ಮೇ 4ರಂದು ದುಬೈಯಲ್ಲಿ  ಬಸವ ಜಯಂತಿ

Spread the love

ಮೇ 4ರಂದು ದುಬೈಯಲ್ಲಿ  ಬಸವ ಜಯಂತಿ

ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ ನ ದುಬೈ ಮಹಾನಗರದ ಅಲ್ -ಸಫಾದಲ್ಲಿರುವ ಜೆ. ಎಸ್ .ಎಸ್ ಪ್ರೈವೇಟ್ ಸ್ಕೂಲ್ ಸಭಾಂಗಣದಲ್ಲಿ ಮೇ 4, 2018ರ ಶುಕ್ರವಾರ ಸಂಜೆ 3:00 ಗಂಟೆಯಿಂದ ಯು. ಎ .ಇ ಬಸವ ಸಮಿತಿ ದುಬೈ ಆಚರಿಸಲಿರುವ ‘ಬಸವ ಜಯಂತಿ -2018’ ಸಮಾರಂಭ ಪಟ್ಟದ ಶ್ರೀ ಮಲಯ ಶಾಂತ ಮುನಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು , ಶಿವಗಂಗಾ ಕ್ಷೇತ್ರ ಇವರ ದಿವ್ಯ ಸಾನಿಧ್ಯವಲ್ಲಿ ಜರಗಲಿದೆ.

ಸಮಾರಂಭದ ಮುಖ್ಯ ಅತಿಥಿಗಳಾಗಿ ಶ್ರೀ ಪೂಜ್ಯ ಶಿವಶಾಂತವೀರ ಚಿಕ್ಕೇನಕೊಪ್ಪ ಶರಣರು, ಹಾಗು ಖ್ಯಾತ ವಚನಕಾರ , ಪ್ರವಚನಕಾರ , ಜಾನಪದ ವಿದ್ವಾಂಸ ಪ್ರಸಕ್ತ ವರ್ಷದ ಪದ್ಮಶ್ರೀ ಪುರಸ್ಕೃತ ಶ್ರೀ ಇಬ್ರಾಹಿಂ ಸುತಾರ್ ರವರು ಪಾಲ್ಗೊಳ್ಳಲಿದ್ದಾರೆ.

2018 ರ ಸಾಲಿನ “ಬಸವ ಭೂಷಣ” ಪ್ರಶಸ್ತಿಯನ್ನು ಪ್ರಸಿದ್ಧ ಹಾಗು ಪ್ರತಿಭಾವಂತ ನಿರ್ದೇಶಕಿ,ನಟಿ , ಗಾಯಕಿ ಹಾಗು ಸಮಾಜಸೇವಕಿ ಪದ್ಮಶ್ರೀ ಬಿ. ಜಯಶ್ರೀ ಯವರಿಗೆ ,ಅವರು ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಪರಿಗಣಿಸಿ ಈ ಕಾರ್ಯಕ್ರಮದಲ್ಲಿ ಪ್ರದಾನಿಸಲಾಗುವುದು .

ಸ್ಥಳೀಯ ಕಲಾವಿದರ ಸಂಗೀತ ನ್ರತ್ಯಪ್ರದರ್ಶನವಲ್ಲದೆ , ತಾಯ್ನಾಡಿನಿಂದ ಬರಲಿರುವ ನೃತ್ಯಗಾರ್ತಿ ಶ್ರೀಮತಿ ನಾಗವೇಣಿ ಕುಲಕರ್ಣಿ ಹಾಗು ಹೆಸರಾಂತ ಚಲನಚಿತ್ರ ಹಾಗು ರಾಷ್ಟ್ರ ಪ್ರಶಸ್ತಿ ವಿಜೇತ ರಂಗ ಸಂಗೀತ ನಿರ್ದೇಶಕ ,ಗಾಯಕ ಶ್ರೀ ರಾಮಚಂದ್ರ ಹಡಪದ್ ಅವರು ವಿವಿಧ ಪ್ರದರ್ಶನಗಳನ್ನು ನೀಡಲಿದ್ದಾರೆ . ಅದಲ್ಲದೆ ಅನ್ನ ದಾಸೋಹ ಪ್ರಸಾದ ವಿತರಣೆಯನ್ನು ಹಮ್ಮಿಕೊಳ್ಳಲಾಗಿದೆ .

