ಮೀನುಗಾರ ಮಹಿಳೆಯರಿಗೆ ಮೀನು ಒಣಗಿಸಲು 24 ಶೆಡ್ ಗಳ ನಿರ್ಮಾಣ : ಶಾಸಕ ಜೆ.ಆರ್.ಲೋಬೊ

Spread the love

ಮೀನುಗಾರ ಮಹಿಳೆಯರಿಗೆ ಮೀನು ಒಣಗಿಸಲು 24 ಶೆಡ್ ಗಳ ನಿರ್ಮಾಣ : ಶಾಸಕ ಜೆ.ಆರ್.ಲೋಬೊ

ಮಂಗಳೂರು: ಮೀನುಗಾರ ಮಹಿಳೆಯರಿಗೆ ಬೆಂಗ್ರೆಯಲ್ಲಿ 3 ನೇ ಹಂತದ ಕಾಮಗಾರಿಯಲ್ಲಿ ಮೀನು ಒಣಗಿಸಲು ಅನುಕೂಲವಾಗುವಂತೆ 24 ಶೆಡ್ ಗಳನ್ನು ನಿರ್ಮಿಸಿ ಕೊಡುವುದಾಗಿ ಶಾಸಕ ಜೆ.ಆರ್.ಲೋಬೊ ತಿಳಿಸಿದರು.

ಅವರು ಕಸಬಾ ಬೆಂಗ್ರೆಯಲ್ಲಿ ನಡೆದ ಫುಟ್ ಬಾಲ್ ಫೈನಲ್ ಪಂದ್ಯದಲ್ಲಿ ಭಾಗವಹಿಸಿ ಆಟಗಾರರಿಗೆ ಸುಭಾಷಯ ಹೇಳಿ ಮಾತನಾಡುತ್ತಿದ್ದರು.

ಈ ಶೆಡ್ ಗಳನ್ನು 47 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿ ಕೊಡುವುದಾಗಿ ಹೇಳಿ ಮೀನುಗಾರ ಮಹಿಳೆಯರು ಮೀನು ಒಣಗಿಸಲು ಸರಿಯಾದ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ. ಈ  ಉದ್ದೇಶದಿಂದ ಸರ್ಕಾರದ ಅನುದಾನ ಪಡೆದು ಈ ವ್ಯವಸ್ಥೆ ಮಾಡುವುದಾಗಿ ಹೇಳಿದರು.

ಬೆಂಗ್ರೆಯನ್ನು ನನ್ನ ಅಧಿಕಾರ ಅವಧಿಯಲ್ಲಿ ಸಮಗ್ರ ಅಭಿವೃದ್ಧಿ ಪಡಿಸುವುದಾಗಿ ಶಾಸಕ ಜೆ.ಆರ್.ಲೋಬೊ ಅವರು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಶಾಸಕರನ್ನು ಬೆಂಗ್ರೆ ಜನರ ಪರವಾಗಿ ಸನ್ಮಾನಿಸಲಾಯಿತು.


Spread the love