ಯಕ್ಷಗಾನ, ನೃತ್ಯದ ಮೂಲಕ ಪ್ರೇಕ್ಷಕರ ಮನಗೆದ್ದ ಕರಾವಳಿಯ ಅಣ್ಣ-ತಂಗಿ

Spread the love

ಯಕ್ಷಗಾನ, ನೃತ್ಯದ ಮೂಲಕ ಪ್ರೇಕ್ಷಕರ ಮನಗೆದ್ದ ಕರಾವಳಿಯ ಅಣ್ಣ-ತಂಗಿ

ಬಂಟ್ವಾಳ: ಕರಾವಳಿಯ ಪ್ರತಿಭೆಗಳು ಇದೀಗ ರಾಜ್ಯ, ದೇಶ, ಮತ್ತು ವಿದೇಶದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ, ಕರಾವಳಿಯ ಹೆಸರನ್ನು ಸಾಂಸ್ಕøತಿಕ ಕ್ಷೇತ್ರದಲ್ಲಿ ಮಾತ್ರವಲ್ಲದೇ ಕ್ರೀಡೆ, ರಾಜಕೀಯ, ವಿಜ್ಞಾನ, ಹೀಗೆ ಅನೇಕ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಗಳು, ಪ್ರೇಕ್ಷಕರ ಮನಗೆದ್ದು ತಮ್ಮ ಊರಿಗೆ ಮತ್ತು ತಮ್ಮ ಪೋಷಕರಿಗೆ ಉತ್ತಮ ಹೆಸರನ್ನು ತಂದು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದ ಅನೇಕ ಪ್ರತಿಭೆಗಳು ಕರಾವಳಿಯಲ್ಲಿ ಗುರುತಿಸಿಕೊಂಡಿವೆ.

ಇದೀಗ ಇತಂಹ ಸಾಧನೆಯನ್ನು ಮಾಡಿ ಪ್ರೇಕ್ಷಕರ ಮನಗೆದ್ದು ತಮ್ಮ ಊರಿನ ಮತ್ತು ಪೋಷಕರ ಗೌರವವನ್ನು ಹೆಚ್ಚಿಸಿಕೊಳ್ಳಲು ಇಬ್ಬರು ಅಣ್ಣ-ತಂಗಿ ಮುಂದಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಪುಂಜಾಲಕಟ್ಟೆ ಸಮೀಪದ ಮೂರ್ಜೆಯ ರಮಾನಂದ ಹಾಗೂ ಸರಿತಾ ದಂಪತಿಗಳ ಪುತ್ರ ಕ್ರಶ್ ಕುಮಾರ್ ಹಾಗೂ ಶ್ರದ್ಧಾ ಅವರು. ಈಗಾಗಲೇ ವಿದ್ಯಾಭ್ಯಾಸವನ್ನು ಪಡೆಯುತ್ತಿರುವ ಈ ಇಬ್ಬರು ಪುಟ್ಟ ಮಕ್ಕಳು, ತಮ್ಮ ವಿದ್ಯಾಭ್ಯಾಸದ ಜೊತೆಗೆ ತಮ್ಮ ಸಣ್ಣ ವಯಸ್ಸಿನಲ್ಲಿಯೇ ಕಾಲಿಗೆ ಗೆಜ್ಜೆ ಕಟ್ಟಿ ಯಕ್ಷಾಗಾನ ಮತ್ತು ನೃತ್ಯದ ಮೂಲಕ ವೇದಿಕೆ ಏರಿ ಪ್ರೇಕ್ಷಕರ ಗಮನಸೆಳೆದು ಪ್ರಶಂಸೆಗೆ ಪಾತ್ರರಾದ ಹೆಮ್ಮೆ ಇವರದ್ದು.