ಈ ಸಮಾರಂಭವನ್ನು ಯು. ಎ .ಇ ಬಸವ ಸಮಿತಿಯ ಪ್ರಸ್ತುತ ಅವಧಿಯ ನೇತೃತ್ವ ವಹಿಸಿರುವ ಶ್ರೀ ಸಂಗಮೇಶ ಬಿಸರಳ್ಳಿಯವರು, ಸಲಹಾ ಸಮಿತಿಯ ಸದಸ್ಯರುಗಳಾದ ಮುರುಗೇಶ್ ಗಾಜರೆ ,ಮಲ್ಲಿಕಾರ್ಜುನ ಮುಳ್ಳೂರು ,ಡಾ. ಶಿವಕುಮಾರ್ , ರುದ್ರಯ್ಯ ನವಲಿ ಹಿರೇಮಠ್ ,ಚಂದ್ರಶೇಖರ್ ಲಿಂಗದಳ್ಳಿ , ಡಾ. ಮಮತಾ ರೆಡ್ಡೇರ ,ಜಗದೀಶ್ ಲಾಳಿ ,ಸತೀಶ್ ಹಿಂಡೇರ ಹಾಗು ಕಾರ್ಯಕರ್ತರ ಸಹಯೋಗದೊಂದಿಗೆ ಆಯೋಜಿಸಿರುತ್ತಾರೆ .

ಯುನೈಟೆಡ್ ಅರಬ್ ಎಮಿರೇಟ್ಸ್ ನ ದುಬೈ ನಗರದಲ್ಲಿ ಕೇವಲ 12 ಕುಟುಂಬಗಳ ಸಮ್ಮಿಲದೊಂದಿಗೆ 2005ರಲ್ಲಿಆರಂಭಗೊಂಡ ಬಸವಸಮಿತಿ ದುಬೈ ಸಮಿತಿ ಇಂದು ಬೃಹದಾಕಾರವಾಗಿ ಬೆಳೆದು 400ಕ್ಕೂ ಮಿಕ್ಕು ಕುಟುಂಬಗಳನ್ನೊಳಗೊಂಡಿದೆ . ಬಸವ ತತ್ವ ಎತ್ತಿಹಿಡಿಯುವಿಕೆ ಹಾಗು ಸಮಾಜಮುಖಿ ಸೇವೆಗಳನ್ನು ಪರಿಗಣಿಸಿ ಪುರಸ್ಕರಿಸುವ ಯು. ಎ .ಇ ಬಸವ ಸಮಿತಿಯ ಬಸವ ಭೂಷಣ ಪ್ರಶಸ್ತಿಯನ್ನು 2016 ರಲ್ಲಿ ಡಾ . ನೀರಜ್ ಪಾಟೀಲ್ ಹಾಗು 2017ರಲ್ಲಿ ಶ್ರೀ ಶಿವಾನಂದ ಜಾಮದಾರ್ ಅವರಿಗೆ ನೀಡಿ ಗೌರವಿಸಲಾಗಿದೆ.

ಪ್ರೆಶಿಯಸ್ ಪಾರ್ಟೀಸ್ ಆಂಡ್ ಎಂಟರ್ಟೈನ್ಮೆಂಟ್ ನ ಸಹಯೋಗದೊಂದಿಗೆ ಆಯೋಜಿಸಿರುವ ಕಾರ್ಯಕ್ರಮಕ್ಕೆ ತುಂಬು ಹೃದಯದ ಸಹಕಾರದೊಂದಿಗೆ , ಯು .ಎ .ಇ ಯಲ್ಲಿ ನೆಲೆಸಿರುವ ಎಲ್ಲಾ ಕನ್ನಡಿಗರ ಉಪಸ್ಥಿತಿಯನ್ನು ಬಸವ ಸಮಿತಿ ದುಬೈ ಇದಿರು ನೋಡುತ್ತಿದೆ.


Spread the love