ಮೈಕ್ರೋ ಫೈನಾನ್ಸ್ ನಿಂದ ಪಡೆದ ಸಾಲಗಳು ಮರುಪಾವತಿಗೆ ಮನವಿ ಮನ್ನಾ ಇಲ್ಲ

Spread the love

ಮೈಕ್ರೋ ಫೈನಾನ್ಸ್ ನಿಂದ ಪಡೆದ ಸಾಲಗಳು ಮರುಪಾವತಿಗೆ ಮನವಿ ಮನ್ನಾ ಇಲ್ಲ

ಮಂಗಳೂರು : ಕರ್ನಾಟಕ ಸರ್ಕಾರ ಪ್ರಕಟಿಸಿರುವ ಋಣಮುಕ್ತ ಕಾಯ್ದೆ ವ್ಯಾಪ್ತಿಗೆ ಮೈಕ್ರೋಫೈನಾನ್ಸ್‍ನ ಸಾಲಗಳು ಬರುವುದಿಲ್ಲ ಎಂದು ಅಸೋಸಿಯೇಶನ್ ಆಫ್ ಕರ್ನಾಟಕ ಮೈಕ್ರೋಫೈನಾನ್ಸ್ ಇನ್‍ಸ್ಟಿಟ್ಯೂಶನ್ಸ್ (ಂಏಒi), ಮೈಕ್ರೋ ಫೈನಾನ್ಸ್ ಇನ್‍ಸ್ಟಿಟ್ಯೂಶನ್ಸ್ ನೆಟ್‍ವರ್ಕ್ (ಒಈIಓ) ಮತ್ತು ಮೈಕ್ರೋಫೈನಾನ್ಸ್ ಸಂಘಟನೆಗಳ ಉದ್ಯಮವಾಗಿರುವ ಸಾ-ಧನ್ ಸ್ಪಷ್ಟಪಡಿಸಿವೆ.

ಈ ಬಗ್ಗೆ ಮೂರು ಸಂಸ್ಥೆಗಳ ಪ್ರತಿನಿಧಿಗಳು ಮಾತನಾಡಿ, ಮೈಕ್ರೋಫೈನಾನ್ಸ್ ಉದ್ಯಮವು ಆರ್‍ಬಿಐ ನ ಕಾನೂನುಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಕಳೆದ ಕೆಲವು ದಿನಗಳಿಂದ ಈ ವಿಚಾರದಲ್ಲಿ ಕೆಲವು ದುರುದ್ದೇಶಪೂರ್ವಕವಾದ ಗೊಂದಲಗಳನ್ನು ಸೃಷ್ಟಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಲಗಳನ್ನು ಮನ್ನಾ ಮಾಡಲು ಬರುವುದಿಲ್ಲ ಮತ್ತು ಸಾಲ ಪಡೆದವರು ಸಕಾಲದಲ್ಲಿ ಸಾಲವನ್ನು ಮರುಪಾವತಿ ಮಾಡುವ ಅಗತ್ಯವಿದೆ ಎಂದು ಸ್ಪಷ್ಟಪಡಿಸಿವೆ.

ಒ ಈIಓ ನ ಸಿಇಒ ಹರ್ಷ್ ಶ್ರೀವಾಸ್ತವ ಅವರು ಮಾತನಾಡಿ, “ಮೈಕ್ರೋಫೈನಾನ್ಸ್ ಉದ್ಯಮವು ಆರ್ಥಿಕ ಸೇರ್ಪಡೆಯ ಒಂದು ಪ್ರಮುಖ ಸಾಧನವೆಂದು ಕೇಂದ್ರ ಸರ್ಕಾರ ಪರಿಗಣಿಸಿದೆ. ಕರ್ನಾಟಕದಲ್ಲಿ ನಾವು 26.7 ಲಕ್ಷ ಗ್ರಾಹಕರನ್ನು ಹೊಂದಿದ್ದು ಸಾಲವನ್ನು ಮನ್ನಾ ಮಾಡುವ ಬಗ್ಗೆ ಸುಳ್ಳು ಭರವಸೆಗಳನ್ನು ನಂಬದೇ, ತಾವು ಪಡೆದಿರುವ ಸಾಲವನ್ನು ಕಾಲಕಾಲಕ್ಕೆ ಮರುಪಾವತಿ ಮಾಡುವ ಮೂಲಕ ಕ್ರೆಡಿಟ್ ಬ್ಯೂರೋದಲ್ಲಿ ಉತ್ತಮ ಎನಿಸಿಕೊಳ್ಳಬೇಕು’’ ಎಂದು ಸಾಲ ಪಡೆದವರಿಗೆ ಮನವಿ ಮಾಡಿದರು.

