ರಾಮಕೃಷ್ಣ ಮಿಷನ್ ಸ್ವಚ್ಚ ಮಂಗಳೂರು ಅಭಿಯಾನದ 25 ನೇ ವಾರ ವರದಿ

Spread the love

ರಾಮಕೃಷ್ಣ ಮಿಷನ್ ಸ್ವಚ್ಚ ಮಂಗಳೂರು ಅಭಿಯಾನದ 25 ನೇ ವಾರ ವರದಿ

ರಾಮಕೃಷ್ಣ ಮಿಷನ್ ಸ್ವಚ್ಚ ಮಂಗಳೂರು ಅಭಿಯಾನದ 25 ನೇ ವಾರದಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮಗಳು
285) ನಂತೂರು ವೃತ್ತ: ಟೀಮ್ ಇನ್ಸ್ಪ್‍ರೇಶನ್ ಹಾಗೂ ಅಮೃತ ಸಂಜೀವಿನಿ ತಂಡದ ಯುವಕರು ನಂತೂರು ವೃತ್ತದಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡಿದ್ದರು. ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿಯವರ ಸಮ್ಮುಖದಲ್ಲಿ ಶ್ರೀ ರಾಜಗೋಪಾಲ ರೈ ಹಾಗೂ ಶ್ರೀ ಸತೀಶ್ ಪ್ರಭು ಜಂಟಿಯಾಗಿ ಅಭಿಯಾನಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಪೋಲಿಸ್ ಅಧಿಕಾರಿ ಶ್ರೀಮದನ್ ನೇತೃತ್ವದಲ್ಲಿ ಯುವಕರು ಮೊದಲು ಬಸ್ ತಂಗುದಾಣಕ್ಕೆ ಅಂಟಿಸಿದ್ದ ಭಿತ್ತಿ ಚಿತ್ರಗಳನ್ನು ತೆಗೆದು ಶುಚಿಗೊಳಿಸಿದರು ನಂತರ ಸುಂದರವಾಗಿ ಬಣ್ಣ ಬಳಿದು ಅಂದಗೊಳಿಸಿದರು. ಮತ್ತೊಂದೆಡೆ ವೃತ್ತದ ಸುತ್ತ ಮುತ್ತಲಿನ ಪ್ರದೇಶಗಳಲ್ಲಿಕಸಪೆÇರಕೆ ಹಿಡಿದು ಬೀದಿಗಳನ್ನು ಶುಚಿಗೊಳಿಸಿದರು. ಮಿಥುನ್, ಕೀರ್ತನ ಶೆಟ್ಟಿ ಮುಂತಾದವರು ಅಭಿಯಾನದಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಸಾಹಿಲ್, ರಕ್ಷಿತ್, ಕಾರ್ತಿಕ್ ಸೇರಿದಂತೆ ನೂರಕ್ಕೂ ಅಧಿಕ ಯುವಕರು ಸ್ವಯಂ ಸ್ಫೂರ್ತಿಯಿಂದ ಸ್ವಚ್ಛತೆ ಮಾಡಿದರು.
286) ಎಬಿ ಶೆಟ್ಟಿ ವೃತ್ತ : ಹಿಂದೂ ವಾರಿಯರ್ಸ್ ತಂಡದ ವತಿಯಿಂದ ಪೆÇೀಲಿಸ್ ಆಯುಕ್ತರ ಕಚೇರಿಯ ಮುಂಭಾಗದ ರಸ್ತೆ ಹಾಗೂ ಆಸುಪಾಸಿನಲ್ಲಿ ಸ್ವಚ್ಛತಾ ಕಾರ್ಯಕ್ರಮ ಜರುಗಿತು. ಸ್ವಚ್ಛ ಮಂಗಳೂರು ಅಭಿಯಾನದ ಮುಖ್ಯ ಸಂಯೋಜಕರಾದ ಶ್ರೀ ಉಮಾನಾಥ್ ಕೋಟೆಕಾರ್ ಹಾಗೂ ಶ್ರೀ ಯೋಗಿಶ್ ಕಾಯರ್ತಡ್ಕ ಜಂಟಿಯಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪೆÇೀಲಿಸ್ ವರಿಷ್ಠಾಧಿಕಾರಿ ಕಾರ್ಯಾಲಯದ ಮುಖ್ಯದ್ವಾರದಿಂದ ಪ್ರಾರಂಭಿಸಿ ಸ್ಟೇಟ್ ಬ್ಯಾಂಕ್ ವರೆಗಿನ ರಸ್ತೆ, ಫುಟ್ಪಾಥ್ ಹಾಗೂ ಮಾರ್ಗ ವಿಭಾಜಕಗಳನ್ನು ಶುಚಿಗೊಳಿಸಿದರು. ವಿದ್ಯುತ್ ದೀಪದ ಕಂಬಗಳಿಗೆ ಹಾಕಿದ್ದ ಹಳೆಯ ಪೆÇೀಸ್ಟರ್ ಕಿತ್ತು ಸ್ವಚ್ಛಗೊಳಿಸಿದರು. ಶ್ರೀನಿವಾಸ ಸರಪಾಡಿ, ಗಣೇಶ ಪಾಂಗಳ, ಸುಮಾ ಸೇರಿದಂತೆ ವಾರಿಯರ್ಸ್ ತಂಡ ಸ್ವಚ್ಛತಾ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿತ್ತು.

