ಯುವಕನ ಅನುಮಾಸ್ಪದ ಸಾವು – ಸೂಕ್ತ ತನಿಖೆಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಾರದ ಗಡುವು

Spread the love

ಯುವಕನ ಅನುಮಾಸ್ಪದ ಸಾವು – ಸೂಕ್ತ ತನಿಖೆಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಾರದ ಗಡುವು

ಉಡುಪಿ: ಕೆಲವು ದಿನಗಳ ಹಿಂದೆ ನಡೆದಿದ್ದ ಯುವಕನ ಅನುಮಾನಾಸ್ಪದ ವಾಗಿ ಸಾವನಪ್ಪಿದ್ದ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೊಸೂರು ಗ್ರಾಮದ ಕುರ್ಪಾಡಿಯ ಸುರೇಶ್ ಸೇರ್ವೆಗಾರ್ ಎಂಬವರ ಮಗ ಶ್ರೇಯಸ್ ಅವರ ಮನೆಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಸೋಮವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವಾನ ಹೇಳಿದರು.

ನವೆಂಬರ್ 5 ರಂದು ನಡೆದ ಶ್ರೇಯಸ್ ಅನುಮಾನಸ್ಪದ ಸಾವಿಗೆ ಸ್ಪೋಟಕ ತಿರುವು ಸಿಕ್ಕಿದೆ.ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೊಸೂರು ಗ್ರಾಮದ ಕುರ್ಪಾಡಿಯ ಸುರೇಶ್ ಸೇರ್ವೆಗಾರ್ ಎಂಬವರ ಮಗ ಶ್ರೇಯಸ್ ಘಟನೆಯಲ್ಲಿ ಮೃತಪಟ್ಟಿದ್ದು ಸ್ಥಳೀಯ ಬಿಜೆಪಿ ಯುವಕರು ಸೇರಿಕೊಂಡು ಕೊಲೆ ಮಾಡಿದ್ದಾರೆ ಎಂದು ಯುವಕನ ತಾಯಿ ಆರೋಪಿಸಿದ್ದಾರೆ.

ನವೆಂಬರ್ 5 ರಂದು ಶ್ರೇಯಸ್ , ತನ್ನ ಸ್ನೇಹಿತ ರಾಕೇಶ್ ಮತ್ತಿತರರ ಜೊತೆಗೆ ಮಡಿಸಾಲು ಹೊಳೆಯ ಬಳಿ ಬೈಕ್ನಲ್ಲಿ ಹೋಗಿದ್ದ. ಅಲ್ಲಿಗೆ ರಾಕೇಶ್ ಸ್ನೇಹಿತರಾದ ಯೋಗೀಶ್ ಹಾಗೂ ಸದಾನಂದ ಎಂಬವರು ಸೇರಿಕೊಂಡಿದ್ದರು .ಇವರೆಲ್ಲ ಒಟ್ಟಾಗಿ ಮೀನು ಹಿಡಿಯಲು ಮಡಿಸಾಲು ಹೊಳೆಗೆ ತೋಟೆ ಹಾಕಿದ್ದು, ಮಧ್ಯಾಹ್ನ 2 ಗಂಟೆ ಸುಮಾರಿಗೆ ತೋಟೆ ಸ್ಪೋಟಗೊಂಡಿತ್ತು. ಸ್ಪೋಟದಿಂದಾಗಿ ಶ್ರೇಯಸ್ ಮೃತಪಟ್ಟಿದ್ದಾನೆ ಎಂದು ಪ್ರಾರಂಭದಲ್ಲಿ ಹೇಳಲಾಗಿತ್ತು.  ಯುವಕನನ್ನು ಸ್ಥಳೀಯ ಬಿಜೆಪಿಯ ಯುವಕರು ಹೊಳೆ ಸಮೀಪ ಕರೆದೊಯ್ದು ಕೊಲೆ ಮಾಡಿದ್ದಾರೆ ಎಂಬುದು ಮೃತನ ತಾಯಿಯ ನೇರ ಆರೋಪವಾಗಿದೆ. ನನ್ನ ಮಗನನ್ನು ಅನ್ಯಾಯವಾಗಿ ಕೊಲೆ ಮಾಡಿದ್ದಾರೆ ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ದುಃಖತಪ್ತ ತಾಯಿ ಜಿಲ್ಲಾ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೇಯಸ್ ತಾಯಿ ಶೋಭಾ ರಾಜಕೀಯವಾಗಿ ಪ್ರಮೋದ್ ಮಧ್ವರಾಜ್ ಅಭಿಮಾನಿಯಾಗಿದ್ದ ಶ್ರೇಯಸ್ ನನ್ನು ಮುಗಿಸಲು ಮೀನು ಹಿಡಿಯುವ ಘಟನೆ ಬಳಸಿಕೊಳ್ಳಲಾಗಿದೆ. ಶ್ರೇಯಸ್ ನನ್ನು ಬೇಕೆಂದೇ ನದಿಗೆ ದೂಡಿ ಕೊಲೆ ಮಾಡಲಾಗಿದೆ.ಆ ಯುವಕರು ಸ್ಥಳೀಯವಾಗಿ ಸಾಕಷ್ಟು ಕ್ರಿಮಿನಲ್ ಕೃತ್ಯದಲ್ಲಿ ತೊಡಗಿಸಿಕೊಂಡವರು.ಸೂಕ್ತ ತನಿಖೆ ಮಾಡಿದರೆ ಸತ್ಯಾಂಶ ಹೊರಬರುತ್ತದೆ ಎಂದಿದ್ದಾರೆ.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ ಈ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ.ಈ ಬಗ್ಗೆ ಸೂಕ್ತ ತನಿಖೆಯಾಗಬೇಕು.ವಾರದೊಳಗೆ ತನಿಖೆ ಮುಗಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಎಸ್ಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಇದೇ ವೇಳೆ ಮಾಜಿ ಸಚಿವ ಪ್ರಮೋದ್ ಅವರು ತಮ್ಮ ವೈಯುಕ್ತಿಕ ನೆಲೆಯಲ್ಲಿ ಶ್ರೇಯಸ್ ಕುಟುಂಬದವರಿಗೆ ಆರ್ಥಿಕ ಸಹಾಯವನ್ನು ಹಸ್ತಾಂತರಿಸಿದರು.

ಮಾಜಿ ಸಚಿವರೊಂದಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ನಗರಸಭಾ ಸದಸ್ಯ ರಮೇಶ್ ಕಾಂಚನ್, ತಾಲೂಕು ಪಂಚಾಯತ್ ಸದಸ್ಯೆ ಡಾ|ಸುನೀತಾ ಶೆಟ್ಟಿ, ಕಾಂಗ್ರೆಸ್ ನಾಯಕರಾದ ಪ್ರಶಾಂತ್ ಪೂಜಾರಿ, ನಾರಾಯಣ ಕುಂದರ್ ಹಾಗೂ ಇತರರು ಉಪಸ್ಥಿತರಿದ್ದರು.


Spread the love