ರಘುಪತಿ ಭಟ್ 24 ಗಂಟೆಯೊಳಗೆ ತನ್ನ ಸ್ಪರ್ಧೆಗೆ ನಿವೃತ್ತಿ ಘೋಷಿಸಬೇಕು – ಸುನಿಲ್ ಕುಮಾರ್ ಎಚ್ಚರಿಕೆ

Spread the love

ರಘುಪತಿ ಭಟ್ 24 ಗಂಟೆಯೊಳಗೆ ತನ್ನ ಸ್ಪರ್ಧೆಗೆ ನಿವೃತ್ತಿ ಘೋಷಿಸಬೇಕು – ಸುನಿಲ್ ಕುಮಾರ್ ಎಚ್ಚರಿಕೆ

ಉಡುಪಿ: ನೈರುತ್ಯ ಪದವೀಧರ ಕ್ಷೇತ್ರ ಮಾಜಿ ಶಾಸಕ ರಘುಪತಿ ಭಟ್ ಬಂಡಾಯ ಸ್ಪರ್ಧೆಯನ್ನು  24 ಗಂಟೆಯೊಳಗೆ  ನಿವೃತ್ತಿ ಘೋಷಿಸಬೇಕು ಇಲ್ಲವಾದರೆ ನಿಮ್ಮ ಮೇಲೆ ಪಕ್ಷದ ಶಿಸ್ತು ಉಲ್ಲಂಘಿಸಿದ ಕಾರಣಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ, ಕಾರ್ಕಳ ಶಾಸಕ ಸುನಿಲ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

 ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ  ಪಕ್ಷ ವಿರೋಧಿ ಚಟುವಟಿಕೆ ಯಾರೇ  ಮಾಡಿದರೂ ಕ್ರಮ ಕೈಗೊಳ್ಳಲು ನಾವು ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮ ಅಭ್ಯರ್ಥಿಯ ಗೆಲುವಿಗೆ ನಾವು ಪರಿಶ್ರಮ ಪಡುತ್ತೇವೆ.

ಯಾರ ಬಗ್ಗೆಯೂ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಇವತ್ತು ನಾಳೆಯೊಳಗೆ ರಘುಪತಿ ಭಟ್ ನಿವೃತ್ತಿ ಆಗಬಹುದು ಎಂಬ ವಿಶ್ವಾಸವಿದೆ ಅಧಿಕೃತ ಅಭ್ಯರ್ಥಿ ವಿರುದ್ಧ ಸ್ಪರ್ಧೆ ಮಾಡಿದರೆ ಕ್ರಮ ಖಚಿತ ಎಂದರು.

ಎನ್ ಡಿ ಎ ಅಭ್ಯರ್ಥಿಗಳ ಗೆಲುವಿಗೆ ನಮ್ಮ ಪ್ರಯತ್ನ ಮಾಡಿದ್ದು, ಕಾರ್ಯಕರ್ತರನ್ನು ಸಕ್ರಿಯಗೊಳಿಸಿದ್ದೇವೆ. ಕರಾವಳಿಗೆ ಅನ್ಯಾಯವಾಗಿದೆ ಎಂಬ ವಿಚಾರ ಬಂದಾಗ ಅಭ್ಯರ್ಥಿಯ ಘೋಷಣೆಯಾದ ಮೇಲೆ ಈ ಬಗ್ಗೆ ಚರ್ಚೆ ಇಲ್ಲಪಕ್ಷದ ಹೈಕಮಾಂಡ್ ನಿರ್ಣಯ ತೆಗೆದುಕೊಂಡಿದೆ ನಾವು ಬದ್ಧರಾಗಿದ್ದೇವೆ ಕರಾವಳಿಗೆ ಆದ ಅನ್ಯಾಯವನ್ನು ಇನ್ನೆಲ್ಲಾದರೂ ಸರಿ ಮಾಡಬಹುದು ಈ ಕಾರಣಕ್ಕೆ ಪಕ್ಷಕ್ಕೆ ಮುಜುಗರ ಮಾಡಬಾರದು ಎಂದರು.


Spread the love

Leave a Reply