ಮೀನುಗಾರ ನಾಪತ್ತೆ ಪ್ರಕರಣ- ಜೆಡಿಎಸ್ ನಿಯೋಗ ಮೀನುಗಾರರ ಮನೆಗೆ ಭೇಟಿ

Spread the love

ಮೀನುಗಾರ ನಾಪತ್ತೆ ಪ್ರಕರಣ- ಜೆಡಿಎಸ್ ನಿಯೋಗ ಮೀನುಗಾರರ ಮನೆಗೆ ಭೇಟಿ

ಉಡುಪಿ: ಮೀನುಗಾರಿಕೆಗೆ ತೆರಳಿದ್ದ ಎಂಟು ಮಂದಿಯಿದ್ದ ಮಲ್ಪೆಯ ಮೀನುಗಾರಿಕಾ ಬೋಟ್ ನಾಪತ್ತೆಯಾಗಿದ್ದು ಜೆಡಿಎಸ್ ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿಯವರು ಮೀನುಗಾರರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು.

ಮುಖ್ಯಮಂತ್ರಿಗಳಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಮೀನುಗಾರಿಕಾ ಸಚಿವರಾದ ವೆಂಕಟ್ ರಾವ್ ನಾಡೇಗೌಡರು ಗೋವಾ ಹಾಗೂ ಮಹಾರಾಷ್ಟ್ರ ಸರ್ಕಾರದೊಂದಿಗೆ ಈಗಾಗಲೇ ಮಾತು ಕತೆ ನಡೆಸಿದ್ದಾರೆ. ಕೋಸ್ಟಗಾರ್ಡ್ ನವರು ಕಾರ್ಯಚರಣೆಯನ್ನು ನಡೆಸುತ್ತಿದ್ದಾರೆ. ಹೆಲಿಕಾಪ್ಟರ್ ಸರ್ವೆ ಕೂಡ ನಡೆಸಲಾಗಿದೆ. ನಾಪತ್ತೆಯಾದ ಮೀನುಗಾರರು ಅತ್ಯಂತ ಶೀಘ್ರದಲ್ಲಿ ಪತ್ತೆಯಾಗಿ ಮನೆಯವರನ್ನು ಸೇರುವಂತಾಗಲಿ ಎಂದು ಹಾರೈಸಿದರು.

ಈ ಸಂಧರ್ಭದಲ್ಲಿ ಕಾರ್ಯಧ್ಯಕ್ಷರಾದ ವಾಸುದೇವ ರಾವ್, ನಾಯಕರಾದ ಜಯ ಕುಮಾರ್ ಪರ್ಕಳ, ರೋಹಿತ್ ಕರಂಬಳ್ಳಿ ಶಶಿಧರ ಅಮೀನ್ ಮಲ್ಪೆ ಇನ್ನಿತರರು ಹಾಜರಿದ್ದರು


Spread the love