287) ಮುಳಿಹಿತ್ಲು: ಶ್ರೀ ಅಂಬಾಮಹೇಶ್ವರಿ ಭಜನಾ ಮಂಡಳಿಯ ಸದಸ್ಯರಿಂದ ಮುಳಿಹಿತ್ಲು ಟೈಲರಿ ರಸ್ತೆಯಲ್ಲಿ ಸ್ವಚ್ಛತೆಯನ್ನು ಕೈಗೊಳ್ಳಲಾಯಿತು. ಶ್ರೀ ಪ್ರಕಾಶ್ ಶೆಟ್ಟಿ ಕಾರ್ಯಕ್ರಮವನ್ನು ಶುಭಾರಂಭಗೊಳಿಸಿದರು. ಈ ಹಿಂದೆ ಕಸ ತ್ಯಾಜ್ಯ ಹಾಕಲಾಗುತ್ತಿದ್ದ ಸ್ಥಳವನ್ನು ಶ್ರಮವಹಿಸಿ ಪುಟ್ಟ ಉದ್ಯಾನವನ್ನಾಗಿ ರೂಪಿಸಲಾಗಿದೆ. ಇಂದು ಅವೆರಡನ್ನೂ ಸ್ವಚ್ಚಗೊಳಿಸಿ ನಿರ್ವಹಣೆ ಮಾಡಲಾಯಿತು. ಅಲ್ಲದೇ ಟೈಲರಿ ರಸ್ತೆ ಹಾಗೂ ತೋಡುಗಳನ್ನು ಸ್ವಚ್ಛಗೊಳಿಸಲಾಯಿತು. ಬೋಳಾರ ಮುಳಿಹಿತ್ಲು ರಸ್ತೆಯೊಂದರಲ್ಲಿ ಕಸತ್ಯಾಜ್ಯ ಹಾಕಲಾಗುತ್ತಿದ್ದ ಸ್ಥಳವನ್ನು ಕಳೆದ ಮೂರುವಾರಗಳಿಂದ ಶುಚಿಗೊಳಿಸಲಾಗಿತ್ತು ಪರಿಣಾಮವಾಗಿ ತ್ಯಾಜ್ಯ ಬೀಳುವುದು ನಿಂತಿತು. ಇಂದು ಆ ಜಾಗದಲ್ಲಿ ಮಣ್ಣು ತುಂಬಿಸಿ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಲಾಯಿತು. ಶ್ರೀ ಕಾರ್ತಿಕ್, ಶ್ರೀ ಭುಜಂಗ್ ಶೆಟ್ಟಿ ಹಾಗೂ ಶ್ರೀ ಕೂಸಪ್ಪ ಮತ್ತಿತರರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡರು.
288) ಅತ್ತಾವರ : ಶ್ರೀಚಕ್ರಪಾಣಿ ದೇವಸ್ಥಾನದ ಆಡಳಿತ ಮಂಡಳಿಯ ಸಹಯೋಗದಲ್ಲಿ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ದೇವಳದ ಒಳಾಂಗಣ, ಹೊರಾಂಗಣಗಳನ್ನು ಶುಚಿಗೊಳಿಸಲಾಯಿತು. ದೇವಸ್ಥಾನದ ಕೆರೆಯನ್ನು ಶುಚಿಗೊಳಿಸಿ, ಹೊರಾವರಣದಲ್ಲಿ ಬೆಳೆದಿದ್ದ ಹುಲ್ಲು ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಲಾಯಿತು. ಶ್ರೀಪತಂಜಲಿ ಯೋಗ ಸಂಸ್ಥೆ, ಎಂ ವಿ ಫ್ರೆಂಡ್ಸ್ ಸೇರಿದಂತೆ ಹಲವು ಸಂಘಸಂಸ್ಥೆಗಳು ಸ್ವಚ್ಛತಾ ಕೈಂಕರ್ಯದಲ್ಲಿ ಕೈಜೋಡಿಸಿದವು. ಸುಮಾರು ನೂರಕ್ಕೂ ಅಧಿಕ ಜನ ಕಾರ್ಯಕರ್ತರು ಸುಮಾರು ಎರಡುಗಂಟೆಗಳ ಕಾಲ ಸೇವಾ ಕೈಂಕರ್ಯ ಮಾಡಿದರು.