ತನ್ನ ಸಣ್ಣ ವಯಸ್ಸಿನಲ್ಲಿ ಕ್ರಶ್ ಕುಮಾರ್, ನರ್ಸರಿಗೆ ಹೋಗುತ್ತಿದ್ದ ಸಮಯದಲ್ಲಿ ಪ್ರಥಮವಾಗಿ ನೃತ್ಯ ಮಾಡುವ ಮೂಲಕ ವೇದಿಕೆ ಏರಿದ್ದು. ನಂತರ ಯಾವುದೇ ಸಮಯದಲ್ಲಿಯೂ ಹಿಂದೆ ತಿರುಗಿ ನೋಡಲೇ ಇಲ್ಲ, ತನ್ನ ಮುಂದಿನ (ಲಕೆಜಿ) ತರಗತಿಯಲ್ಲಿ ಶ್ರೀಕೃಷ್ಣ ವೇಷ ಸ್ಪರ್ಧೆಯಲ್ಲಿ ಹಾಗೂ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ತನ್ನ ಪ್ರತಿಭೆಗೆ ಪ್ರೇಕ್ಷಕರಿಂದ ಉತ್ತಮ ಬೆಂಬಲವನ್ನು ಪಡೆದು. ಮುಂದೆ ತನ್ನ ಪ್ರತಿಭೆಯನ್ನು ಮುಂದುವರಿಸಲೇ ಬೇಕೆಂದು ಛಲ ಹಿಡಿದ ಕ್ರಶ್ ಕುಮಾರ್. 1 ನೇ ತರಗತಿಯಲ್ಲಿರುವ ಸಮಯದಲ್ಲಿ ತನ್ನ ತರಗತಿಯಲ್ಲಿ ನಡೆದ ನೃತ್ಯ ಸ್ಪರ್ಧೆಯಲ್ಲಿ ತರಗತಿಗೆ ಪ್ರಥಮ ಸ್ಥಾನವನ್ನು ಪಡೆದು, ನಂತರ ನಡೆದ ಶಾಲಾ ಮಟ್ಟದ ನೃತ್ಯ ಸ್ಪರ್ಧೆಯಲ್ಲಯೂ ಪ್ರಥಮವನ್ನು ಸ್ಥಾನವನ್ನು ಪಡೆದು ತನ್ನ ಶಾಲೆಗೆ ಉತ್ತಮ ಹೆಸರನ್ನು ತಂದಿರುವ ಕೀರ್ತಿ ಕ್ರಶ್ ಕುಮಾರ್‍ದ್ದು.
ಕೇವಲ ನೃತ್ಯ, ಯಕ್ಷಗಾನದಲ್ಲಿ ಮಾತ್ರ ಸಾಧನೆ ಮಾಡದೇ, ತನ್ನ ವಿದ್ಯಾಭ್ಯಾಸದಲ್ಲಿಯೂ ಅತ್ಯುತ್ತಮ ಫಲಿತಾಂಶವನ್ನು ಪಡೆದುಕೊಂಡಂತಹ ಹಿರಿಮೆ ಇತನದ್ದು, ತನ್ನ ಶಾಲೆಯಲ್ಲಿ ಶಿಕ್ಷಕರಿಗೆ ಮೆಚ್ಚಿನ ವಿದ್ಯಾರ್ಥಿಯಾಗಿ, ಎಲ್ಲರ ಮೆಚ್ಚುಗೆಯನ್ನು ಗಳಿಸಿಕೊಂಡಿದ್ದಾನೆ. ಮುಂದೆ ಕಾಸರಗೋಡಿನಲ್ಲಿ ನಡೆದ ಮಕ್ಕಳ ಧ್ವನಿ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲೆಗೆ ಉತ್ತಮ ಹೆಸರು ತರುವ ಮೂಲಕ ತನ್ನ ಶಾಲೆಯ ಗೌರವವನ್ನು ಇನ್ನಷ್ಟು