ಯು.ಎ.ಇ. ದಿರಾಮ್ ತೋರಿಸಿ ವಂಚಿಸುತ್ತಿದ್ದ ಇಬ್ಬರ ಬಂಧನ

Spread the love

ಯು.ಎ.ಇ. ದಿರಾಮ್ ತೋರಿಸಿ ವಂಚಿಸುತ್ತಿದ್ದ ಇಬ್ಬರ ಬಂಧನ

ಮಂಗಳೂರು: ಯು.ಎ.ಇ. ರಾಷ್ಟ್ರದ ಕರೆನ್ಸಿಯಾದ ದಿರಮ್ ನೋಟುಗಳನ್ನು ತೋರಿಸಿ ಜನರನ್ನು ನಂಬಿಸಿ ವಂಚಿಸುವ ಉದ್ದೇಶ ಹೊಂದಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಪಶ್ಚಿಮಬಂಗಾಳದ ಹವ್ರಾ ಜಿಲ್ಲೆಯ ನಿವಾಸಿಗಳಾದ ಮೊಹಮ್ಮದ್ ಸಲೀಂ (33) ಮತ್ತು ನಸ್ರುಲ್ ಇಸ್ಲಾಂ (56) ಎಂದು ಗುರುತಿಸಲಾಗಿದೆ.

2018 ಜನವರಿ 16ರಂದು ಇಬ್ರಾಹಿಂ ಅಲೀಲ್ ಎಂಬವರಿಗೆ ಯುಎಇ ದಿರಮ್ ನೋಟುಗಳನ್ನು ನೀಡುವುದಾಗಿ ನಂಬಿಸಿ ನಗರದ ರಾಮಕಾಂತಿ ಟಾಕೀಸ್ ನ ಬಳಿ ಬರಹೇಳಿ ಇಬ್ಬರು ಅಪರಿಚಿತ ವ್ಯಕ್ತಿಗಳು ಬಂದಿದ್ದು ಸುಮಾರು 7 ಲಕ್ಷ ರೂಗಳ ನೋಟುಗಳು ಇವೆ ಎಂದು ಹಳೇ ದಿನ ಪತ್ರಿಕೆಗಳ ಬಂಡಲುಗಳಿಗೆ ಮೇಲ್ಬಾಗದಲ್ಲಿ ಏಳು ದಿರಂ ನೋಟುಗಳನ್ನು ಸುತ್ತಿ ತೋರಿಸಿ ವಂಚಿಸುವ ಸಮಯ ಇಬ್ರಾಹಿಂ ಅಲೀಲ್ ರವರಿಗೆ ಸಂಶಯಗೊಂಡು ವಿಚಾರಿಸಿದಾಗ ಆರೋಪಿಗಳು ಸ್ಥಳದಿಂದ ಸೊತ್ತು ಸಮೇತ ಪರಾರಿಯಾಗಿದ್ದು ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅದರಂತೆ ತನಿಖೆ ಆರಂಬಿಸಿದ ಪೊಲೀಸರು ಪ್ರಕರಣದ ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.

ಆರೋಪಿಗಳ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಪಿಎಸ್ಐ ಕಬ್ಬಳ ರಾಜ್ ಮತ್ತು ಸಿಬ್ಬಂದಿಗಳಾದ ಶೀನಪ್ಪ ಪೂಜಾರಿ ಸಿ.ಹೆಚ್.ಸಿ , ಮಣಿ ಸಿ.ಹೆಚ್.ಸಿ 899 , ಆಶೀತ್ ಸಿಪಿಸಿ 404 ರವರು ಭಾಗವಹಿಸಿರುತ್ತಾರೆ.


Spread the love