ರಾಜಕೀಯ ಮಹಾ ಮುತ್ಸದಿಯನ್ನು ಕಳೆದುಕೊಂಡಿದ್ದೇವೆ: ಜೆಡಿಎಸ್

Spread the love

ರಾಜಕೀಯ ಮಹಾ ಮುತ್ಸದಿಯನ್ನು ಕಳೆದುಕೊಂಡಿದ್ದೇವೆ: ಜೆಡಿಎಸ್

ದ.ಕ ಜಿಲ್ಲಾ ಜೆಡಿಎಸ್ ವತಿಯಿಂದ ಜಿಲ್ಲಾ ಕಛೇರಿಯಲ್ಲಿ ಮಾಜಿ ಕೇಂದ್ರ ಸಚಿವ ಜೊರ್ಜ್ ಫೆರ್ನಾಂಡಿಸ್ ರವರ ನಿಧನಕ್ಕೆ ಸಂತಾಪವನ್ನು ವ್ಯಕ್ತಪಡಿಸಲಾಯಿತು.  ಮಾಜಿ ಸಚಿವರಾದ ಅಮರನಾಥ್ ಶೆಟ್ಟಿಯವರು ಜನತಾ ಪಕ್ಷ ಕೇಂದ್ರದಲ್ಲಿ ಆಡಳಿತದ ಸಂಧರ್ಭದಲ್ಲಿ ಅವರ ರಾಜಕೀಯ ಕೊಡುಗೆ ಹಾಗೂ ಕೊಂಕಣ್ ರೈಲ್ವೆಯು ಅವರ ಕನಸಿನ ಕೂಸಾಗಿದ್ದು ಇಂದು ಜಿಲ್ಲೆಯ ಬೆಳವಣಿಗೆಗೆ  ಮಹತ್ವದ ಕೊಡುಗೆಯಾಗಿದೆ.  ಇಂದು ನಾವು ರಾಜಕೀಯ ಮಹಾ ಮುತದಿಯನ್ನು ಕಳೆದುಕೊಂಡಿದ್ದೇವೆಂದು ಹೇಳಿದರು.

ರಾಜ್ಯ ಉಪಾಧ್ಯಕ್ಷರಾದ ಎಂ.ಬಿ ಸದಾಶಿವ ಮಾತನಾಡಿ ತಾನು ಜೊರ್ಜ್ ಫೆರ್ನಾಂಡಿಸ್‍ರವರೊಡನೆ ಒಡನಾಡಿಯಾಗಿದ್ದು, ಅವರ ದಿಟ್ಟತನ, ವಾಕ್ ಚಾತುರ್ಯ ಮತ್ತು ಅವರ ಸೇವೆಯ ಬಗ್ಗೆ ನೆನಪಿಸಿದರು. ಜಿಲ್ಲಾಧ್ಯಕ್ಷರಾದ ಮಹಮ್ಮದ್ ಕುಂóಞÂಯವರು ಮಾತನಾಡಿ ಅವರು ಹುಟ್ಟು ಹೊರಾಟಗಾರರಾಗಿದ್ದು, ಕಾರ್ಮಿಕರ ಚಳುವಳಿ ಹಾಗೂ ಸಂಘಟನೆಗಳ ಮೂಲಕ ನಾಯಕರಾಗಿ ಗುರುತಿಸಿ ರಾಜಕೀಯಕ್ಕೆ ಪ್ರವೇಶಿಸಿದರು.  ಅವರು ರೈಲ್ವೆ ಹಾಗು ರಕ್ಷಣೆ ಸಚಿವರಾಗಿ  ನೀಡಿದ ಸೇವೆ ಅಪಾರ ಎಂದು ಹೇಳಿದರು.

ಜಿಲ್ಲಾ ಕಾರ್ಯದ್ಯಕ್ಷರಾದ  ರಾಂ ಗಣೇಶ್, ನಾಯಕರಾದ ಸುಶೀಲ್ ನೊರೊನ್ಹ, ವಸಂತ ಪೂಜಾರಿ, ರಾಮಕೃಷ್ಣ ಶೆಟ್ಟಿ, ಪ್ರಕಾಶ್ ಗೊಮ್ಸ್,ಉಪೇಂದ್ರ  ಅವರ ಬಗ್ಗೆ ಗುಣಗಾನ ಮಾಡಿದರು. ಜೆ. ಇಬ್ರಾಹಿಂ, ಇಝಾ ಬಜಾಲ್, ವಿನ್ಸೆಂಟ್ ಡಿಸೊಜ, ರಮೇಶ್, ಡ್ಯಾನಿಯಲ್, ಶೇಖರ್, ರಘುನಾಥ್, ಫ್ರಾನ್ಸಿಸ್ ಫೆರ್ನಾಂಡಿಸ್, ಅರೀಫ್ ಮುಂತಾದವರು ಉಪಸ್ಥಿತರಿದ್ದರು.


Spread the love