ಮೇಸ್ಟ್ರೋ, ಮೂಡಬಿದರೆ ತಂಡಗಳಿಗೆ ಜಯ

Spread the love

ಮೇಸ್ಟ್ರೋ, ಮೂಡಬಿದರೆ ತಂಡಗಳಿಗೆ ಜಯ

ಮಂಗಳೂರು: ಮೇಸ್ಟ್ರೋ ಟೈಟಾನ್‍ ತಂಡದ ಆರಂಭಿಕ ದಾಂಡಿಗ ವಿಶ್ವನಾಥನ್‍ರವರ ದಾಂಡಿನಿಂದ ಚಿಮ್ಮಿದ ಬಿರುಸಿನ ಬೌಂಡರಿ ಮತ್ತು ಭರ್ಜರಿ ಸಿಕ್ಸರ್‍ಗಳು ಕರಾವಳಿ ವಾರಿಯರ್ಸ್ ನೀಡಿದ 150 ರನ್‍ಗಳ ವಿಜಯದ ಗುರಿಯನ್ನು ಬೆನ್ನತ್ತುವಲ್ಲಿ ದಾಪುಗಾಲಾಗಿ ಬಿಟ್ಟಿತು. ಅವರು ಕೇವಲ 19 ಚೆಂಡುಗಳಲ್ಲಿ 3 ಸಿಕ್ಸರ್ 7 ಬೌಂಡರಿಗಳಲ್ಲ ಅರ್ಧ ಶತಕವನ್ನು ದಾಖಲಿಸಿ ಪೆವಿಲಿಯನಿಗೆ ಮರಳುವಾಗ ವಿಜಯ ಪಥದತ್ತದ ಚಾಲನೆಯನ್ನು ಅಕ್ಷಯ್ ಬಿ.ಯವರಿಗೆ ನೀಡಿದರು.  ಅಕ್ಷಯ್‍ರವರು ಕರಾವಳಿ ತಂಡದ ಬೌಲಿಂಗ್ ಧಾಳಿಗೆ ಯಾವುದೇ ಗೌರವವನ್ನು ನೀಡದೆ 42 ಚೆಂಡುಗಳಲ್ಲಿ ಅರ್ಧ ಶತಕ ಭಾರಿಸಿ ತಂಡಕ್ಕೆ 6 ವಿಕೇಟುಗಳ ಅಂತರದ ವಿಜಯದೊಂದಿಗೆ ಅಜೇಯರಾಗಿ ಪೆವಿಲಿಯನಿಗೆ ಮರಳಿದರು.

ಮೊದಲು ಬ್ಯಾಟಿಂಗ್ ನಡೆಸಿದ ಕರಾವಳಿ ತಂಡವು 20 ಓವರುಗಳಲ್ಲಿ 6 ವಿಕೇಟುಗಳನ್ನು ಕಳೆದುಕೊಂಡು 149 ರನ್‍ಗಳನ್ನು ದಾಖಲಿಸಿತ್ತು.  ನಿಹಾಲ್ ಉಲ್ಲಾಳರವರ ಆಕರ್ಷಕ 67 ರನ್‍ಗಳು ತಂಡದ ಇನ್ನಿಂಗ್ಸ್‍ಗೆ ಮೆರುಗನ್ನು ನೀಡಿದರೆ, ಸೋಹಿತ್‍ ಉಪಯುಕ್ತ 25 ರನ್ ಗಳ ಕಾಣಿಕೆ ನೀಡಿದರು. ಹೈದರ್ 31ಕ್ಕೆ 2, ಅಕ್ಷಯ್ 24ಕ್ಕೆ 2 ವಿಕೇಟುಗಳನ್ನು ಪಡೆದರು. ಅಕ್ಷಯ್ ಬಲ್ಲಾಳ್ ಪಂದ್ಯ ಶ್ರೇಷ್ಟರಾದರು.

ಸೂಪರ್ ಪಂದ್ಯ- ಮೂಡಬಿದರೆಗೆ ಜಯ

ಸೂಪರ್‍ಓವರಿನಲ್ಲೂ ಸಮಬಲ ಕಂಡ ಸೂಪರ್ ಪಂದ್ಯದಲ್ಲಿ ಟೀಮ್‍ ಎಲಿಗೆಂಟ್ ಮೂಡಬಿದರೆ ತಂಡವು ಗಳಿಸಿದ ಬೌಂಡರಿ-ಸಿಕ್ಸರ್‍ಗಳ (ಮೂಡಬಿದರೆ 22 ಕಂಕನಾಡಿ 20)ಆಧಾರದಲ್ಲಿಜಯವನ್ನು ದಾಖಲಿಸಿತು.  ಮೊದಲು ಬ್ಯಾಟಿಂಗ್ ನಡೆಸಿದ ಮೂಡಬಿದರೆ ತಂಡವು ವಿಕ್ರಮ್ ಪಿ.ಎಸ್ 32, ಅಸಿಫ್ 33, ಜಯಪ್ರಕಾಶ್ 18 ಇವರುಗಳ ಬ್ಯಾಟಿಂಗ್ ನೆರವಿನಿಂದ 20 ಓವರುಗಳಲ್ಲಿ 6 ವಿಕೇಟುಗಳನ್ನು ಕಳೆದುಕೊಂಡು 173 ರನ್‍ಗಳ ದೊಡ್ಡ ಮೊತ್ತವನ್ನೇ ಪೇರಿಸಿತು. ನವೀನ್‍ಎಸ್ 36ಕ್ಕೆ 2, ಕೆ.ಪಿ. ಅಪ್ಪಣ್ಣ 30ಕ್ಕೆ 2 ವಿಕೇಟುಗಳನ್ನು ಪಡೆದರು.