289) ಕೆಪಿಟಿ: ಕರ್ನಾಟಕ ಪಾಲಿಟಿಕ್ನಿಕ್ ವಿದ್ಯಾರ್ಥಿಗಳಿಂದ ರಾಷ್ಟ್ರೀಯ ಹೆದ್ದಾರಿ ಹಾಗೂ ಕಾಲೇಜಿನ ಮುಂಭಾಗದಲ್ಲಿ ಸ್ವಚ್ಛತಾ ಅಭಿಯಾನ ಜರುಗಿತು. ಸತತವಾಗಿ 7 ನೇ ವಾರದ ಅಭಿಯಾನವನ್ನು ಪ್ರತೀಕ್ಷಾ ಹಾಗೂ ರಿತೇಶ್ ಆರಂಭಗೊಳಿಸಿದರು. ಮೊದಲಿಗೆ ಹೆದ್ದಾರಿ ಹಾಗು ಪಕ್ಕದಲ್ಲಿರುವ ಕಾಲುದಾರಿಯನ್ನು ಸ್ವಚ್ಛಗೊಳಿಸಿ, ಬದಿಯ ಹುಲ್ಲು ಹಾಗೂ ಕಸವನ್ನು ತೆಗೆದು ಸ್ವಚ್ಛಗೊಳಿಸಿದರು. ಮತ್ತೊಂದು ತಂಡ ಪಾಲಿಟೆಕ್ನಿಕ್ ಮುಂಭಾಗದ ವಿದ್ಯುತ್ ದೀಪಗಳಿಗೆ ತೂಗುಹಾಕಿದ್ದ ಪೋಸ್ಟರ್ ಬ್ಯಾನರ್ ಕಿತ್ತು ಶುಚಿಗೊಳಿಸಿದರು. ನಂತರ ರಸ್ತೆ ಹಾಗೂ ಪುಟ್ ಪಾಥ್ ಗುಡಿಸಿ ಸ್ವಚ್ಛಗೊಳಿಸಿದರು. ರಾಜೇಂದ್ರ ಹಾಗೂ ಅಂಕುಶಕುಮಾರ ಹೂಡೆ ಅಭಿಯಾನವನ್ನು ಸಂಘಟಿಸಿದರು.
290) ಚಿಲಿಂಬಿ: ಹಿಂದುಳಿದ ವರ್ಗಗಳ ವಿದ್ಯಾರ್ಥಿನಿ ನಿಲಯದ ವಿದ್ಯಾರ್ಥಿಗಳಿಂದ ಚಿಲಿಂಬಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಶ್ರೀ ಕೆ ವಿ ಸತ್ಯನಾರಾಯಣ ಹಾಗೂ ಶ್ರೀ ಮೆಹಬೂಬ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಚಿಲಿಂಬಿ ಶಾರದಾ ನಿಕೇತನದ ಸುತ್ತಮುತ್ತ ಹಾಗೂ ಮುಖ್ಯರಸ್ತೆ ಹಾಗೂ ಕಾಲುದಾರಿಯನ್ನು ಶುಚಿಗೊಳಿಸಲಾಯಿತು. ಅಲ್ಲದೇ ವಿದ್ಯಾರ್ಥಿನಿಯರು ಚಿಲಿಂಬಿ ಪರಿಸರದ ಮನೆಗಳಿಗೆ ತೆರಳಿ ಕರಪತ್ರ ನೀಡಿ ಸ್ವಚ್ಛತೆಯ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಶ್ರೀ ಸುಬ್ರಾಯ ಭಟ್ ಅಭಿಯಾನವನ್ನು ಸಂಯೋಜಿಸಿದರು.
291) ಕಾಟಿಪಳ್ಳ: ಜೆಸಿಆಯ್ ಗಣೇಶಪುರದ ಸದಸ್ಯರಿಂದ ಗಣೇಶಪುರದಲ್ಲಿ ಸ್ವಚ್ಛತಾ ಅಭಿಯಾನ ಜರುಗಿತು. ಶ್ರೀ ಪ್ರಕಾಶ್ ಸಾಲ್ಯಾನ್ ಹಾಗೂ ವಿಜಯಾ ಬಾರ್ಕೂರ್ ಅಭಿಯಾನಕ್ಕೆ ಹಸಿರು ನಿಶಾನೆ ತೋರಿಸಿದರು. ಗಣೇಶಪುರ ವೃತ್ತ ಹಾಗೂ ಮಂಗಳಪೇಟೆಯ ಸುತ್ತಮುತ್ತ ಸ್ವಚ್ಛತಾ ಕಾರ್ಯ ನಡೆಯಿತು. ಜೊತೆಗೆ ಪೋಸ್ಟ್ ಆಫೀಸ್ ಆವರಣ ಗೋಡೆ ಹಾಗೂ ಮಾರ್ಗ ವಿಭಾಜಕಗಳನ್ನು ಶುಚಿಗೊಳಿಸಿ ಬಣ್ಣ ಬಳಿದು ಅಂದಗೊಳಿಸಲಾಯಿತು. ಶ್ರೀ ಶ್ರೀಶ ಕರ್ಮರನ್, ಶ್ರೀಮತಿ ವನಿತಾ ಅಂಚನ್, ಪ್ರಿಯಾ ಮತ್ತಿತರರು ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದರು. ಈ ಅಭಿಯಾನಗಳಿಗೆ ಎಂಆರ್‍ಪಿಎಲ್ ಹಾಗೂ ನಿಟ್ಟೆ ವಿದ್ಯಾಸಂಸ್ಥೆ ಪ್ರಾಯೋಜಕತ್ವ ನೀಡಿ ಪ್ರೋರೀತ್ಸಾಹಿಸುತ್ತಿವೆ.


Spread the love