ಮೈಕ್ರೋಫೈನಾನ್ಸ್ ಮೂಲಕ ಕಡಿಮೆ ಆದಾಯ ಇರುವ ಕುಟುಂಬಗಳಿಗೆ ಸಾಲಗಳನ್ನು ನೀಡಲಾಗುತ್ತಿದ್ದು. ಇದರಿಂದಾಗಿ ಗ್ರಾಹಕರನ್ನು ಲೇವಾದೇವಿದಾರ ಮೇಲಿನ ಅವಲಂಬನೆಯಿಂದ ಮುಕ್ತ ಮಾಡಲಾಗುತ್ತಿದೆ.

ಸಾ-ಧನ್‍ನ ಮುಖ್ಯಸ್ಥರಾದ ಪಿ.ಸತೀಶ್ ಅವರು ಮಾತನಾಡಿ, “ಕರ್ನಾಟಕವು ಆರ್ಥಿಕವಾಗಿ ಜವಾಬ್ದಾರಿಯುತವಾದ ರಾಜ್ಯವಾಗಿದೆ. ದೇಶದಲ್ಲಿ ಮೈಕ್ರೋಫೈನಾನ್ಸ್ ಕ್ಷೇತ್ರದಲ್ಲಿ ಕಡಿಮೆ ಸುಸ್ತಿದಾರರನ್ನು ಹೊಂದಿರುವ ರಾಜ್ಯ ಇದಾಗಿದೆ. ಜನರು ಸುಳ್ಳು ಸುದ್ದಿಗಳು ಅಥವಾ ವದಂತಿಗಳನ್ನು ಕೇಳಿದರೆ ಅದು ಸಾವಿರಾರು ಜನರ ಜೀವನದ ಮೇಲೆ, ಅವರ ಕ್ರೆಡಿಟ್ ಹಿನ್ನೆಲೆ ಮೇಲೆ ದುಷ್ಪರಿಣಾಮ ಬೀರುತ್ತದೆ. ರಾಜ್ಯ ಸರ್ಕಾರ ಪ್ರಕಟಿಸಿರುವ ಋಣಮುಕ್ತ ಕಾಯ್ದೆಯು ಮೈಕ್ರೋಫೈನಾನ್ಸ್‍ನಲ್ಲಿ ಪಡೆದ ಸಾಲಗಳಿಗೆ ಅನ್ವಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಸಾಲವನ್ನು ಪಡೆದಿರುವವರು ಯಾವುದೇ ವದಂತಿಗಳಿಗೆ ಕಿವಿಗೊಡದೇ ಸಾಲವನ್ನು ಮರುಪಾವತಿ ಮಾಡಬೇಕು. ಈ ಮೂಲಕ ಭವಿಷ್ಯದಲ್ಲಿ ಮತ್ತೆ ಸಾಲ ಪಡೆಯಲು ಅವಕಾಶವನ್ನು ಕಲ್ಪಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಮ್ಮ ಸದಸ್ಯರು ಆರ್ಥಿಕ ಸೇರ್ಪಡೆ ಮತ್ತು ಜವಾಬ್ದಾರಿಯುತವಾದ ಸಾಲ ಮರುಪಾವತಿ ಮಾಡುವ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ’’ ಎಂದು ತಿಳಿಸಿದರು.

ಮೈಕ್ರೋಫೈನಾನ್ಸ್ ಸಂಸ್ಥೆಗಳು ಜಾಯಿಂಟ್ ಲೆಂಡಿಂಗ್ ಮಾಡೆಲ್‍ಗಳ ಅನುಸಾರ ಸ್ಥಾಪಿತವಾಗಿದ್ದು, ಅವುಗಳ ನಿಬಂಧನೆಗಳ ಅನ್ವಯ ಕಾರ್ಯನಿರ್ವಹಿಸುತ್ತಿವೆ. ಗುಂಪು ಸಾಲಗಳನ್ನು ನೀಡುವ ಮೂಲಕ ಮಹಿಳೆಯರನ್ನು ಸಬಲರನ್ನಾಗಿ ಮಾಡಲಾಗುತ್ತಿದ್ದು, ಸುಲಭ ಕಂತುಗಳಲ್ಲಿ ಸಾಲವನ್ನು ತೀರಿಸಲು ಅನುಕೂಲವಾಗುವ ರೀತಿಯಲ್ಲಿ ಸಂಸ್ಥೆಗಳು ಮಹಿಳೆಯರಿಗೆ ಕಿರುಸಾಲಗಳನ್ನು ನೀಡುತ್ತಿವೆ. ಮಹಿಳೆಯರು ಈ ಸಾಲ ಪಡೆಯಲು ಯಾವುದೇ ಹೆಚ್ಚುವರಿ ದಾಖಲೆಗಳನ್ನು ನೀಡುವ ಅಗತ್ಯವಿರುವುದಿಲ್ಲ. ಮಹಿಳೆಯರಿಗೆ ತಮ್ಮ ಸಾಲದ ಪ್ರಮಾಣ, ತೀರುವಳಿ ಸೇರಿದಂತೆ ಮತ್ತಿತರೆ ಮಾಹಿತಿಗಳನ್ನು ಪಡೆಯಲು ಅನುಕೂಲವಾಗುವಂತೆ ಅವರಿಗೆ ಸಾಲ ಕಾರ್ಡನ್ನು ನೀಡಲಾಗುತ್ತದೆ. ಸಾಲ ಮರುಪಾವತಿಯ ಕಂತುಗಳು ವಾರ, ಪಾಕ್ಷಿಕ ಮತ್ತು ಮಾಸಿಕ ಅವಧಿಯದ್ದಾಗಿರುತ್ತವೆ. ಈ ಅವಕಾಶಗಳನ್ನು ಬಳಸಿಕೊಂಡು ಮಹಿಳೆಯರು ಸ್ವಲ್ಪಸ್ವಲ್ಪವೇ ಹಣವನ್ನು ಪಾವತಿ ಮಾಡುವ ಮೂಲಕ ತಮ್ಮ ಸಾಲವನ್ನು ತೀರಿಸಬಹುದಾಗಿದೆ.

