ಮೀನುಗಾರಿಕಾ ದೋಣಿಯ ಡೀಸೆಲ್ ನ ರಾಜ್ಯ ಮಾರಾಟ ಕರ ಮರುಪಾವತಿ

Spread the love

ಮೀನುಗಾರಿಕಾ ದೋಣಿಯ ಡೀಸೆಲ್ ನ ರಾಜ್ಯ ಮಾರಾಟ ಕರ ಮರುಪಾವತಿ

ಉಡುಪಿ :- ಮೀನುಗಾರಿಕಾ ದೋಣಿಗಳಿಗೆ ಡಿಸೇಲ್ ಮೇಲಿನ ಮಾರಾಟ ಕರವನ್ನು ಮರುಪಾವತಿಯ ರೂಪದಲ್ಲಿ ನೇರವಾಗಿ ದೋಣಿ ಮಾಲೀಕರ ಬ್ಯಾಂಕ್ ಖಾತೆಗೆ ವರ್ಗಾಯಿಸುವ ‘ಮೀನುಗಾರಿಕಾ ದೋಣಿಗಳಿಗೆ ಮಾರಾಟ ತೆರಿಗೆ ಮರುಪಾವತಿ’ ಎಂಬ ಯೋಜನೆಯನ್ನು 2015-16 ನೇ ಸಾಲಿನಿಂದ ಜಾರಿಗೆ ತರಲಾಗಿದೆ.

2015-16ನೇ ಸಾಲಿನಲ್ಲಿ ಆಗಸ್ಟ್ 2015 ರಿಂದ ಫೆಬ್ರವರಿ 2016 ರವರೆಗೆ ಒಟ್ಟು 3278 ದೋಣಿಗಳಿಗೆ ಒಟ್ಟು 69.46 ಕೋಟಿ ಸಹಾಯಧನ ನೀಡಲಾಗಿದೆ. 2016-17ನೇ ಸಾಲಿಗೆ ಸದರಿ ಯೋಜನೆಯಡಿ ಒಟ್ಟು 10050 ಲಕ್ಷ ನಿಗಧಿಪಡಿಸಲಾಗಿದ್ದು ಇದುವರೆಗೆ 7238.5 ಲಕ್ಷ ಅನುದಾನ ಬಿಡುಗಡೆಯಾಗಿರುತ್ತದೆ.

ಮಾರ್ಚ್ 2016 ರಿಂದ ಸೆಪ್ಟೆಂಬರ್ 2016 ರವರೆಗೆ ಸಹಾಯಧನದ ಮೊತ್ತ 6570.40 ಆಗಿದ್ದು ಇದುವರೆಗೂ 4449.23 ಲಕ್ಷಗಳನ್ನು ಪಾವತಿ ಮಾಡಲಾಗಿದೆ. ಇದರಲ್ಲಿ ಉಡುಪಿ ಜಿಲ್ಲೆಯಲ್ಲಿ ಆಗಸ್ಟ್ ತಿಂಗಳ ಡಿಸೇಲ್ ಸಹಾಯಧನ ಮೊತ್ತ ರೂ.677.7 ಲಕ್ಷ ಸೇರಿರುತ್ತದೆ.
ದಕ್ಷಿಣ ಕನ್ನಡ ಮತ್ತು ಉತ್ತರಕನ್ನಡ ಜಿಲ್ಲೆಯ ಆಗಸ್ಟ್ ತಿಂಗಳ ಡಿಸೇಲ್ ಸಹಾಯಧನ ಹಾಗೂ ಸೆಪ್ಟೆಂಬರ್ ತಿಂಗಳ ಮೂರು ಜಿಲ್ಲೆಗಳ ಡಿಸೇಲ್ ಸಹಾಯಧನಕ್ಕೆ ಸಂಬಂಧಿಸಿದ ಒಟ್ಟು 2121.17 ಲಕ್ಷ ಮೊತ್ತದ ಬಿಲ್ಲನ್ನು ಖಜಾನೆಗೆ ಸಲ್ಲಿಸಲಾಗಿದ್ದು, ಶೀಘ್ರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಪಾವತಿಸಲಾಗುವುದು. ಇದುವರೆಗೆ ಒಟ್ಟು 3451 ಫಲಾನುಭವಿಗಳು ಈ ಯೋಜನೆಯಡಿ ಸಹಾಯಧನ ಪಡೆದಿರುತ್ತಾರೆ ಎಂದು ರಾಜ್ಯ ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


Spread the love