costal-digest-mpl

ಉತ್ತರವಾಗಿ ಕಂಕನಾಡಿ ತಂಡವು ವಿಜಯದ ಗುರಿಯತ್ತ ಕುಂಟುತ್ತಾ ಸಾಗಿ ಕೊನೆಯ ಓವರುಗಳಲ್ಲಿ ತಲಾ ಹತ್ತಕ್ಕಿಂತಲೂ ಹೆಚ್ಚು ರನ್‍ಗಳನ್ನು ಗಳಿಸಬೇಕಾದ ಒತ್ತಡಕ್ಕೆ ಸಿಲುಕಿತ್ತು.  ಬಾಲಂಗೋಚಿಗಳಾದ ಇಮ್ರಾನ್ ಮತ್ತು ಕೆ.ಪಿ. ಅಪ್ಫಣ್ಣರವರ ದಾಂಡಿನಿಂದ ಸಿಡಿದ ಬಿರುಸಿನ ಬೌಂಡರಿಗಳು ತಂಡವನ್ನು ವಿಜಯದ ಸಮೀಪಕ್ಕೆ ತಂದು ಕೊನೆಯ ಚೆಂಡಿನಲ್ಲಿ ಕೊನೆಯ ವಿಕೇಟ್ ಬಲದಲ್ಲಿ ಒಂದು ಓಟವನ್ನು ಗಳಿಸಬೇಕಾದ ರೋಮಾಂಚಕ ಕ್ಷಣ ಎದುರಾಯಿತು.  ಈ ಹಂತದಲ್ಲಿ ಇಮ್ರಾನ್‍ರವರ ಬಿರುಸಿನ ಹೊಡೆತಕ್ಕೆ ಕೈಯಿಕ್ಕಿ ಲಾಂಗ್‍ಆಫ ವಿಭಾಗದಲ್ಲಿ ಕ್ಯಾಚಿತ್ತಾಗ ತಂಡದ ಮೊತ್ತ ಸಮಬಲವನ್ನು ಕಂಡಿತು.  ನಂತರದ ಸೂಪರ್‍ ಓವರೊಂದರಲ್ಲಿ ಸಹ ಎರಡೂ ತಂಡಗಳು ತಲಾ ಎಂಟು ರನ್‍ಗಳನ್ನು ಮಾತ್ರ ಗಳಿಸಲು ಶಕ್ತವಾಗಿ ಮತ್ತೆ ಸಮಬಲ ಉಂಟಾದಾಗ ಗಳಿಸಿದ್ದ ಬೌಂಡರಿ-ಸಿಕ್ಸರ್‍ಗಳ ಅಧಾರವು ಮೂಡಬಿದರೆಯ ಪರಒಲಿದುಜಯವನ್ನು ದಾಖಲಿಸಿತು.  ಕಂಕನಾಡಿತಂಡದ ಪರವಾಗಿ ರಮೀಝ 37, ಲಾಲ್ ಸಚಿನ್ 17 ಓಟಗಳನ್ನು ಗಳಿಸಿದರು. ಮೂಡಬಿದರೆಯ ಪರವಾಗಿ ಭರತ್ 33-3, ಅಸಿಫ್ 25-3, ವೈಶಾಖ್ 34-2 ವಿಕೇಟುಗಳನ್ನು ಪಡೆದರು. ಅಸಿಫ್ ರವರು ಪಂದ್ಯಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು

kashinath-mpl

ಕೋಸ್ಟಲ್‍ತಂಡಕ್ಕೆಎರಡನೆಯಜಯ:

ಮೊದಲ ಪಂದ್ಯಗಳನ್ನು ಗೆದ್ದು ಕೊಂಡಿದ್ದ ಎರಡು ತಂಡಗಳಾದ ಕೋಸ್ಟಲ್‍ಡೈಜೆಸ್ಟ್ ಮತ್ತು ಪ್ರೆಸಿಡೆಂqಟ್ ಕುಂದಾಪುರ ತಂಡಗಳು ಮಂಗಳವಾರದ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಿ ಮೊದಲು ಬ್ಯಾಟಿಂಗ್ ನಡೆಸಿದ ಕೋಸ್ಟಲ್‍ತಂಡವು ಮಹಮ್ಮದ್‍ತಾಹ 27, ರಿಷಬ್ 33, ರೋಹಿತ್‍ಗೌಡರವರ ಬಿರುಸಿನ 59 ರನ್ ಗಳ ಸಹಾಯದಿಂದ 8 ವಿಕೇಟುಗಳ ನಷ್ಟಕ್ಕೆ 20 ಓವರುಗಳಲ್ಲಿ  157 ರನ್Uಳ ಉತ್ತಮ ಮೊತ್ತವನ್ನು ದಾಖಲಿಸಿತು. ಝಾಹೂರ್ ಫಾರೂಕಿ 37ಕ್ಕೆ 3, ಕೆ.ಸಿ. ಕಾರ್ಯಪ್ಪ 37ಕ್ಕೆ 2 ವಿಕೇಟುಗಳನ್ನು ಪಡೆದರು.