ಹೆಚ್ಚಿಸಿದ್ದಾನೆ. ಹಾಗೂ ಕಾಸರಗೋಡಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈತನ ಪ್ರತಿಭೆಯನ್ನು ಗುರುತಿಸಿ “ಕಲಾರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಈ ಮೂಲಕ ತನ್ನ ಪ್ರತಿಭೆಯ ಜೊತೆಗೆ ತನ್ನ ವಿದ್ಯಾಭ್ಯಾಸದಲ್ಲಿಯೂ ಉತ್ತಮ ಸಾಧನೆಯನ್ನು ಮಾಡುತ್ತಿದ್ದಾನೆ ಈತ.
ಕ್ರಶ್ ಕುಮಾರ್ ಒಬ್ಬ ಅತ್ಯುತ್ತಮ ಸ್ತ್ರೀ ವೇಷದಾರಿ ಎಂದರೆ ಖಂಡಿತಾವಾಗಿಯೂ ತಪ್ಪು ಆಗಲಾರದು, ಹೌದು ಈತನ ಸ್ತ್ರೀ ವೇಷದ ಯಕ್ಷಗಾನ ನೃತ್ಯಕ್ಕೆ ಅನೇಕ ಹಿರಿಯ ಕಲಾವಿದರು ಕೂಡ ಬಹಳಷ್ಟು ಪ್ರಶಂಸೆಯನ್ನು ಕಾರ್ಯಕ್ರಮಗಳಲ್ಲಿ ವ್ಯಕ್ತಪಡಿಸಿದ್ದಾರೆ. ಯಕ್ಷಗಾನದ ಗೀತೆಗೆ ಸ್ತ್ರೀ ವೇಷದಾರಿಯಾಗಿ ನೃತ್ಯ ಮಾಡಿ, ಕಾರ್ಯಕ್ರಮ ಒಂದರಲ್ಲಿ ಒಬ್ಬ ಅದ್ಭುತ ಕಲಾವಿದ ಈತ ಎಂದು ಕಾರ್ಯಕ್ರಮ ಆಯೋಜಕರಿಂದ ಗೌರವವನ್ನು ಅಂದಿನ ಸಾವಿರಾರು ಪ್ರೇಕ್ಷಕರಿಂದ ವೇದಿಕೆಯಲ್ಲಿ ಪಡೆದುಕೊಂಡಿದ್ದ. ಆಗಂತ ಈತ ಯಾರ ಡಾನ್ಸ್ ಶಿಕ್ಷಕರ ಬಳಿಯೂ ಯಕ್ಷಗಾನ ನೃತ್ಯ ಕಲಿಯಲು ಹೋಗಿರಲಿಲ್ಲ. ಕೇವಲ ಯಕ್ಷಗಾನದ ವೀಡಿಯೋವನ್ನು ನೋಡಿ ಈತ ಪ್ರತಿ ದಿನವು ಆ ನೃತ್ಯವನ್ನು ಅಭ್ಯಾಸವನ್ನು ಮಾಡುತ್ತಿದ್ದ. ಅದೇ ಆತನ ಅಂದಿನ ನೃತ್ಯ ಅಭ್ಯಾಸಗಳು, ಇದೀಗ ಆತನಲ್ಲಿರುವ ಅದ್ಭುತ ಪ್ರತಿಭೆಯನ್ನು ಹೋರ ಹಾಕಿದೆ ಎಂದರೆ ತಪ್ಪಾಗಲಾರದು.
