ಮುಕ್ತ ವಾಹಿನಿ ವತಿಯಿಂದ ಅಷ್ಟಮಿ ಪ್ರಯುಕ್ತ ಸಾಂಸ್ಕೃತಿಕ ರಸದೌತಣ “ಉಡುಪಿ ಹಬ್ಬ”

Spread the love

ಮುಕ್ತ ವಾಹಿನಿ ವತಿಯಿಂದ ಅಷ್ಟಮಿ ಪ್ರಯುಕ್ತ ಸಾಂಸ್ಕೃತಿಕ ರಸದೌತಣ “ಉಡುಪಿ ಹಬ್ಬ”

ಉಡುಪಿ: ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ನಡೆಯಲಿರುವ ಶ್ರೀಕೃಷ್ಣ ಜನ್ಮಾಷ್ಟಮಿಯ ಪರ್ವಕಾಲದಲ್ಲಿ ಮುಕ್ತವಾಹಿನಿಯ ವತಿಯಿಂದ ಹಲವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಕಲಾತ್ಮಕವಾದ ಆಕರ್ಷಕ ವೇದಿಕೆಯಲ್ಲಿ  “ಉಡುಪಿ ಹಬ್ಬ” ಎಂಬ ಒಂದು ದಿನದ ಸರಣಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.  ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಪರಿಸರದಲ್ಲಿರುವ ಹೊಟೇಲ್ ಮಥುರಾದ ಜಯಕೃಷ್ಣ ಸಭಾಂಗಣದಲ್ಲಿ ಈ ಕಾರ್ಯಕ್ರಮವು  ಸೆಪ್ಟೆಂಬರ್ 10ನೇ ಭಾನುವಾರದಂದು ಬೆಳಿಗ್ಗೆ 8 ಗಂಟೆಯಿಂದ ನಿರಂತರವಾಗಿ ನಡೆಯಲಿದೆ.

ಪುಟ್ಟ ಮಕ್ಕಳಿಗಾಗಿ “ಮುದ್ದುರಾಧೆ ಮುದ್ದು ಕೃಷ್ಣ ಸ್ಪರ್ಧೆ”ಯನ್ನು ಹಮ್ಮಿಕೊಳ್ಳಲಾಗಿದ್ದು, ಹತ್ತು ವರ್ಷಕ್ಕಿಂತ ಕೆಳಗಿನ ಮಕ್ಕಳು ಇದರಲ್ಲಿ ಭಾಗವಹಿಸಬಹುದು. ಇತರ ಕಡೆಗಳಲ್ಲಿ ನಡೆಯುವ ಶ್ರೀ ಕೃಷ್ಣ ವೇಷ ಸ್ಪರ್ಧೆಗಿಂತ ತೀರ ಭಿನ್ನವಾದ ಪರಿಕಲ್ಪನೆಯೊಂದಿಗೆ ಈ ಕಾರ್ಯಕ್ರಮ ಮೂಡಿಬರಲಿದೆ. ಬೆಳಿಗ್ಗೆ 8.00 ಗಂಟೆಯಿಂದ ಸಂಜೆ 3.00 ಗಂಟೆಯವರೆಗೆ ಈ ಸ್ಪರ್ಧೆಯು ನಡೆಯಲಿರುವುದು. ಆನಂತರ ಆಗಮಿಸಿದ ಸ್ಪರ್ಧಿಗಳಿಗೆ ಅವಕಾಶವಿಲ್ಲ. 1 ವರ್ಷದಿಂದ 5 ವರ್ಷದವರೆಗೆ ಹಾಗೂ 5 ರಿಂದ 10 ವರ್ಷದವರೆಗೆ 2 ವಿಭಾಗಳಲ್ಲಿ ಸ್ಪರ್ಧೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸ್ಪರ್ಧಾಳುಗಳ ನೋಂದಣಿಯು ಈಗಾಗಲೆ ಆರಂಭಗೊಂಡಿದ್ದು, ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಸ್ಪರ್ಧೆಯ  ವಿಜೇತ ಪುಟಾಣಿಗಳಿಗೆ ನಗದು ಮತ್ತು ಸ್ಮರಣಿಕೆಯ ಜೊತೆಗೆ ಆಕರ್ಷಕ  ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಗುವುದು.

ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಸಪ್ಟೆಂಬರ್ 8ರೊಳಗಾಗಿ ನಿಮ್ಮ ನೋಂದಾವಣೆಯನ್ನು ದೂರವಾಣಿ ಮೂಲಕ ಖಚಿತಪಡಿಸಬೇಕು ಎಂದು ಮುಕ್ತ ಟಿ.ವಿ ಯ ಕಾರ್ಯನಿರ್ವಾಹಕ ನಿರ್ದೇಶಕರಾದ ಸುರೇಶ್ ರಾವ್ ಕೊಕ್ಕಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಸಕ್ತ ಪೋಷಕರು ಈಸಂಖ್ಯೆಗಳಿಗೆ ಕರೆ ಮಾಡಿ ನಿಮ್ಮ ಮಗುವಿನ ಹೆಸರು, ವಯಸ್ಸು, ಜನ್ಮದಿನಾಂಕ, ತಂದೆ ತಾಯಿಯ ಹೆಸರು ವಿಳಾಸ ಮತ್ತು ದೂರವಾಣಿ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಿ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

ನೋಂದಾವಣಿಗಾಗಿ ಸಂಪರ್ಕಿಸಬೇಕಾದ ಸಂಖ್ಯೆ : 98453 48700.  96637 78275.  73497 95901.  96327 71626.

 ಇದಲ್ಲದೆ ಯುವ ಪ್ರತಿಭೆಗಳ ಕಂಠಸಿರಿಯಲ್ಲಿ, ಕೃಷ್ಣಾ ನೀ ಬೇಗನೆ ಬಾರೋ ಎಂಬ ಭಕ್ತಿ ಸಂಗೀತ ಕಾರ್ಯಕ್ರಮ ಸಂಜೆ 4.00 ಗಂಟೆಯ ಬಳಿಕ ನಡೆಯಲಿದ್ದು ಬಳಿಕ ಉಡುಪಿಯ ಪ್ರಸಿದ್ಧ ನೃತ್ಯ ಕಲಾವಿದರ ಸಮ್ಮಿಲನದಲ್ಲಿ, ಶ್ರೀಕೃಷ್ಣನ ಕುರಿತಾದ ವಿಶೇಷ ನೃತ್ಯ ನಮನ ಕಾರ್ಯಕ್ರಮ “ನೃತ್ಯ ನೀಲಾಂಜನ” ನಡೆಯಲಿರುವುದು .ಉಡುಪಿಯ ಪ್ರತಿಷ್ಟಿತ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಮತ್ತು ಯುವ ಕಲಾವಿದರಿಂದ ಶ್ರೀ  ಕೃಷ್ಣನ ಕುರಿತಾದ ವಿನೂತನ ನೃತ್ಯ ಪ್ರಯೋಗಳು ನಡೆಯಲಿದೆ. ಇದರ ಜೊತೆ ಸುಪ್ರಸಿದ್ಧ ನೃತ್ಯ ತಂಡಗಳ ವತಿಯಿಂದ ಅಮೋಘ ನೃತ್ಯ ಪ್ರದರ್ಶನ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮವನ್ನು ವೀಕ್ಷಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


Spread the love