ಸಾಲ ನೀಡುವವರಿಗೆ ಮತ್ತು ಪಡೆಯುವವರಿಗೆ ಕ್ರೆಡಿಟ್ ಬ್ಯೂರೋದಲ್ಲಿ ಶಿಸ್ತನ್ನು ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿರುತ್ತದೆ. ಈ ಮೂಲಕ ಮೈಕ್ರೋಫೈನಾನ್ಸ್ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡು ಉತ್ತಮ ಸೇವೆಯನ್ನು ನೀಡಲು ಸಾಧ್ಯವಾಗುತ್ತದೆ.

ಆರ್‍ಬಿಐ ಸೂಚಿಸಿರುವಂತೆ ಮೈಕ್ರೋಫೈನಾನ್ಸ್‍ನಲ್ಲಿ ಗ್ರಾಹಕರ ಸಮಸ್ಯೆ ಪರಿಹಾರಕ್ಕೆಂದೇ ಪ್ರತ್ಯೇಕವಾದ ಘಟಕವು ಕಾರ್ಯನಿರ್ವಹಿಸುತ್ತದೆ. ಸಾಲಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ ಸಾಲ ಪಡೆದವರು ಸಂಬಂಧಿತ ಮೈಕ್ರೋಫೈನಾನ್ಸ್‍ನ ಕೇಂದ್ರ ಕಚೇರಿಯಲ್ಲಿರುವ ಈ ಘಟಕಕ್ಕೆ ಮಾಹಿತಿ ನೀಡಬಹುದು. ಪ್ರತಿ ಸಾಲ ಕಾರ್ಡ್ (ಕ್ರೆಡಿಟ್ ಕಾರ್ಡ್)ನಲ್ಲಿ ಪರಿಹಾರ ಘಟಕದ ಸಂಪರ್ಕ ವಿವರಗಳು ಲಭ್ಯವಿವೆ. ಒಂದು ವೇಳೆ 15 ದಿನಗಳೊಳಗೆ ಸಮಸ್ಯೆ ಪರಿಹಾರವಾಗದಿದ್ದಲ್ಲಿ ಗ್ರಾಹಕರು ಇಂಡಸ್ಟ್ರಿ ಅಸೋಸಿಯೇಶನ್‍ಗಳಾದ ಂಏಒi, ಸಾ-ಧನ್ ಅಥವಾ ಒ ಈIಓ ಅನ್ನು ಸಂಪರ್ಕಿಸಬಹುದು. ಇಲ್ಲಿಯೂ ಕೂಡ 30 ದಿನಗಳೊಳಗೆ ಸಮಸ್ಯೆಗೆ ಪರಿಹಾರ ಸಿಗದಿದ್ದರೆ ಗ್ರಾಹಕರು ಆರ್‍ಬಿಐನ ಒಂಬುಡ್ಸ್‍ಮನ್‍ಗೆ ದೂರು ಸಲ್ಲಿಸಬಹುದಾಗಿದೆ. ಇದಲ್ಲದೇ, ಮಂಗಳೂರಿನಲ್ಲಿ ಶೀಘ್ರವೇ ಜಿಲ್ಲಾ ಮಟ್ಟದ ಪರಿಹಾರ ವ್ಯವಸ್ಥೆಯನ್ನು ಆರಂಭಿಸಲಾಗುತ್ತದೆ. ಇದರಿಂದ ಗ್ರಾಹಕರು ಸುಲಭವಾಗಿ ತಮ್ಮ ಸಮಸ್ಯೆಗಳು, ದೂರುಗಳಿಗೆ ಸಂಬಂಧಿಸಿದಂತೆ ಪರಿಹಾರಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.


Spread the love