ನಂತರ ಜೆಸಿಐ ಮಡಂತ್ಯಾರು ಇದರ ವತಿಯಿಂದ ನಡೆದ ಮಕ್ಕಳ ನೃತ್ಯ ಕಾರ್ಯಕ್ರಮದಲ್ಲಿಯೂ ಯಕ್ಷಗಾನ ನೃತ್ಯದಲ್ಲಿ ಅಣ್ಣ-ತಂಗಿ ಇಬ್ಬರು ಉತ್ತಮ ಪ್ರದರ್ಶನವನ್ನು ನೀಡಿ ಕ್ರಶ ಕುಮಾರ್ ಅಂದು ಪ್ರಥಮ ಸ್ಥಾನವನ್ನು ಪಡೆದು, ತಂಗಿ ಶ್ರದ್ಧಾ ತೃತೀಯ ಸ್ಥಾನವನ್ನು ಪಡೆದು ಆ ವೇದಿಕೆಯಲ್ಲಿ ಗೌರವವನ್ನು ಪಡೆದುಕೊಂಡಿದ್ದಾರೆ. ಇನ್ನೂ ಈತನ ತಂಗಿ ಶ್ರದ್ಧಾನ ಬಗ್ಗೆ ಒಂದಿಷ್ಟು ಹೇಳಲೇಬೇಕು. ಅಣ್ಣ ಯಕ್ಷಗಾನ ನೃತ್ಯ ಮಾಡಿದರೆ, ನಾನು ನೃತ್ಯದಲ್ಲಿ ಏನು ಕಡಿಮೆ ಇಲ್ಲ ಎಂಬಂತೆ ತಂಗಿ ಶ್ರದ್ಧಾ ಕೂಡ ಸಿನಿಮಾ ಗೀತೆಗಳಿಗೆ ಅದ್ಧುತವಾಗಿ ನಟನೆ ಮಾಡುತ್ತಾಳೆ. ತನ್ನ ಸಣ್ಣ ವಯಸ್ಸಿನಲ್ಲಿಯೇ ಅನೇಕ ವೇದಿಕೆಗಳಲ್ಲಿ ನೃತ್ಯದ ಮೂಲಕ ಪೇಕ್ಷಕರ ಮನಗೆದ್ದ ಬಾಲೆ ಈಕೆ. ತನ್ನ ಮುದ್ದು ಮುಖದ ಆ ನಟನೆ ಪ್ರೇಕ್ಷಕರಲ್ಲಿ ಅದ್ಭುತ ನಗುವನ್ನು ಉಂಟು ಮಾಡುತ್ತಾದೆ. ಮಂಗಳೂರಿನ ನಮ್ಮ ಟಿವಿ ಚಾನೆಲ್ ನಲ್ಲಿ ನಡೆದ ಡಾನ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಕೂಡ ಶ್ರದ್ಧಾ ಪಡೆದು ಕೊಂಡಿದ್ದಾಳೆ.
ಇನ್ನೂ ಇವರಿಬ್ಬರೂ ಅಣ್ಣ-ತಂಗಿ ಸುಮಾರು 150ಕ್ಕೂ ಹೆಚ್ಚು ವೇದಿಕೆಗಳಲ್ಲಿ ತಮ್ಮ ಪ್ರತಿಭೆಗಳನ್ನು ಪ್ರರ್ದಶನ ಮಾಡಿದ್ದಾರೆ. ಅನೇಕ ವೇದಿಕೆಗಳಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇದೀಗ ನಾಟ್ಯ ಲಹರಿ ಎಂಬ ಡಾನ್ಸ್ ತಂಡದ ಜೊತೆಗೆ ಹೆಚ್ಚಿನ ನೃತ್ಯಭ್ಯಾಸವನ್ನು ಮಾಡುತ್ತಿರುವ ಈ ಇಬ್ಬರೂ ಅಣ್ಣ-ತಂಗಿ ಮುಂದಿನ ದಿನದಲ್ಲಿ ಕರಾವಳಿಯಲ್ಲಿ ಒಂದು ಉತ್ತಮ ಪ್ರತಿಭೆಗಳಾಗಿ ಮೂಡಿಬಾರಲಿ ಎಂದು ಶುಭ ಹಾರೈಕೆ ಮಾಡಬೇಕಾಗಿದೆ.

ರಂಜಿತ್ ಮಡಂತ್ಯಾರು


Spread the love