ರಾಜ್ಯ ಪ್ರವಾಹ ಪೀಡಿತರಿಗಾಗಿ ಉಡುಪಿ ಜಿಲ್ಲಾಡಳಿತದಿಂದ ನೆರವು ಸ್ವೀಕೃತಿ ಕೇಂದ್ರ ಸ್ಥಾಪನೆ

Spread the love

ರಾಜ್ಯ ಪ್ರವಾಹ ಪೀಡಿತರಿಗಾಗಿ ಉಡುಪಿ ಜಿಲ್ಲಾಡಳಿತದಿಂದ ನೆರವು ಸ್ವೀಕೃತಿ ಕೇಂದ್ರ ಸ್ಥಾಪನೆ

ಉಡುಪಿ: ಕರ್ನಾಟಕ ರಾಜ್ಯದ ಅನೇಕ ಜಿಲ್ಲೆಗಳು ಪ್ರವಾಹ ಪೀಡಿತವಾಗಿದ್ದು ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಅವರಿಗೆ ನೆರವು ನೀಡಲು ಸಾವಿರಾರರು ಮಂದಿ ಮುಂದಾಗಿದ್ದು ಅವರಿಗೆ   ಉಡುಪಿ ಜಿಲ್ಲಾಡಳಿತದ ವತಿಯಿಂದ ನೆರವು ಸ್ವೀಕೃತಿ ಕೇಂದ್ರವನ್ನು ಜಿಲ್ಲಾಧಿಕಾರಿಯವರ ಕಚೇರಿ ರಜಾತಾದ್ರಿ ಮಣಿಪಾಲ ಇಲ್ಲಿ ತೆರೆಯಲಾಗಿದೆ.

ಸ್ವೀಕೃತಿ ಕೇಂದ್ರದಲ್ಲಿ ಅಗಸ್ಟ್ 11 ರಿಂದ 15 ರ ವರೆಗೆ ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 7 ಗಂಟೆಯ ವರೆಗೆ ಸಾರ್ವಜನಿಕರಿಂದ ಉದಾರವಾಗಿ ನೀಡಲಾಗುವ ನೆರವನ್ನು ಸ್ವೀಕರಿಸಲಾಗುವುದು.

ಪಡಿತರ ಸಾಮಾಗ್ರಿ, ಹೊಸ ಹೊದಿಕೆ, ಈವರೆಗೆ  ಬಳಸದೆ ಇರುವ ಹೊಸ ಬಟ್ಟೆಗಳು, ಪೇಸ್ಟ್ ಬ್ರಶ್, ಸೋಪ್, ಕುಡಿಯುವ ನೀರು, ಔಷದಿ ಕಿಟ್ ಗಳು, ಚಾಪೆ, ದಿಂಬು, ಕ್ಯಾಂಡಲ್, ಸ್ಯಾನಿಟರಿ ಪ್ಯಾಡ್ ಗಳು, ಸೊಳ್ಳೆಬತ್ತಿ, ಸೊಳ್ಳೆ ಪರೆದೆ, ಮತ್ತಿತರ ಸಾಮಾಗ್ರಿಗಳನ್ನು ನೀಡಬಹುದಾಗಿದೆ. ಆದರೆ ಬಹುಬೇಗ ಕೆಟ್ಟು ಹೋಗುವ, ಸಿದ್ದಪಡಿಸಿದ ಸಾಮಾಗ್ರಿಗಳನ್ನು ಪೋರೈಸದಂತೆ ಸೂಚಿಸಲಾಗಿದೆ.

ಸಂಕಷ್ಟದಲ್ಲಿರುವವರಿಗೆ ನೆರವಾಗುವುದು ಮಾನವ ಧರ್ಮ ಹಾಗಾಗಿ ಸ್ವಯಂ ಪ್ರೇರಣೆಯಿಂದ ನೀಡುವ ದೇಣಿಗೆಯನ್ನು ಸ್ವೀಕರಿಸಲಾಗುವುದು. ಯಾವುದೇ ಮಧ್ಯವರ್ತಿಗಳು ಜಿಲ್ಲಾಡಳಿತದ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸಿ ದುರ್ಬಳಕೆ ಮಾಡುವಂತಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.

ದೇಣಿಗೆ ನೀಡುವ ಕುರಿತಂತೆ ದೂರವಾಣಿ ಸಂಖ್ಯೆ 0820-2574802, ರಾಮ್ ಮೋಹನ್ ಹೆಬ್ಬಾರ್ – 9740763595, ರವಿ ಓಜನಹಳ್ಳಿ -7411226665


Spread the love