಕಳವಾರು ಚರ್ಚ್‌ನ ವಂ. ರೊನಾಲಡ್ ಡಿಸೋಜಾ ಮಾಹಿತಿ ನೀಡಿದರು.

ಗೋಷ್ಟಿಯಲ್ಲಿ ಚರ್ಚ್ ಪಾಲನಾ ಸಮಿತಿಯ ಪದಾಧಿಕಾರಿಗಳಾದ ಕ್ಲಿಂಟನ್ ಡಿಸೋಜಾ, ಸಿಲ್ವಿಯಾ ಮೇರಿಸ್, ವಾಲ್ಟರ್ ಮೊಂತೆರೋ, ಇಲಿಯಾಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments