ಮೃತ ವಿದ್ಯಾರ್ಥಿನಿ ಝೈಬುನ್ನೀಸಾ ಮನೆಗೆ ಮುಸ್ಲಿಮ್ ಒಕ್ಕೂಟ ನಿಯೋಗ ಸಾಂತ್ವಾನ ಭೇಟಿ

Spread the love

ಮೃತ ವಿದ್ಯಾರ್ಥಿನಿ ಝೈಬುನ್ನೀಸಾ ಮನೆಗೆ ಮುಸ್ಲಿಮ್ ಒಕ್ಕೂಟ ನಿಯೋಗ ಸಾಂತ್ವಾನ ಭೇಟಿ

ಮಂಗಳೂರು : ಇತ್ತೀಚೆಗೆ ಮಂಡ್ಯದ ಅಲ್ಪಸಂಖ್ಯಾತ ವಸತಿ ಶಾಲೆಯಲ್ಲಿ ನಿಗೂಢವಾಗಿ ಮೃತಳಾದ ವಿದ್ಯಾರ್ಥಿನಿ ಝೈಬುನ್ನೀಸಾ ಮನೆಗೆ ದ.ಕ ಜಿಲ್ಲಾ ಮುಸ್ಲಿಮ್ ಒಕ್ಕೂಟದ ನಿಯೋಗ ಭೇಟಿ ನೀಡಿ ಪೋಷಕರೊಂದಿಗೆ ಮಾತುಕತೆ ನಡೆಸಿ ಸಾಂತ್ವಾನ ಸಲ್ಲಿಸಿತು.

ವಿದ್ಯಾರ್ಥಿನಿ ನಿಗೂಢವಾಗಿ ಮೃತಪಟ್ಟಿದ್ದು, ಶಾಲೆಯ ದೈಹಿಕ ಶಿಕ್ಷಕ ರವಿ ವಿದ್ಯಾರ್ಥಿನಿಯನ್ನು ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವುದಾಗಿ ಆರೋಪಿಸಲಾಗುತ್ತಿದ್ದು, ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ತನಿಖೆ ನಡೆಸಿ ನೈಜ ವಿಷಯವನ್ನು ಬಹಿರಂಗಪಡಿಸಬೇಕು ಮತ್ತು ವಿದ್ಯಾರ್ಥಿನಿಯ ಕೊಲೆಗೆ ಕಾರಣರಾದ ಆರೋಪಿತರಿಗೆ ಕಾನೂನಿನ ಅಡಿಯಲ್ಲಿ ಶಿಕ್ಷೆಯಾಗುವಂತೆ ಸರಕಾರ ಕ್ರಮಕೈಗೊಳ್ಳಬೇಕೆಂದು ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್‍ರವರು ಸರಕಾರವನ್ನು ಒತ್ತಾಯಿಸಿದ್ದಾರೆ.

ನಿಯೋಗದಲ್ಲಿ ಸದಸ್ಯರಾದ ಮೊಹಮ್ಮದ್ ಹನೀಫ್.ಯು, ಹಮೀದ್ ಕುದ್ರೋಳಿ, ಮುಸ್ತಫಾ ಸಿ.ಎಂ., ಅಬ್ದುಲ್ ಜಲೀಲ್, ಅದ್ದಾಕ, ಅಹ್ಮದ್ ಬಾವಾ ಬಜಾಲ್, ನೌಶಾದ್ ಬಂದರ್, ವಿ.ಎಚ್ ಕರೀಮ್, ಇಬ್ರಾಹಿಂ ಮಾರಿಪಳ್ಳ, ಎಫ್.ಎ ಖಾದರ್ ಮುಂತಾದವರು ಉಪಸ್ಥಿತರಿದ್ದರು.


Spread the love