ಪ್ರೆಸಿಡೆಂಟ್ ಕುಂದಾಪುರ ತಂಡವು ತಾಹ 20ಕ್ಕೆ 2À ,ರಿತೇಶ್ 16ಕ್ಕೆ 2, ಕಾಶಿನಾಥ್ 11ಕ್ಕೆ 3 ಇವರ ಬೌಲಿಂಗ್ ಧಾಳಿ ಮತ್ತು ಕೋಸ್ಟಲ್‍ ತಂಡದ ಬಿಗು ಫಿಲ್ಡಿಂಗಿಗೆ ನಲುಗಿ 18ನೆಯ ಓವರಿನಲ್ಲಿ 119ರ ಮೊತ್ತಕ್ಕೆ ಸರ್ವ ಪತನವನ್ನುಕಂಡು 38 ರನ್‍ಗಳ ಅಂತರದ ಸೋಲನ್ನುಕಂಡಿತು. ಕಾಶಿನಾಥ್ ಪಂದ್ಯಶ್ರೇಷ್ಟ ಪ್ರಶಸ್ತಿಗೆ ಮುತ್ತಿಕ್ಕಿದರು.

ಟೈಗರ್‍ಗಳಘರ್ಜನೆಗೆ ನಲುಗಿದ ಸ್ಟ್ರೈಕರ್ಸ್

ಮೊದಲೆರಡು ಪಂದ್ಯಗಳಲ್ಲಿ ಸೋಲನ್ನು ಕಂಡಿದ್ದ ಎರಡು ತಂಡಗಳ ಮುಖಾಮುಖಿಯಲ್ಲಿ ಸುರತ್ಕಲ್ ಸ್ಟ್ರೈಕರ್ಸ್‍ತಂಡವು 20 ಓವರುಗಳಲ್ಲಿ 8 ವಿಕೇಟುಗಳನ್ನು ಕಳೆದುಕೊಂಡು 166ರ ಉತ್ತಮ ಮೊತ್ತವನ್ನು ಪೇರಿಸಿತು.  ಆರಂಭಿಕ ಝಹ್ರುದ್ದೀನ್ 29 ಚೆಂಡುಗಳಲ್ಲಿ 43,  ಕೊನೆಯಲ್ಲಿ ಘರ್ಜಿಸಿದ ಯಾಸಿರ್ ಗಳಿಸಿದ 61 ರನ್‍ಗಳು ಸೂರತ್ಕಲ್ಲಿಗೆ ಆಸರೆಯಾದವು.  ಗೋಪಾಲ ಶೆಟ್ಟಿ 18 ರನ್ ಗಳಿಸಿದರು.  ನಾಗಭರತ್ 27ಕ್ಕೆ 2, ಭರತ್, ಶಶಾಂಕ್, ಚಿರಂತ್, ರೋಹನ್‍ರವರು ತಲಾ ಒಂದೊಂದು ವಿಕೇಟುಗಳನ್ನು ಪಡೆದರು.

ಉಡುಪಿ ತಂವುನಾಗಭರತ್ 45, ಅಸಿಫ್ 43, ನವೀನ್‍ಎಂಜಿ 28, ಗುರುದೀಪ್ 17, ರೋಹನ್ 17 ಇವರು ವಳ ಬ್ಯಾಟಿಂಗ್ ನೆರವಿನಿಂದ ಕೊನೆಯ ಓವರಿನಲ್ಲಿ 5 ವಿಕೇಟುಗಳ ಅಂತರದ ಜಯವನ್ನು ದಾಖಲಿಸಿತು. ನಾಗಭರತ್ ಪಂದ್ಯ ಪುರುಷೋತ್ತಮನ ಗೌರವ ಪಡೆದರು.

ಇಂದಿನ ಪಂದ್ಯಗಳು: ಮೇಸ್ಟ್ರೋ-ರೆಡ್ ಹಾಕ್ಸ್,  ಮೂಡಬಿದ್ರೆ-ಕಾರ್ಕಳ, ಕರಾವಳಿ ಪಣಂಬೂರು- ಕಂಕನಾಡಿ ನೈಟ್‍ರೈಡರ್ಸ್ ನಡುವೆ ಜರಗಲಿವೆ.

Click here for MPL Score Sheet


Spread the love