ಯುವತಿಗೆ ವಂಚನೆ ಪ್ರಕರಣ – ಮಗನಿಗೆ ಪರಾರಿಯಾಗಲು ಸಹಕರಿಸಿದ್ದಕ್ಕೆ ಅಪ್ಪ ಕೂಡ ಅರೆಸ್ಟ್ , ಅರೆಸ್ಟ್ ಬೆನ್ನಲ್ಲೇ ಜಾಮೀನು

Spread the love

ಯುವತಿಗೆ ವಂಚನೆ ಪ್ರಕರಣ – ಮಗನಿಗೆ ಪರಾರಿಯಾಗಲು ಸಹಕರಿಸಿದ್ದಕ್ಕೆ ಅಪ್ಪ ಕೂಡ ಅರೆಸ್ಟ್ , ಅರೆಸ್ಟ್ ಬೆನ್ನಲ್ಲೇ ಜಾಮೀನು

ಮಂಗಳೂರು: ತನ್ನ ಸಹಪಾಠಿ ಯುವತಿಯನ್ನು ಮದುವೆ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ, ಆಕೆ ಗರ್ಭವತಿಯಾದ ಬಳಿಕ ವಿವಾಹವಾಗಲು ನಿರಾಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಆರೋಪಿ ಕೃಷ್ಣ ಜೆ ರಾವ್ ಅವರ ತಂದೆ ಬಿಜೆಪಿ ಮುಖಂಡ ಪಿ.ಜಿ.ಜಗನ್ನಿವಾಸ್ ರಾವ್ ಅವರನ್ನು ಅರೆಸ್ಟ್ ಮಾಡಿದ್ದಾರೆ.

ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿ ಬಳಿಕ ಗರ್ಭವತಿ ಮಾಡಿ ಮಗು ಕರುಣಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಹತ್ತು ದಿನಗಳಿಂದ ನಾಪತ್ತೆಯಾಗಿದ್ದ ಆರೋಪಿ ಕೃಷ್ಣ ಜೆ. ರಾವ್ (21) ನನ್ನು ಪೊಲೀಸರು ಮೈಸೂರಿನ ಟಿ ನರಸೀಪುರದಲ್ಲಿ ಬಂಧಿಸಿದ್ದಾರೆ. ಇದೀಗ ತನ್ನ ಮಗನನ್ನು ಪರಾರಿಯಾಗಲು ಸಹಕರಿಸಿದ ಆರೋಪದಡಿ ಆರೋಪಿಯ ತಂದೆ ಬಿಜೆಪಿ ಮುಖಂಡ ಪಿ.ಜಿ.ಜಗನ್ನಿವಾಸ್ ರಾವ್ ನನ್ನು ಬಂಧಿಸಲಾಗಿದೆ. ಇದೀಗ ಅಪ್ಪ ಮತ್ತು ಮಗನಿಗೆ ವೈದ್ಯಕೀಯ ತಪಾಸಣೆ ನಡೆಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಎಸ್ಪಿ ಅರುಣ್ ತಿಳಿಸಿದ್ದಾರೆ.

ಅಪ್ಪ ಮತ್ತು ಮಗನಿಗೆ ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ ಪೊಲೀಸರು ಪುತ್ತೂರಿನ ನ್ಯಾಯಾಲಯದ ಮುಂದೆ ಹಾಜರುಪಡಿಸಿದು ತಂದೆ ಜಗನ್ನಿವಾಸ ರಾವ್ ಗೆ ಜಾಮೀನು ನೀಡಿದ್ದರೆ, ಪುತ್ರನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇದರಂತೆ, ಕೃಷ್ಣ ರಾವ್ ಜೈಲು ಸೇರಿದ್ದಾನೆ.


Spread the love